ಬ್ರೇಕಿಂಗ್ ನ್ಯೂಸ್
28-10-25 03:36 pm Mangalore Correspondent ಕರಾವಳಿ
ಮಂಗಳೂರು, ಅ.28 : ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ಶಾಸಕರ ಭವನದ ನವೀಕರಣ, ಸ್ಪೀಕರ್ ಕೊಠಡಿಯ ಆಧುನೀಕರಣ, ಪುಸ್ತಕ ಮೇಳ ಹೆಸರಿನಲ್ಲಿ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದು, ಭಾರೀ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಎಲ್ಲದಕ್ಕೂ ದುಂದುವೆಚ್ಚ, ಭ್ರಷ್ಟಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಇದರ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶಾಸಕರ ಭವನದಲ್ಲಿ ಪ್ರತಿ ಕೊಠಡಿಗೂ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸೊಲ್ಯುಶನ್ಸ್, ಸ್ಟೈನ್ ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಗಳನ್ನು ಜೋಡಿಸಲಾಗಿದೆ. ಆದರೆ ಇದರ ಮಾರುಕಟ್ಟೆ ದರಕ್ಕೂ, ಅಲ್ಲಿ ತೋರಿಸಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸ್ಮಾರ್ಟ್ ಡೋರ್ ಲಾಕ್ ಗೆ ಮಾರುಕಟ್ಟೆ ದರ 16 ಸಾವಿರ ಇದ್ದರೆ, ಅದನ್ನು ಶಾಸಕರ ಭವನದ ಲೆಕ್ಕದಲ್ಲಿ 49 ಸಾವಿರ ತೋರಿಸಲಾಗಿದೆ. ಸೇಫ್ ಲಾಕರನ್ನು 35 ಸಾವಿರ ತೋರಿಸಲಾಗಿದ್ದು ಅದಕ್ಕೆ ಮಾರುಕಟ್ಟೆಯಲ್ಲಿ 8100 ರೂ. ಇದೆ. ಮಾರುಕಟ್ಟೆಯಲ್ಲಿ 30 ಸಾವಿರ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯುಶನ್ಸ್ ಅನ್ನು 90,500 ರೂ. ಎಂದು ಲೆಕ್ಕ ತೋರಿಸಲಾಗಿದೆ. ವಾಟರ್ ಪ್ಯೂರಿಫೈಯರಿಗೆ 65 ಸಾವಿರ ದರ ಹಾಕಲಾಗಿದ್ದು ಅದಕ್ಕೆ ಮಾರುಕಟ್ಟೆಯಲ್ಲಿ 16 ಸಾವಿರದಿಂದ 50 ಸಾವಿರದ ವರೆಗೆ ಬೆಲೆ ತೋರಿಸುತ್ತದೆ.
ಮಂಗಳೂರಿನ ವ್ಯಕ್ತಿಯ ಮೂಲಕ ಇದನ್ನು ಮಾಡಿಸಲಾಗಿದ್ದು, ಅಗತ್ಯ ಇಲ್ಲದಿದ್ದರೂ ಶಾಸಕರ ಭವನದ ನವೀಕರಣ ಹೆಸರಲ್ಲಿ 2ರಿಂದ 3 ಪಟ್ಟು ಬಿಲ್ ತೋರಿಸಲಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಮುಖ್ಯಮಂತ್ರಿಯವರ ಮೌಖಿಕ ಅನುಮತಿಯೊಂದಿಗೆ ತುರ್ತಾಗಿ ಮಾಡಬೇಕಾದ ಕೆಲಸವೆಂದು ತೋರಿಸಿ 4ಜಿ ವಿನಾಯಿತಿಯನ್ನೂ ಪಡೆಯಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಕ್ಕೆ, ರಸ್ತೆ ಗುಂಡಿ ಮುಚ್ಚುವುದಕ್ಕೂ ಹಣ ಇಲ್ಲದ ಸ್ಥಿತಿ ಇರುವಾಗ ಸ್ಪೀಕರ್ ಖಾದರ್ ಈ ರೀತಿ ದುಂದುವೆಚ್ಚ ಯಾಕೆ ಮಾಡಿದ್ದಾರೆ.
