ಬ್ರೇಕಿಂಗ್ ನ್ಯೂಸ್
18-10-25 11:01 pm Mangalore Correspondent ಕರಾವಳಿ
ಮಂಗಳೂರು, ಅ.18 : ದಿನೇಶ್ ಅಮೀನ್ ಮಟ್ಟು ಅವರಿಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿಲ್ಲ. ಇಂದಿರಾ ಗಾಂಧಿ, ರಾಜೀವ ಗಾಂಧಿ ಎಲ್ಲರ ಬಗ್ಗೆ ಬರೆದಿದ್ದರು. ಸರಿಯಾದ ಮಾಹಿತಿಯೇ ಇಲ್ಲದೆ ಎಬಿವಿಪಿ ಸಮ್ಮೇಳನ ನಡೆದಿದೆ, ಆರೆಸ್ಸೆಸ್ ಬೈಟಕ್ ನಡೆದಿದೆ ಎಂದು ಹೇಳುತ್ತಾರೆ. ಹಾಗೇನಾದ್ರೂ ಇದ್ದರೆ ಅವರು ಆಧಾರ ತೋರಿಸಲಿ. ಹೀಗೆಲ್ಲ ಕೇಳೋರು ಯಾವ ನೈತಿಕತೆ ಇಟ್ಟುಕೊಂಡು ಕಾಂಗ್ರೆಸ್ ಎಂಎಲ್ಸಿ ಟಿಕೆಟ್ ಕೇಳಿದ್ರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನೆ ಮಾಡಿದ್ದಾರೆ.
ಆರೆಸ್ಸೆಸ್ ಬಗ್ಗೆ ಪ್ರಿಯಾಂಕ ಖರ್ಗೆ ಮಾತನಾಡಿದ್ರೆ, ಕರಾವಳಿ ಕಾಂಗ್ರೆಸಿಗರು ಸುಮ್ಮನಿದ್ದಾರೆ, ಅವರು ಒಳಗೊಂದು ಹೊರಗೊಂದು ಮಾಡುತ್ತಾರೆ, ಅದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಸೋಲುತ್ತಿದೆ ಎಂದು ಮಾಜಿ ಪತ್ರಕರ್ತ, ಸಿಎಂ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಮಾತನಾಡಿದ್ದರು. ಈ ಕುರಿತು ಮಂಜುನಾಥ ಭಂಡಾರಿ ಅವರ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆ ಮಾಡಿದಾಗ, ಮೇಲಿನಂತೆ ಮರುಪ್ರಶ್ನೆ ಹಾಕಿದ್ದಾರೆ.
2012ರಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ 300 ಇಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡ ಸೃಷ್ಟಿ ಎನ್ನುವ ಪ್ರಾಜೆಕ್ಟ್ ಕಾರ್ಯಕ್ರಮ ನಡೆದಿತ್ತು. ಆಗಿನ ಸಿಎಂ ಆಗಿದ್ದ ಸದಾನಂದ ಗೌಡರು ಕಾರ್ಯಕ್ರಮಕ್ಕೆ ಬಂದಿದ್ದರು. ಎಬಿವಿಪಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿದ್ದರೂ, ಅದು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮ ಅಷ್ಟೇ ಆಗಿತ್ತು. ಇದನ್ನೇ ಎಬಿವಿಪಿ ಸಮ್ಮೇಳನ ಎಂದರೆ ಹೇಗೆ. ಆರೆಸ್ಸೆಸ್ ಬೈಠಕ್ ನಡೆದಿದೆ ಎಂದು ಏನೇನೋ ಹೇಳಿದರೆ ಹೇಗೆ. 2013ರಲ್ಲಿ ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, 2018ರಲ್ಲಿ ಯಾಕೆ ಸೋತಿತ್ತು. ಇದಕ್ಕೆ ಉತ್ತರ ಇದೆಯಾ ಎಂದು ಪ್ರಶ್ನಿಸಿದರು.
ಕರಾವಳಿಯಲ್ಲಿ ಕಾಂಗ್ರೆಸಿಗರು ಅಂದರೆ ಇವರೊಬ್ಬರೇ ಇರೋದಾ.. ನಾವು ಆರೆಸ್ಸೆಸ್, ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಆರೆಸ್ಸೆಸ್ ವಿರೋಧಿ ಎಂದು ನಾವು ಎದೆ ಬಗೆದು ತೋರಿಸಿಕೊಳ್ಳಬೇಕಾ.. ಈ ರೀತಿ ಕ್ಷುಲ್ಲಕವಾಗಿ ಮಾತನಾಡಿದರೆ ಮುಂದೆ ಮಾನನಷ್ಟ ಕೇಸು ಹಾಕಬೇಕಾದೀತು ಎಂದು ಮಂಜುನಾಥ ಭಂಡಾರಿ ಕಿಡಿಕಾರಿದರು.
ಎನ್ಎಸ್ ಯುಐ ಮೂಲಕ ರಾಜಕೀಯ ಪ್ರವೇಶಿಸಿ ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದವನು ನಾನು. ಆರೆಸ್ಸೆಸ್ ಅಥವಾ ಬಿಜೆಪಿ ವ್ಯಕ್ತಿಯ ಜೊತೆಗೆ ಎಲ್ಲಾದರೂ ಕಾಣಿಸಿಕೊಂಡ ಮಾತ್ರಕ್ಕೆ ಅವರ ಸಿದ್ಧಾಂತಕ್ಕೆ ಒಳಪಟ್ಟಿದ್ದೇನೆ ಎಂದು ಅರ್ಥ ಆಗುತ್ತಾ.. ಯಾಕೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ ಎಂದು ಕೇಳಿದ ಭಂಡಾರಿ, ಪ್ರಿಯಾಂಕ ಖರ್ಗೆ ಏನು ಹೇಳಿದ್ದಾರೋ ಒಬ್ಬ ಹಿರಿಯ ಸಚಿವರಾಗಿ ನಾವು ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರೆಲ್ಲ ಒಪ್ಪಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ 2013ರಲ್ಲಿ ಆಗಿನ ಸಿಎಂ ಜಗದೀಶ್ ಶೆಟ್ಟರ್ ಇದ್ದಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರಕಾರಿ ಶಾಲೆ ಮೈದಾನ, ಆವರಣದಲ್ಲಿ ಖಾಸಗಿಯವರು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯಬೇಕು ಎಂದು ಸುತ್ತೋಲೆ ಕಳುಹಿಸಿದ್ದರು. ಅದನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಿಯಾಂಕ ಹೇಳಿದ್ದಾರೆ.
ನಾವು ಆರೆಸ್ಸೆಸ್ ಬ್ಯಾನ್ ಮಾಡಬೇಕೆಂದು ಹೇಳಿಲ್ಲ. ಅದೊಂದು ರಿಜಿಸ್ಟರ್ ಆದ ಸಂಘಟನೆಯೇ ಅಲ್ಲ. ಅವರು ಸಾರ್ವಜನಿಕ ಪ್ರದೇಶದಲ್ಲಿ ದಂಡ ಹಿಡಿದು ಕವಾಯತು ಮಾಡುವ ಅಗತ್ಯ ಏನಿದೆ. ಪಥಸಂಚಲನ ಆಗಲೀ, ಏನೇ ಕಾರ್ಯಕ್ರಮ ಆಗಲೀ ಪೊಲೀಸರ ಅನುಮತಿ ಪಡೆಯಬೇಕೆಂದು ಹೊಸತಾಗಿ ಕಾನೂನು ರೂಪಿಸುತ್ತಿದ್ದೇವೆ, ಹಳೆಯದನ್ನೇ ಬಲಿಷ್ಠಗೊಳಿಸಿ ಜಾರಿಗೊಳಿಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಪದ್ಮರಾಜ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ವಿಕಾಶ್ ಶೆಟ್ಟಿ, ನೀರಜ್ ಪಾಲ್ ಮತ್ತಿತರರು ಇದ್ದರು.
KPCC Working President Manjunath Bhandari hit back at former journalist Dinesh Amin Mattu, questioning his credibility and Congress loyalty. Speaking in Mangaluru, Bhandari said Mattu, who once criticized Indira Gandhi and Rajiv Gandhi, has no moral ground to seek an MLC ticket from the Congress.
18-10-25 09:11 pm
HK News Desk
ಎಂಟು ದಿನಗಳಿಂದ ಲವರ್ ಜೊತೆಗೆ ರೂಮ್ ಮಾಡಿದ್ದ ಪುತ್ತೂ...
18-10-25 08:50 pm
ಅಳಂದ ಮತಗಳವು ಪ್ರಕರಣ ; ಬಿಜೆಪಿ ಮಾಜಿ ಶಾಸಕ ಗುತ್ತೇದ...
17-10-25 08:39 pm
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
18-10-25 07:34 pm
HK News Desk
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
18-10-25 11:01 pm
Mangalore Correspondent
Kantara Controversy, Mangalore: ದೈವದ ಹೆಸರಲ್ಲಿ...
18-10-25 07:26 pm
Ullal, Someshwara, Pillar: ಸೋಮೇಶ್ವರ ಪಿಲಾರಿನಲ್...
17-10-25 09:36 pm
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
18-10-25 10:49 pm
Mangalore Correspondent
Auto Driver Assaulted, Traffic Police in Putt...
18-10-25 03:48 pm
Fake Gold Scam, Belthangady Anugraha Society:...
18-10-25 03:27 pm
Illegal Arms Case, Mahesh Shetty Timarodi: ಅಕ...
18-10-25 01:52 pm
ಪ್ರೀತಿ ನಿರಾಕರಿಸಿದ ಕಾಲೇಜು ಯುವತಿಯನ್ನು ನಡುರಸ್ತೆಯ...
17-10-25 03:27 pm