ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ ಖಾತೆ ; ಪೊಲೀಸ್ ಆಯುಕ್ತರನ್ನೇ ಯಾಮಾರಿಸಲು ಹೊರಟ ಸೈಬರ್ ಖದೀಮರು

04-11-25 10:51 pm       Mangalore Correspondent   ಕರಾವಳಿ

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದು, ಆಮೂಲಕ ಸೈಬರ್ ಖದೀಮರು ಐಪಿಎಸ್ ಅಧಿಕಾರಿಯನ್ನೇ ಯಾಮಾರಿಸಲು ಹೊರಟಿದ್ದಾರೆ.

ಮಂಗಳೂರು, ನ.4 : ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದು, ಆಮೂಲಕ ಸೈಬರ್ ಖದೀಮರು ಐಪಿಎಸ್ ಅಧಿಕಾರಿಯನ್ನೇ ಯಾಮಾರಿಸಲು ಹೊರಟಿದ್ದಾರೆ.

ಈ ಬಗ್ಗೆ ವಿಷಯ ತಿಳಿದ ಸುಧೀರ್ ರೆಡ್ಡಿ ಸ್ವತಃ ತನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. Sudhir Kumar Reddy IPS ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ಮಾಡಲಾಗಿದ್ದು ಪ್ರೊಫೈಲನ್ನು ಲಾಕ್ ಮಾಡಲಾಗಿದೆ. 11 ಜನರು ಈ ಖಾತೆಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಫ್ರೆಂಡ್ಸ್ ಆಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಧೀರ್ ರೆಡ್ಡಿ, ನಕಲಿ ಖಾತೆ ತೆರೆದವನಿಗೆ ಸುಧೀರ್ ಕುಮಾರ್ ರೆಡ್ಡಿ ಅಂದ್ರೆ ಹೆಣ್ಣೋ, ಗಂಡೋ ಅಂತನೂ ತಿಳಿದಿಲ್ಲ ಅನ್ಸುತ್ತೆ. Her profile locked (ಅವಳ ಪ್ರೊಫೈಲ್ ಲಾಕ್ ಆಗಿದೆ) ಅಂತ ಇದೆ. About information ನಲ್ಲಿ ಹೆಣ್ಣು ಅಂತ ಪರಿಗಣಿಸಿಯೇ ಬರೆದುಕೊಂಡಿರಬೇಕು ಎಂದಿದ್ದಾರೆ.

ಫೇಸ್ಬುಕ್ ನಲ್ಲಿ ಅಧಿಕಾರಿಗಳು, ಖ್ಯಾತನಾಮರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಗೆಳೆಯರಿಂದ ಹಣ ಕೇಳುವ ಪರಿಪಾಠ ಹಳೆಯದಾಗಿದ್ದು, ಸೈಬರ್ ಖದೀಮರು ಮಂಗಳೂರಿನಲ್ಲಿ ಹೆಸರು ಮಾಡಿರುವ ಅಧಿಕಾರಿ ಸುಧೀರ್ ರೆಡ್ಡಿ ಹೆಸರನ್ನೂ ದುರುಪಯೋಗ ಮಾಡಲು ಮುಂದಾಗಿದ್ದಾರೆ.

In a shocking case of cyber impersonation, cybercriminals have created a fake Facebook account using the name and photo of Mangaluru Police Commissioner Sudhir Kumar Reddy, IPS, reportedly attempting to dupe people by misusing the senior officer’s identity.