ಬ್ರೇಕಿಂಗ್ ನ್ಯೂಸ್
04-01-21 09:05 pm Mangaluru Correspondant ಕರಾವಳಿ
Photo credits : RPTS
ಮಂಗಳೂರು, ಜ.4: ಪಡೀಲ್ ಬಳಿಯ ಫೈಸಲ್ ನಗರದಲ್ಲಿ ಏಕ್ಟಿವಾ ವಾಹನದಲ್ಲಿ ಸಾಗುತ್ತಿದ್ದ ಸವಾರರಿಬ್ಬರು ರಸ್ತೆ ಬದಿಯ ಬಾವಿಗೆ ಬಿದ್ದು ದುರಂತ ಸಂಭವಿಸಿದೆ.
ಸಂಜೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಫೈಸಲ್ ನಗರದ ಏರು ಹಾದಿಯ ರಸ್ತೆಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯಿದ್ದ ಬಾವಿಗೆ ಉರುಳಿ ಬಿದ್ದಿದೆ. ಕಾಂಕ್ರೀಟ್ ರಸ್ತೆಯಾಗಿದ್ದು ರಸ್ತೆ ಬದಿಗೆ ಇಳಿಯುವಷ್ಟರಲ್ಲಿ ಸ್ಕಿಡ್ ಆಗಿ ಏಕ್ಟಿವಾ ಉರುಳಿ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕ್ಟಿವಾ ವಾಹನ ರಸ್ತೆ ಬದಿಯಲ್ಲಿ ಉಳಿದುಕೊಂಡಿದ್ದರೆ, ಅದರಲ್ಲಿದ್ದ ಇಬ್ಬರು ಸವಾರರು ಬಾವಿಗೆ ಉರುಳಿ ಬಿದ್ದಿದ್ದಾರೆ.
ಘಟನೆ ನಡೆದಿರುವ ಪ್ರದೇಶದಲ್ಲಿ ಕತ್ತಲು ಕವಿದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಬೀದಿ ದೀಪ ಇಲ್ಲದ ರಸ್ತೆ ಅದಾಗಿದ್ದು ಇತ್ತೀಚೆಗಷ್ಟೇ ಕಾಂಕ್ರೀಟ್ ಆಗಿತ್ತು. ರಸ್ತೆ ಬದಿಯಲ್ಲೇ ಬಾವಿ ಇದ್ದು ಅದಕ್ಕೆ ಆವರಣ ಗೋಡೆ ಇರಲಿಲ್ಲ. ರಸ್ತೆ ಬದಿ ಅಪಾಯಕಾರಿ ಜಾಗ ಆಗಿದ್ದರೂ ತಡೆಗೋಡೆ ಮಾಡಿರಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಅದೇ ದಾರಿಯಲ್ಲಿ ಬಂದವರು ಯಾರೋ ಏಕ್ಟಿವಾ ಗಮನಿಸಿ, ಬಾವಿಗೆ ಇಣುಕಿದಾಗ ನೀರಿನಲ್ಲಿ ಯುವಕರು ಇರುವುದು ಪತ್ತೆಯಾಗಿದೆ. ಆನಂತರ ಸ್ಥಳೀಯರು ಸೇರಿ ಒಬ್ಬನನ್ನು ರಕ್ಷಣೆ ಮಾಡಿದ್ದು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಒಯ್ದಿದ್ದಾರೆ. ಇನ್ನೊಬ್ಬನ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಂಟು ಗಂಟೆ ಸುಮಾರಿಗೆ ಅಗ್ನಿಶಾಮಕ ದಳ ಆಗಮಿಸಿದೆ. ಅದಕ್ಕೂ ಮುನ್ನ ಲೈಟ್ ಇಲ್ಲದೆ ಸ್ಥಳೀಯರು ಮೊಬೈಲ್ ಬೆಳಕಿನಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ನೀರಿಗೆ ಬಿದ್ದವರ ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ಪೊಲೀಸರು ಮತ್ತು ನೂರಾರು ಮಂದಿ ಸೇರಿದ್ದಾರೆ.
Breaking Update: ಆ್ಯಕ್ಟಿವಾ ನಿಯಂತ್ರಣ ತಪ್ಪಿ ಪಲ್ಟಿ ; ಸವಾರ ಬಾವಿಗೆ ಬಿದ್ದು ಸಾವು !
Two Wheeler Active fell into well after rider lost control and got slipped in FaizalNagar, Padil, Mangalore. The Fire brigade personals rushed to the spot and have rescued two persons.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
21-12-25 11:04 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
21-12-25 09:36 pm
Mangalore Correspondent
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm
Minor Girl Sexually Assaulted in Puttu: ಜೇನು...
21-12-25 01:18 pm
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am