ಬ್ರೇಕಿಂಗ್ ನ್ಯೂಸ್
25-11-25 09:53 pm Mangalore Correspondent ಕರಾವಳಿ
ಮಂಗಳೂರು, ನ.25 : ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಮಂಡಳಿಯ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ನಿರಾಯಾಸ ಜಯ ಸಾಧಿಸಿದ್ದಾರೆ. 13 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಮಾಡಿಕೊಂಡಿದ್ದ ಸಹಕಾರ ಭಾರತಿಗೆ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲೂ ಜಯ ಸಿಕ್ಕಿದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಚುನಾವಣಾ ಕಣದಲ್ಲಿದ್ದ ಎಸ್.ಆರ್ ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಪುರುಷೋತ್ತಮ ಭಟ್, ಎವಿ ತೀರ್ಥರಾಮ ಮತ್ತು ಮುರಳಿಕೃಷ್ಣ ಚಳ್ಳಂಗಾರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನ.23ರಂದು ಆರು ಸ್ಥಾನಗಳಿಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ನಡೆದಿದ್ದು, 45 ಶೇ. ಮತದಾನ ಆಗಿತ್ತು. 25ರಂದು ನಡೆದ ಮತ ಎಣಿಕೆಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಆರು ಮಂದಿಯೂ ನಿರಾಯಾಸ ಗೆಲುವು ಸಾಧಿಸಿದ್ದಾರೆ.
ಹೆಚ್ಚು ಕಡಿಮೆ ಅವಿರೋಧ ಆಯ್ಕೆಯಿಂದಲೇ ಕ್ಯಾಂಪ್ಕೋ ಆಡಳಿತ ಹಿಡಿಯುತ್ತಿದ್ದ ಸಹಕಾರ ಭಾರತಿ 15 ವರ್ಷಗಳ ಹಿಂದೆ ಕೆಲವು ಸ್ಥಾನಗಳಿಗೆ ಚುನಾವಣೆ ಎದುರಿಸಿತ್ತು. ಆನಂತರ, ಈ ಬಾರಿ ಆರೆಸ್ಸೆಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ಸದಸ್ಯರೇ ಬಂಡಾಯ ನಿಂತಿದ್ದರಿಂದ ಚುನಾವಣೆ ನಡೆದಿತ್ತು. ಕಿಸಾನ್ ಸಂಘದ ಪ್ರಮುಖರು ತಮ್ಮ ಅಭ್ಯರ್ಥಿಗಳು ಕಣದಲ್ಲಿ ಇಲ್ಲ ಎಂದು ಹೇಳಿದ್ದರೂ ಸತ್ಯನಾರಾಯಣ ಎಂ.ಜಿ ಮತ್ತು ರಾಮ್ ಪ್ರತೀಕ್ ಅವರು ಕಣಕ್ಕಿಳಿದು ಕುತೂಹಲ ಮೂಡಿಸಿದ್ದರು. ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ ಕೇರಳದ 9 ಮತ್ತು ಕರ್ನಾಟಕದ ನಾಲ್ಕು ಸೇರಿದಂತೆ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ಸಂಸ್ಥೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರಿದ್ದರೂ ಕೇವಲ 5576 ಮಂದಿಗೆ ಮಾತ್ರ ಮತದಾನದ ಅವಕಾಶ ಇತ್ತು. ಮತದಾನ ಅರ್ಹತೆ ಪಡೆಯಲು ಕನಿಷ್ಠ ಮೂರು ಮಹಾಸಭೆಗೆ ಹಾಜರಾಗಿರಬೇಕು ಎಂಬ ನಿಯಮದಂತೆ ಹೆಚ್ಚಿನ ಸದಸ್ಯರಿಗೆ ಮತದಾನ ಅವಕಾಶ ಇರಲಿಲ್ಲ. ಇದರ ಪೈಕಿ 2573 ಮತಗಳು ಚಲಾವಣೆಯಾಗಿದ್ದು 33 ಮತಗಳು ಅಸಿಂಧು ಆಗಿದ್ದವು. ಮುರಳಿಕೃಷ್ಣ 2261 ಮತ, ಪುರುಷೋತ್ತಮ ಭಟ್- 2249, ಮಹೇಶ್ ಚೌಟ-2216, ಎಸ್.ಆರ್ ಸತೀಶ್ಚಂದ್ರ- 2181, ದಯಾನಂದ ಹೆಗ್ಡೆ- 2163, ಎವಿ ತೀರ್ಥರಾಮ -2052 ಮತಗಳನ್ನು ಪಡೆದಿದ್ದರು. ಎಂಜಿ ಸತ್ಯನಾರಾಯಣ 620 ಮತ್ತು ರಾಮ ಪ್ರತೀಕ್ 634 ಮತ ಪಡೆದಿದ್ದಾರೆ.
Cooperative Bharati achieved a clean sweep in the Campco administrative board elections, winning all six contested seats with a comfortable margin. With 13 members already elected unopposed, all six candidates of Cooperative Bharati secured victory in the polling held at Sharada Vidyalaya, Mangaluru. The election saw 45% voter turnout, and rebel candidates from Bharatiya Kisan Sangh were defeated by a huge margin.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am