ಇದಲ್ಲದೆ, 5 ದಿನದ ಪುಸ್ತಕ ಮೇಳ ಹೆಸರಲ್ಲಿ ನಾಲ್ಕೂವರೆ ಕೋಟಿ ಬಿಲ್ ಮಾಡಿದ್ದಾರೆ. ಪುಸ್ತಕ ಖರೀದಿ ಅಲ್ಲ, ಕೇವಲ ಮೇಳದ ವೆಚ್ಚವೆಂದು 4.5 ಕೋಟಿ ತೋರಿಸಿದ್ದಾರೆ. ಇದನ್ನು ಮಾಹಿತಿ ಹಕ್ಕಿನಿಂದ ಪಡೆದು ಪತ್ರಿಕೆಯವರೇ ಸುದ್ದಿ ಮಾಡಿದ್ದಾರೆ. ಸಭಾಧ್ಯಕ್ಷ ಪೀಠವನ್ನು ರೋಸ್ ವುಡ್, ಟೀಕ್ ವುಡ್ ನಲ್ಲಿ ಅಲಂಕರಿಸಿ ದುಬಾರಿ ವೆಚ್ಚ ಮಾಡಿದ್ದಾರೆ. ಎಲ್ಲ ಶಾಸಕರಿಗೆ ಗಂಡ ಭೇರುಂಡ ಲಾಂಛನದ ಗೋಡೆ ಗಡಿಯಾರ, ವಿಧಾನಸಭೆಯ ಒಳಗಡೆ 45 ಲಕ್ಷ ವೆಚ್ಚದಲ್ಲಿ ಎಐ ಕ್ಯಾಮರಾ, ಅದರ ಉನ್ನತೀಕರಣಕ್ಕೆ 35 ಲಕ್ಷ, ಶಾಸಕರ ಭವನದ ಎಲ್ಲಾ ಕೊಠಡಿಗಳಿಗೆ ಹೊಸತಾಗಿ ಮಂಚ, ಟೇಬಲ್, ಕುರ್ಚಿಗಳನ್ನು ಹಾಕಲಾಗಿದೆ.
ಅಧಿವೇಶನ ಇರುವಾಗ ಮಾತ್ರ ಇರುವ ಶಾಸಕರ ಭವನದಲ್ಲಿ ಇರುತ್ತೇವೆ, ಉಳಿದ ದಿನಗಳಲ್ಲಿ ವರಾಂಡದಲ್ಲಿ ಬೀದಿ ನಾಯಿಗಳು ಮಲಗಿರುತ್ತವೆ. ಅಂತಹ ಜಾಗಕ್ಕೆ ದುಬಾರಿ ಚೇರ್, ಟೇಬಲ್ ಗಳನ್ನು ಹಾಕಿದ್ದಾರೆ. ಸ್ಪೀಕರ್ ಕೊಠಡಿಯಲ್ಲಿ ಬರುವ ಎಲ್ಲ ಶಾಸಕರು, ಅತಿಥಿಗಳಿಗೆ ಉಚಿತ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದಾರೆ. ಸ್ಪೀಕರ್ ಖಾದರ್ ಸರಕಾರದ ವೆಚ್ಚದಲ್ಲಿ ಹೊರ ದೇಶಗಳಿಗೆ ಸುತ್ತಾಟ ಮಾಡಿದ್ದು ಅದರ ವೆಚ್ಚ ಎಷ್ಟಾಗಿದೆ ಎಂದು ತಿಳಿದುಬಂದಿಲ್ಲ. ಎಲ್ಲದರ ಬಗ್ಗೆಯೂ ಮಾಹಿತಿ ಕೇಳಲು ಆರ್ಟಿಐ ಹಾಕಿದರೆ, ಸ್ಪೀಕರ್ ಕೊಠಡಿ ಆರ್ಟಿಐ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಿದ್ದಾರೆ.
ಸ್ಪೀಕರ್ ಹುದ್ದೆ ಎನ್ನುವುದು ಸಾಂವಿಧಾನಿಕ ಹುದ್ದೆಯಾಗಿದ್ದು, ಯು.ಟಿ ಖಾದರ್ ಅದನ್ನು ಬೇಕಾಬಿಟ್ಟಿಯಾಗಿಸಿ ಭ್ರಷ್ಟಾಚಾರದ ಮಸಿಯನ್ನು ಮೆತ್ತಿಸಿ ಕಳಂಕ ತಂದಿದ್ದಾರೆ. ನವೀಕರಣ ಮಾಡಬೇಕಿದ್ದರೆ ಟೆಂಡರ್ ಕರೆದು ಮಾಡಬಹುದಿತ್ತು. ಯಾಕೆ ಹಣಕಾಸು ಶಿಸ್ತು ಪಾಲಿಸದೆ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ. ಇದಲ್ಲದೆ, ಸ್ಪೀಕರ್ ಕೊಠಡಿಯ ಲಾಂಜನ್ನು ಮಸಾಜ್ ನೆಪದಲ್ಲಿ ಮಸಾಜ್ ಪಾರ್ಲರ್ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆ ಮಾಡಿಸಬೇಕು ಎಂದು ಒತ್ತಾಯ ಮಾಡುತ್ತೇವೆ. ರಾಜ್ಯಪಾಲರಿಗೂ ದೂರು ಕೊಡುತ್ತೇವೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ರಾಜಗೋಪಾಲ ರೈ, ಅರುಣ್ ಶೇಟ್, ರಮೇಶ್ ಕಂಡೆಟ್ಟು, ವಸಂತ ಪೂಜಾರಿ ಇದ್ದರು.
Karnataka Assembly Speaker U.T. Khader has been accused of large-scale corruption in the renovation of the Legislators’ Home, modernization of the Speaker’s chamber, and the organization of a book fair, allegedly carried out without Finance Department approval and involving inflated bills several times higher than market rates.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm