ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

17.5 ಲಕ್ಷ ಮೌಲ್ಯದ 175 ಕೇಜಿ ಗಾಂಜಾ ಪತ್ತೆ ; ಮೂವರ ಸೆರೆ - ಅಂತಾರಾಜ್ಯ ಜಾಲ ಬಯಲು

11-08-20 02:47 pm       Mangalore Reporter   ಕರಾವಳಿ

ಪುತ್ತೂರು ನಗರ ಠಾಣಾ ಪೊಲೀಸರು ಬೃಹತ್ ಗಾಂಜಾ ಅಕ್ರಮ ಜಾಲವನ್ನು ಭೇದಿಸಿದ್ದಾರೆ.‌ ಕೇರಳದಿಂದ ಕರ್ನಾಟಕಕ್ಕೆ ತರಲಾಗುತ್ತಿದ್ದ 17.5 ಲಕ್ಷ ಮೌಲ್ಯದ 175 ಕೇಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾರೆ. 

ಮಂಗಳೂರು, ಆಗಸ್ಟ್ 11: ಪುತ್ತೂರು ನಗರ ಠಾಣಾ ಪೊಲೀಸರು ಬೃಹತ್ ಗಾಂಜಾ ಅಕ್ರಮ ಜಾಲವನ್ನು ಭೇದಿಸಿದ್ದಾರೆ.‌ ಕೇರಳದಿಂದ ಕರ್ನಾಟಕಕ್ಕೆ ತರಲಾಗುತ್ತಿದ್ದ 17.5 ಲಕ್ಷ ಮೌಲ್ಯದ 175 ಕೇಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾರೆ. 

ಇಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಕೆಎ 19 ಎಎ 9294 ನೋಂದಣಿಯ ಪಿಕ್ ಅಪ್ ವಾಹನ ಮತ್ತು ಕೆಎಲ್ 14 ಎಕ್ಸ್ 9707 ನೋಂದಣಿಯ ಕಾರಿನಲ್ಲಿ 175 ಕೇಜಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಪಿಕ್ ಅಪ್ ವಾಹನದಲ್ಲಿ ಗಾಂಜಾ ಪ್ಯಾಕೆಟ್ ಮೇಲೆ ಹಸಿ ಮೆಕ್ಕೆಜೋಳ ರಾಶಿಯನ್ನು ಹಾಕಲಾಗಿತ್ತು. ಮೇಲ್ಭಾಗದಲ್ಲಿ ಜೋಳದ ಸಾಗಾಟ ನಡೆಸುತ್ತಿರುವ ರೀತಿ ಬಿಂಬಿಸಲಾಗಿತ್ತು. ಪೊಲೀಸರು ತಪಾಸಣೆ ನಡೆಸಿದಾಗ, ಬೃಹತ್ ಗಾಂಜಾ ಸಾಗಾಟ ಜಾಲ ಬಯಲಾಗಿದೆ. ವಾಹನ ಮತ್ತು ಸೊತ್ತುಗಳ ಜೊತೆ ಮೂವರನ್ನು ಬಂಧಿಸಿದ್ದು ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಂಜ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು (26) , ಮಂಜೇಶ್ವರದ ಮಜೀರ್ ಪಳ್ಳ ನಿವಾಸಿ ಮೊಹಮ್ಮದ್ ಶಫೀಕ್ (31), ಕನ್ಯಾನ ಗ್ರಾಮದ ನಿವಾಸಿ ಖಲಂದರ್ ಶಾಫಿ(26) ವಿರುದ್ಧ ಎನ್ ಡಿಪಿಎಸ್ ಏಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. 

ಆರೋಪಿಗಳ ಪೈಕಿ ಇಬ್ರಾಹಿಂ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ, ಖಲಂದರ್ ಶಾಫಿ ವಿರುದ್ಧ 2 ಅಕ್ರಮ ಗಾಂಜಾ ಅಕ್ರಮ ಪ್ರಕರಣ, ಒಂದು ಕೊಲೆ ಯತ್ನ ಪ್ರಕರಣ ಹಾಗೂ ಕಾವೂರು ಠಾಣೆಯಲ್ಲಿ ಒಂದು ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ.