ಬ್ರೇಕಿಂಗ್ ನ್ಯೂಸ್
24-09-25 07:38 pm Mangalore Correspondent ಕರಾವಳಿ
ಮಂಗಳೂರು, ಸೆ.24: ಧರ್ಮಸ್ಥಳ ಭೂಕಬಳಿಕೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಅಕ್ರಮ ಯಾರೇ ಮಾಡಿದರೂ ಸರಕಾರ ಕ್ರಮ ಕೈಗೊಳ್ಳಲಿದೆ. ಎಷ್ಟೇ ದೊಡ್ಡ ವ್ಯಕ್ತಿ ಮಾಡಿದರೂ ಅಕ್ರಮ ಅಕ್ರಮವೇ ಎಂದು ಹೇಳಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರು ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಸರಕಾರದ ಮನಸ್ಸಿಗೆ ಬಂದಂತೆ ಯಾರನ್ನೇ ಆದರೂ ಗಡಿಪಾರು ಮಾಡಲಾಗುವುದಿಲ್ಲ. ಅದಕ್ಕೊಂದು ನಿಯಮವಿದೆ. ಕೋರ್ಟ್ ಇದನ್ನು ನಿರ್ಧರಿಸುತ್ತದೆ ಎಂದರು.


ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರನ 164 ಹೇಳಿಕೆಯಂತೆ ತನಿಖೆಗೆ ಎಸ್ಐಟಿ ಮಾಡಿರುವುದು ನಮ್ಮ ಸರಕಾರ. ಹಿಂದಿನ ಸರಕಾರ ಇತ್ತಲ್ಲಾ ಅವರಿಗೆ ಮಾಡಬಹುದಿತ್ತಲ್ಲಾ. ನಾವು ಯಾರ ಪರವೂ ಇಲ್ಲ. ಸರಕಾರ ಸತ್ಯದ ಪರವಾಗಿದೆ. ಬಿಜೆಪಿಯವರು ಧರ್ಮಸ್ಥಳ ಚಲೋ ಯಾರಿಗೋಸ್ಕರ ಮಾಡಿದ್ದು, ಧರ್ಮಾಧಿಕಾರಿಯವರ ಮರ್ಯಾದೆ ಉಳಿಸಲಿಕ್ಕಾಗಿ ಅಲ್ವಾ.. ವೇದಿಕೆಯಲ್ಲಿ ಧರ್ಮಾಧಿಕಾರಿಗಳ ಪರವಾಗಿದ್ದವರು, ವೇದಿಕೆ ಇಳಿದ ತಕ್ಷಣ ಸೌಜನ್ಯಾ ಮನೆಗೆ ಹೋಗಿದ್ದಾರಲ್ಲ. ಹಾಗಾದರೆ ಬಿಜೆಪಿ ಯಾರ ಪರವಾಗಿದೆ. ಅಲ್ಲಿ ಸೌಜನ್ಯಾ ಸಂಬಂಧಿಕರು ಯಾರ ಹೆಸರು ಉಲ್ಲೇಖಿಸಿದ್ದರು. ಅದೇ ಬಿಜೆಪಿ ನಾಯಕರು ಸೌಜನ್ಯಾ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ಗೆ ಹೋಗುವಾಗ ಆಕೆಯ ಮನೆಯವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎನ್ನುತ್ತಾರೆ. ವೇದಿಕೆ ಇಳಿದಾಗ ವಿರುದ್ಧ, ವೇದಿಕೆ ಹತ್ತಿದಾಗ ಪರ. ಏನು ನಾಟಕವಾಡುತ್ತಿದ್ದಾರೆ ಬಿಜೆಪಿಗರು. ಅವರು ಎರಡೆರಡು ದೋಣಿಯಲ್ಲಿ ಕಾಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ ನಮ್ಮ ಮೇಲೆಯೇ ಅನುಮಾನ ಪಟ್ಟಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರ ಗರಡಿಯಲ್ಲಿ ಪಳಗಿದವರು. ಅವರು ಕಾಂಗ್ರೆಸ್ನವರಲ್ಲ. ಬಿಜೆಪಿಯವರು, ಸಂಘ ಪರಿವಾರದವರು. ಗಿರೀಶ್ ಮಟ್ಟಣ್ಣನವರ್ ಬಿಜೆಪಿ ಅಧಿಕೃತ ಚುನಾವಣಾ ಅಭ್ಯರ್ಥಿಯಾಗಿ ಬಿ ಫಾರ್ಮ್ ತೆಗೆದುಕೊಂಡವರು. ಅವರು ವಿಧಾನಸೌಧಕ್ಕೆ ಬಾಂಬ್ ಇಟ್ಟ ತಕ್ಷಣ ಭಗತ್ ಸಿಂಗ್ಗೆ ಹೋಲಿಕೆ ಮಾಡಿ ಯುವಮೋರ್ಚಾ ಮಾಡಿದವರು ಬಿಜೆಪಿಯವರೇ. ಆದ್ದರಿಂದ ಇದು ಆರ್ಎಸ್ಎಸ್ V/S ಆರ್ಎಸ್ಎಸ್. ದಯವಿಟ್ಟು ಆರ್ಎಸ್ಎಸ್ ಜಗಳವನ್ನು ಸರಕಾರಕ್ಕೆ ತಂದು ಕಟ್ಟಬೇಡಿ ಎಂದು ಹೇಳಿದರು.
ಎಸ್ಐಟಿ ತನಿಖೆ ನಡೆಯುತ್ತಿದೆ. ಅದರಲ್ಲಿ ಏನಾಗಿದೆ ಎಂದು ಇನ್ನೂ ಗೊತ್ತಿಲ್ಲ. ಮಾಹಿತಿ ಇದ್ದರೆ ಹೇಳಲಿ. ನಾನು ಹೋಗಿ ತಿಳಿಸುತ್ತೇನೆ. ಬಿಜೆಪಿಯವರಿಗೆ ಗೊತ್ತಿದ್ದರೆ ಸಂತೋಷ. ಷಡ್ಯಂತರ ಅಂದರೆ ಏನು ಹೇಳಲಿ. ಏನಾದರೂ ಕಾರಣ ಕೊಡಬೇಕಲ್ಲ. ಅವರು ಯಾರ ಪರವಾಗಿದ್ದಾರೆ. ಸೌಜನ್ಯಾ ಹೋರಾಟಕ್ಕೂ ಎಸ್ ಅನ್ನುತ್ತಾರೆ. ಬಿಜೆಪಿ ಚಲೋ ಕೂಡಾ ಅವರೇ ಮಾಡುತ್ತಾರೆ. ಅವರು ಆರ್ಎಸ್ಎಸ್ V/S ಆರ್ಎಸ್ಎಸ್. ಡಿಬೇಟ್ ನಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ ಎಂದು ಟಾಂಗ್ ನೀಡಿದರು.
Rural Development and Panchayat Raj Minister Priyank Kharge has reacted to the allegations of land encroachment in Dharmasthala, asserting that the government will take action regardless of the stature of the person involved. “Illegal activity is illegal, no matter who commits it. The government will act,” he said.
03-05-26 12:34 pm
HK News Staffer
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm