ಬ್ರೇಕಿಂಗ್ ನ್ಯೂಸ್
05-01-21 04:15 pm Mangalore Correspondent ಕರಾವಳಿ
ಮಂಗಳೂರು, ಜ.5: ನಗರ ಹೊರವಲಯದ ಕೊಣಾಜೆ ಠಾಣೆ ವ್ಯಾಪ್ತಿಯ ಮಂಜನಾಡಿ ಬಳಿಯ ಆರಂಗಡಿ ಎಂಬಲ್ಲಿ ಕಾಗೆಗಳು ಗುಂಪಾಗಿ ಸತ್ತು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಗುಡ್ಡ ಪ್ರದೇಶದಲ್ಲಿ ಹಲವಾರು ಕಾಗೆಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಒಂದೇ ಕಡೆ ಆರು ಕಾಗೆಗಳು ಸತ್ತು ಬಿದ್ದಿವೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಇಂಥದ್ದೇ ಆಗಿತ್ತು...!
ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ನೂರಾರು ಕಾಗೆಗಳು ಗುಂಪು ಗುಂಪಾಗಿ ಸತ್ತು ಬಿದ್ದಿರುವುದನ್ನು ಪತ್ತೆ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಭೋಪಾಲ್, ಇಂಧೋರ್, ಮಂಡ್ಸೌರ್ ಜಿಲ್ಲೆಯ ಹಲವೆಡೆ ಇಂಥ ವಿದ್ಯಮಾನಗಳು ಕಂಡುಬಂದಿದ್ದವು. ಈ ಬಗ್ಗೆ ಇನ್ನೂ ಪರೀಕ್ಷೆ , ಪ್ರಯೋಗ ನಡೆಯುತ್ತಿದೆ. ಮೇಲ್ನೋಟಕ್ಕೆ ಹಕ್ಕಿ ಜ್ವರ ಎನ್ನಲಾಗಿತ್ತು. ಆದರೆ, ಯಾವ ರೀತಿಯ ಜ್ವರ ಎಂದು ತಜ್ಞರು ದೃಢಪಡಿಸಿಲ್ಲ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕಾಗೆಗಳು ಸತ್ತಿರುವ ವಿದ್ಯಮಾನ ಕಂಡುಬಂದಿದ್ದು ಎಚ್ಚರಿಕೆ ಸಂದೇಶ ರವಾನಿಸಿದೆ. ಕಾಗೆ ಸತ್ತಿರುವ ಪ್ರಕರಣ ಹಿನ್ನೆಲೆ ಮಧ್ಯಪ್ರದೇಶ ಸರಕಾರ ಎಲರ್ಟ್ ಘೋಷಣೆ ಮಾಡಿದೆ.
ಸಾಮಾನ್ಯ ಹಕ್ಕಿಜ್ವರದಲ್ಲಿ ಕಾಗೆಗಳು ಸತ್ತು ಬೀಳುವುದು ಕಡಿಮೆ. ಈ ಹಿಂದೆ ಕೇರಳದಲ್ಲಿ ಹಕ್ಕಿಜ್ವರ ಕಂಡುಬಂದ ವೇಳೆ ಸಾವಿರಾರು ಕೋಳಿಗಳನ್ನು ಕೊಲ್ಲಲಾಗಿತ್ತು. ಆದರೆ, ಈಗ ದಿಢೀರ್ ಆಗಿ ಕಾಗೆಗಳು ಸತ್ತಿರುವ ಪ್ರಕರಣ ಕರಾವಳಿಯಲ್ಲಿ ಕಂಡುಬಂದಿದ್ದು ಆಘಾತ ಮೂಡಿಸಿದೆ. ಇತರೇ ಹಕ್ಕಿಗಳಿಗಿಂತ ವಿಭಿನ್ನ ಜಾತಿಯ ಕಾಗೆಗಳು ಎಲ್ಲವನ್ನೂ ತಿನ್ನುತ್ತವೆ. ಕೊಳೆತು ಬಿದ್ದ ವಸ್ತುಗಳನ್ನು ತಿಂದು ಪರಿಸರ ಸ್ಚಚ್ಚಗೊಳಿಸುವ ಕಾಗೆಗಳಿಗೇ ಹೊಸ ರೋಗ ತಗಲಿದ್ಯಾ ಎನ್ನುವ ಆತಂಕ, ಕುತೂಹಲ ಉಂಟಾಗಿದೆ.
Bird Flu Suspected in Mangalore as Group of Crows die in Manjanady. A bird flu alert has been sounded in Rajasthan after the presence of the dreaded virus was confirmed in dead crows in Jhalawar and more avian deaths were reported in other districts, including Jaipur.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm