ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ಕಡಿದು ಬಿದ್ದ ತಂತಿ ತಗುಲಿ ಬೈಕ್ ಮತ್ತು ಸವಾರ ಜೀವಂತ ದಹನ..!! 

11-08-20 04:59 am       Mangalore Reporter   ಕರಾವಳಿ

ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತಗಲಿ ಬೈಕ್ ಸಮೇತ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾದ ಘಟನೆ ಸುಳ್ಯ ತಾಲೂಕಿನ ಪಡ್ಪಿನಂಗಡಿಯಲ್ಲಿ ನಡೆದಿದೆ. ಮೃತರನ್ನು ಮಂಡೆಕೋಲು ನಿವಾಸಿ ಉಮೇಶ್ ಗೌಡ (44) ಎಂದು ಗುರುತಿಸಲಾಗಿದೆ.

ಪುತ್ತೂರು, ಆಗಸ್ಟ್ 11: ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿ ತಗಲಿ ಬೈಕ್ ಸಮೇತ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾದ ಘಟನೆ ಸುಳ್ಯ ತಾಲೂಕಿನ ಪಡ್ಪಿನಂಗಡಿಯಲ್ಲಿ ನಡೆದಿದೆ. 

ಮೃತರನ್ನು ಮಂಡೆಕೋಲು ನಿವಾಸಿ ಉಮೇಶ್ ಗೌಡ (44) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಬಳಿಯ ಬಳ್ಪದಲ್ಲಿ ಆತನ ಹೆಂಡ್ತಿ ಮನೆಯಿದ್ದು ನಿನ್ನೆ ಸಂಜೆ ಬಂದಿದ್ದ ಉಮೇಶ್, ಇಂದು ನಸುಕಿನಲ್ಲಿ 4.30ಕ್ಕೆ ಮನೆಯತ್ತ ಹೊರಟಿದ್ದ. ಮನೆಯಲ್ಲಿ ಹಾಲು ಕರೆಯಲು ಇದೆಯೆಂದು ಬೈಕಿನಲ್ಲಿ ಬೇಗ ಹೊರಟಿದ್ದ ಉಮೇಶ್ ಅರ್ಧ ದಾರಿಯಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ.  ನಿಂತಿಕಲ್ಲು ಬಳಿಯ ಪಡ್ಪಿನಂಗಡಿ ಎಂಬಲ್ಲಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಮಳೆಯಿಂದ ಒದ್ದೆಯಾಗಿದ್ದ ಬೈಕಿಗೆ ಸುಲಭದಲ್ಲಿ ಪ್ರವಹಿಸಿದ್ದು ಬೆಂಕಿ ಹತ್ತಿಕೊಂಡಿದೆ. ಬೈಕ್ ಮತ್ತು ಸವಾರ ಸ್ಥಳದಲ್ಲಿಯೇ ಹೊತ್ತಿ ಉರಿದಿದ್ದು ಜೀವಂತ ದಹನವಾಗಿದ್ದಾರೆ.  5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಈ ಸಮಯದಲ್ಲಿ ರಸ್ತೆಯಲ್ಲಿ ಜನರ ಸಂಚಾರ ಇಲ್ಲದೇ ಇದ್ದುದರಿಂದ 6 ಗಂಟೆ ಬಳಿಕವೇ ಘಟನೆ ಸ್ಥಳೀಯರಿಗೆ ತಿಳಿದುಬಂದಿದೆ. 

ಪುತ್ತೂರು - ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಹೈವೇ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದು ಹೇಗೆ ಎನ್ನುವುದು ತಿಳಿದುಬಂದಿಲ್ಲ. ಘಟನೆ ನೋಡಿದರೆ ಬೆಚ್ಚಿ ಬೀಳುವ ರೀತಿಯಿದೆ. ಬೈಕ್ ಮತ್ತು ಅದರಲ್ಲಿನ ಸವಾರ ಬಿದ್ದಿರುವ ಜಾಗದಲ್ಲೇ ಧಗ ಧಗನೆ ಉರಿಯುವ ದೃಶ್ಯ ಮನ ಕಲಕುವಂತಿದೆ.

Video: