ಬ್ರೇಕಿಂಗ್ ನ್ಯೂಸ್
18-09-25 11:11 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.18 : ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ನಿನ್ನೆ ಅಸ್ಥಿಪಂಜರದ ಜೊತೆಗೆ ಐಡಿ ಕಾರ್ಡ್ ಒಂದು ಸಿಕ್ಕಿತ್ತು. ಅದರ ಮೂಲ ಪತ್ತೆಹಚ್ಚಿದಾಗ, ಅದು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ವೃದ್ಧ ಯು.ಬಿ.ಅಯ್ಯಪ್ಪ ಎಂಬವರದ್ದು ಎಂದು ಪತ್ತೆಯಾಗಿದೆ.
ಏಳು ವರ್ಷಗಳ ಹಿಂದೆ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋದವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲದ ಕುಟ್ಟ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಯ್ಯಪ್ಪ ನಾಪತ್ತೆಯಾದ ಬಗ್ಗೆ ಅವರ ಪುತ್ರ ಜೀವನ್ ನೀಡಿದ ದೂರಿನಂತೆ 15-06-2017ರಂದು ಕುಟ್ಟ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆಸ್ಪತ್ರೆಗೆಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ತೆರಳಿದ್ದ ಅಯ್ಯಪ್ಪ ನಾಪತ್ತೆಯಾಗಿದ್ದರು. ಅದೇ ದಿನ ಬೆಳಗ್ಗೆ 11.30ರ ನಂತರ ಮೊಬೈಲ್ ಸ್ವಿಚ್ ಅಫ್ ಆಗಿತ್ತು. ಬಳಿಕ ಇವರ ಕುಟುಂಬ ಒಂದು ವಾರ ಕಾಲ ಹುಡುಕಾಡಿತ್ತು. ಕೊನೆಗೆ ಅಯ್ಯಪ್ಪ ಸುಳಿವು ಸಿಗದಿದ್ದಾಗ ಜೀವನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದರೂ ಅಯ್ಯಪ್ಪ ಅವರ ಸುಳಿವು ಸಿಕ್ಕಿರಲಿಲ್ಲ. ಇದೀಗ ಎಂಟು ವರ್ಷಗಳ ಬಳಿಕ ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ. ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರ ಇವರದ್ದೇನಾ ಎಂಬ ಬಗ್ಗೆ ಸಂಬಂಧಿಕರ ಜೊತೆಗೆ ಡಿಎನ್ಎ ಮಾಡಿದರಷ್ಟೇ ತಿಳಿಯಬಹುದಾಗಿದೆ. ಗುರುವಾರ ಇಡೀ ದಿನ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಶೋಧ ಕಾರ್ಯ ನಡೆದಿದ್ದು ಮತ್ತಷ್ಟು ಅಸ್ಥಿಪಂಜರಗಳು ಸಿಕ್ಕಿವೆ.
ಪ್ರಥಮ ಹಂತದಲ್ಲಿ ದೂರುದಾರ ಚಿನ್ನಯ್ಯನ ಉಪಸ್ಥಿತಿಯಲ್ಲಿ ಬಂಗ್ಲೆಗುಡ್ಡೆ ಪರಿಸರ ಸೇರಿ 17 ಸ್ಥಳಗಳಲ್ಲಿ ಹೊಂಡಗಳನ್ನು ತೋಡಿ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಆಗ ಹೆಚ್ಚಿನ ಸಾಕ್ಷ್ಯ ಸಿಕ್ಕಿರಲಿಲ್ಲ. ಈಗ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್ಐಟಿ ತನಿಖೆ ನಡೆಸಿದಾಗ ಹಲವು ಕಡೆ ಶವಗಳ ಅವಶೇಷ ಪತ್ತೆಯಾಗಿದೆ.
ಸುಜಾತ ಭಟ್ ಪ್ರಕರಣದಲ್ಲಿ ವಿಜಯ್ ಹೇಳಿಕೆ
ಇದೇ ವೇಳೆ, ತನ್ನ ಮಗಳು ಅನನ್ಯಾ ಕಾಣೆಯಾಗಿದ್ದಾರೆಂದು ಹೇಳಿ ಯುವತಿಯೊಬ್ಬಳ ಫೋಟೊ ತೋರಿಸಿದ್ದ ಸುಜಾತಾ ಭಟ್ ಪ್ರಕರಣದಲ್ಲಿ, ಆ ಫೋಟೊದಲ್ಲಿದ್ದ ಕೊಡಗು ಮೂಲದ ಯುವತಿ ವಾಸಂತಿಯ ಸೋದರ ವಿಜಯ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ಹೇಳಿಕೆ ನೀಡಿದ್ದಾರೆ. ಸುಜಾತಾ ಭಟ್ ಬೆಂಗಳೂರಿನ ವಾಸಂತಿ ಎಂಬವರ ಫೋಟೋವನ್ನು ಅನನ್ಯಾ ಭಟ್ ಎಂದು ಬಿಂಬಿಸಿ ಮಾಧ್ಯಮಗಳಿಗೆ ತೋರಿಸಿದ್ದರು. ಆದರೆ ವಾಸಂತಿ ಅವರು 15 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಆಕೆಯ ಸೋದರ ಕೊಡಗು ಮೂಲದ ವಿಜಯ್ ಹೇಳಿಕೆ ನೀಡಿದ್ದರು. ಇದೀಗ ಗುರುವಾರ ಎಸ್ಐಟಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
A skeleton was discovered in the Banglegudde forest near the Netravathi bathing ghat on Wednesday, along with an ID card that police traced back to U.B. Aiyappa, an elderly resident of Ponnampet in Kodagu district.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm