ಬ್ರೇಕಿಂಗ್ ನ್ಯೂಸ್
24-11-25 11:13 am Mangalore Correspondent ಕರಾವಳಿ
ಮಂಗಳೂರು, ನ.24 : ಗಡಿನಾಡು, ಕನ್ನಡಿಗರೇ ಹೆಚ್ಚಿರುವ ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳೀಕರಣದ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದ್ದು, ಅದನ್ನು ವಿರೋಧಿಸಿ ಡಿಸೆಂಬರ್ ಮೂರನೇ ವಾರದಲ್ಲಿ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ನಡೆಯಲಿದೆ. ಅಲ್ಲಿ ಸೂಕ್ತ ನಿರ್ಣಯ ಕೈಗೊಂಡು ಮೂರನೇ ವಾರದಲ್ಲಿ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
"ಕಾಸರಗೋಡನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ಕಯ್ಯಾರ ಕಿಂಞ್ಞಣ್ಣರೈ, ಮಂಜೇಶ್ವರ ಗೋವಿಂದ ಪೈ ಬಳಿಕ ಹೋರಾಟದ ಮುಖಂಡತ್ವ ಬದಿಗೆ ಸರಿದಿದೆ. ವಿಧಾನಸಭೆ, ವಿಧಾನ ಪರಿಷತ್ ಅಥವಾ ಸಂಸತ್ ನಲ್ಲಿ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ನಡುವೆ ಕಾಸರಗೋಡನ್ನು ಮಲಯಾಳೀಕರಣಗೊಳಿಸುವ ಮೂಲಕ ಕನ್ನಡ ಸಂಸ್ಕೃತಿ ನಾಶ ಪಡಿಸಲಾಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇದನ್ನು ಕರ್ನಾಟಕ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಿದ್ದು ಕೈಬಿಟ್ಟರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ಮುಖ್ಯಮಂತ್ರಿ ಯಾರು ಬೇಕಾದರೂ ಆಗಬಹುದು. ಆದರೆ ಸಿದ್ದರಾಮಯ್ಯ ಅವರನ್ನು ಈಗ ಯಾಕೆ ಬದಲಿಸಬೇಕು ಎಂಬುದಕ್ಕೆ ಉತ್ತರ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ತಕ್ಕುದಾದ ವ್ಯಕ್ತಿ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಲ್ಲೂ ಇಲ್ಲ. ಅವರ ಸ್ಥಾನಕ್ಕೆ ರಾಜಕೀಯವಾಗಿ ಬೇರೆ ಯಾರನ್ನೇ ತಂದರೂ ದೊಡ್ಡ ಕ್ರಾಂತಿ ಆಗಲಿದೆ. ಸಿದ್ದರಾಮಯ್ಯ ಅವರು 7 ವರ್ಷ ಮುಖ್ಯಮಂತ್ರಿಯಾಗಿ, 14 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದು ಸಾಧುವಲ್ಲ. ಹೈಕಮಾಂಡ್ ಈ ಕಾರ್ಯಕ್ಕೆ ಕೈಹಾಕಿದರೆ ಬೆಂಕಿ ಜತೆ ಸರಸವಾಡಿದಂತೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾರ್ಯದರ್ಶಿ ಕುಶಲ ಕುಮಾರ ಕೆ., ಕರ್ನಾಟಕ ಸಮಿತಿ ಕಾಸರಗೋಡು ಅಧ್ಯಕ್ಷ ಕೆ.ಎಂ.ಬಳ್ಳುಕ್ಕುರಾಯ, ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಕನ್ನಡ ಜಾಗೃತಿ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಕಾಸರಗೋಡು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ ಸುಕೇಶ್ ಎ. ಉಪಸ್ಥಿತರಿದ್ದರು.
A systematic attempt to “Malayalise” Kasaragod — a border district with a majority Kannada-speaking population — is underway, alleged Kannada Chaluvali Vatal Paksha President Vatal Nagaraj. He warned that in protest, a National Highway bandh and satyagraha will be staged between Mangaluru and Kasaragod in the third week of December.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am