ಬ್ರೇಕಿಂಗ್ ನ್ಯೂಸ್
06-01-21 02:12 pm Mangalore Correspondent ಕರಾವಳಿ
ಬಂಟ್ವಾಳ, ಜ.6: ಮಾಸ್ ಬೇಸ್ಡ್ ಪಕ್ಷ ಎನ್ನುವ ಹಣೆಪಟ್ಟಿಯನ್ನು ದೂರವಾಗಿಸಿ, ಕೇಡರ್ ಬೇಸ್ಡ್ ಪಕ್ಷವಾಗಿಸಲು ಪಣ ತೊಟ್ಟಿದ್ದೇವೆ. ಕಾರ್ಯಕರ್ತರ ಧ್ವನಿಯೇ ಅಧ್ಯಕ್ಷರ ಧ್ವನಿಯಾಗಬೇಕು. ಅಧ್ಯಕ್ಷರ ಧ್ವನಿ ಕಾರ್ಯಕರ್ತರದ್ದು ಆಗಬಾರದು. ಈ ನಿಟ್ಟಿನಲ್ಲಿ ಪಕ್ಷದ ತಳಮಟ್ಟದ ಕಾರ್ಯಕರ್ತರ ಧ್ವನಿ ಆಲಿಸಲು ಸಮಾವೇಶ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರ ಸಭೆಯನ್ನು ಕರೆಯಲಾಗಿದ್ದು, ಸಭೆಗೂ ಮುನ್ನ ಮಾಧ್ಯಮದ ಜೊತೆ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಭೂಮಿ ಬಹಳ ಪವಿತ್ರವಾಗಿದೆ. ಈ ಭೂಮಿ ದೇಶಕ್ಕೆ ಸಂಸ್ಕೃತಿ ಕೊಟ್ಟಿದೆ, ವಿದ್ಯಾದಾನದ ಜೊತೆಗೆ ಆರ್ಥಿಕ ಶಕ್ತಿಯನ್ನೂ ಕೊಟ್ಟಿದೆ. ಇಂಥ ಭೂಮಿಯ ಜನರು ಯಾರಿಗೆ ಮತ ನೀಡುತ್ತಾರೋ ಅವರು ಅಧಿಕಾರಕ್ಕೇರುತ್ತಾರೆ ಎನ್ನುವುದು ಹಲವು ಬಾರಿ ನೋಡಿದ್ದೇವೆ. ಹೀಗಾಗಿ ಇದೇ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿಸಲು, ತಳಮಟ್ಟದಿಂದ ಗಟ್ಟಿಗೊಳಿಸಲು ಸಂಕಲ್ಪ ತೊಡುತ್ತಿದ್ದೇವೆ ಎಂದು ಹೇಳಿದರು.
ಮೈಸೂರು ವಿಭಾಗ ಮಟ್ಟದ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿದ್ದು, ಎಲ್ಲರಿಗೂ ಮಾತನಾಡಲು ಅವಕಾಶ ಕೊಡುತ್ತೇವೆ. ಸಂಜೆ ವೇಳೆಗೆ ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದು ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ರಾಜಕಾರಣಕ್ಕಾಗಿ ಗೋಹತ್ಯೆ ಕಾನೂನು
ಇದೇ ವೇಳೆ, ಗೋಹತ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಆ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ರಾಜಕಾರಣಕ್ಕೋಸ್ಕರ ಹೊಸತನ್ನು ಕಾನೂನು ತರುತ್ತಿದ್ದಾರೆ ಅಷ್ಟೇ. ಇದರ ಅವಶ್ಯಕತೆ ಇರಲಿಲ್ಲ. ನಮ್ಮ ಎಲ್ಲ ಧರ್ಮೀಯರು ಗೋವಿಗೆ, ಗೋಮಾತೆಗೆ ಗೌರವ ಕೊಡುವುದು ಸಂಸ್ಕೃತಿ. ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಅಭ್ಯಾಸವನ್ನು ಹೇಳಿದ್ದಾರೆ ಅಷ್ಟೇ. ಗೋಹತ್ಯೆ ನಿಷೇಧ ಕಾನೂನು 1964ರಲ್ಲೇ ಇದೆ. ಇಡೀ ದೇಶಕ್ಕೆ ಅನ್ವಯಿಸಿ ಕಾನೂನು ತರಲಾಗಿದೆ. ಈಗ ವಿಶೇಷವಾಗಿ ಗೋವಿನ ರಕ್ಷಣೆ ಆಗಬೇಕಿದ್ದರೆ ಗೋಮಾಂಸ ರಫ್ತನ್ನು ಬ್ಯಾನ್ ಮಾಡಲಿ. ಪ್ರತಿಯೊಬ್ಬ ರೈತನಿಗೂ 25ರಿಂದ 50 ಸಾವಿರ ರೂ. ಪರಿಹಾರ ಧನ ನೀಡಬೇಕು, ಬ್ರಾಹ್ಮಣರು, ಬಂಟರು, ಬಿಲ್ಲವರು, ಹಿಂದುಳಿದ ವರ್ಗದವರು ಹೀಗೆ ಎಲ್ಲರೂ ಗೋವನ್ನು ಸಾಕುತ್ತಾರೆ. ಸರಕಾರ ಈ ಬಗ್ಗೆ ಸೂಕ್ತ ಪರಿಹಾರ ಧನವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.
Video:
Karnataka Pradesh Congress Committee (KPCC) president, D K Shivakumar, said that KPCC has declared this year as the year of organizing and struggles. "We will fight to get justice for constituency level issues. We have also decided to visit 100 to 150 constituencies where Congress candidates lost the elections to understand what went wrong. KPCC will become the voice for the issues that may be raised by the block Congress activists," he said.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm