ಬ್ರೇಕಿಂಗ್ ನ್ಯೂಸ್
11-09-25 11:34 am Mangalore Correspondent ಕರಾವಳಿ
ಮಂಗಳೂರು, ಸೆ.11 : ಭಾರತದಲ್ಲಿ ಸೋಶಿಯಲ್ ಮೀಡಿಯಾಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಯುವಜನರ ಮೇಲೆ ದೊಡ್ಡ ಮಟ್ಟದಲ್ಲಿ ಅಪಾಯ ಉಂಟು ಮಾಡುತ್ತಿದೆ. ಅದರಲ್ಲೂ ಸಣ್ಣ ವಯಸ್ಸಿನ ಮಕ್ಕಳಲ್ಲಿ ಗೀಳಿನಂತೆ ಕಾಡುತ್ತಿದ್ದು, ಇದರ ಬಗ್ಗೆ ಪೋಷಕರೇ ಜಾಗೃತಿ ವಹಿಸಬೇಕಾಗಿದೆ ಎಂದು ಕಳೆದ ಹಲವು ವರ್ಷಗಳಿಂದ ಜಾಲತಾಣ ಇನ್ನಿತರ ಸೋಶಿಯಲ್ ಮೀಡಿಯಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ, ವೃತ್ತಿಯಲ್ಲಿ ಬ್ಯಾಡ್ಮಿಂಟನ್ ಕೋಚ್ ಆಗಿರುವ ಗಣೇಶ್ ಕುಡ್ವ ಹೇಳಿದರು.
ಅಶೋಕನಗರದ ಎಸ್ ಡಿಎಂ ಸಿಬಿಎಸ್ಇ ಪ್ರೌಢಶಾಲೆಯಲ್ಲಿ ‘ಹೆಡ್ ಲೈನ್ ಕರ್ನಾಟಕ’ ಡಿಜಿಟಲ್ ಮೀಡಿಯಾ ಸಹಯೋಗದಲ್ಲಿ ಪೋಷಕರು ಮತ್ತು ಶಿಕ್ಷಕರಿಗಾಗಿ ನಡೆದ ಡಿಜಿಟಲ್ ಅಪಾಯಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.










13 ವರ್ಷದವರನ್ನು ಇನ್ಸ್ ಟಾ ಗ್ರಾಮ್, ಫೇಸ್ಬುಕ್ ನಲ್ಲಿ ಲೀಗಲ್ ಆಗಿ ಸೋಶಿಯಲ್ ಮೀಡಿಯಾಗೆ ಸೇರಿಸಿಕೊಳ್ಲಲು ಅವಕಾಶ ಇದೆ. ಆದರೆ ಇನ್ಸ್ ಟಾ ಗ್ರಾಮ್ ನಲ್ಲಿ ಕೆಟ್ಟದ್ದನ್ನು ಸೆನ್ಸಾರ್ ಮಾಡುವ ವ್ಯವಸ್ಥೆ ಇರುವುದಿಲ್ಲ. ವಿದೇಶದಲ್ಲಿ ಕುಳಿತ ಅಪರಿಚಿತರು ಯುವಜನರನ್ನು, ಅದರಲ್ಲು ಹರೆಯದ ಮಕ್ಕಳನ್ನು ಮೆಸೆಂಜರ್ ಬಳಸಿ ಯಾಮಾರಿಸುವುದು, ಕಿರುಕುಳ ನೀಡುವುದು, ಅದರಿಂದ ವಂಚನೆಗೆ ಒಳಪಡಿಸುವುದನ್ನು ಮಾಡುತ್ತಿದ್ದಾರೆ. ಮೆಸೇಜ್ ಬಾಕ್ಸ್ ನಲ್ಲಿ ವಿಡಿಯೋ ಕಾಲ್, ನ್ಯೂಡ್ ಕಾಲ್ ಇತ್ಯಾದಿ ಇರುತ್ತದೆ. ಇದಲ್ಲದೆ, ಇಮೋಜಿಗಳನ್ನು ಬಳಸಿ ಸೆಕ್ಸ್ ಚಾಟ್ ಮಾಡುವುದಕ್ಕೆ ಅವಕಾಶ ಇದೆ. ಇಮೋಜಿ ಬಳಸಿ ಮಕ್ಕಳು ಸೆಕ್ಸ್ ಟಿ ಅನ್ನುವ ಪರಿಕಲ್ಪನೆಯಲ್ಲಿ ಮೆಸೇಜ್ಗಳನ್ನು ಮಾಡುತ್ತಿದ್ದಾರೆ.
ಪೊಲೀಸರ ಕಣ್ತಪ್ಪಿಸಲು ಸಿಂಥೆಟಿಕ್ ಡ್ರಗ್ ಪೂರೈಕೆಗೂ ಇನ್ಸ್ ಟಾದಲ್ಲಿ ಇಮೋಜಿಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಬಗ್ಗೆ ಪೋಷಕರು ತಮ್ಮ ಮಕ್ಕಳ ಮೊಬೈಲನ್ನು ಪರಿಶೀಲಿಸಬೇಕು. ಯಾವುದನ್ನು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ತಿಳಿಯಬೇಕು ಎಂದು ಗಣೇಶ್ ಕುಡ್ವಾ ಸಲಹೆ ನೀಡಿದರು. 13 ವರ್ಷ ಬದಲು ಸೋಶಿಯಲ್ ಮೀಡಿಯಾ ಬಳಕೆಗೆ ಗ್ರಾಹಕರ ವಯಸ್ಸನ್ನು 18 ಅಥವಾ 20 ವರ್ಷಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳಾಗುತ್ತಿದ್ದು, ಇದರ ಬಗ್ಗೆ ನೀತಿ ಜಾರಿಯಾದಲ್ಲಿ ಉತ್ತಮ ಎಂದು ಗಣೇಶ್ ಕುಡ್ವಾ ಅಭಿಪ್ರಾಯ ಪಟ್ಟರು. ಪೋಷಕರು, ಶಿಕ್ಷಕರು ಸೋಶಿಯಲ್ ಮೀಡಿಯಾ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಎಸ್ಡಿಎಂ ಪ್ರೌಢಶಾಲೆಯ ಕರೆಸ್ಪಾಂಡೆಂಟ್ ಶ್ರುತಾ ಹೆಗ್ಡೆ, ಪ್ರಿನ್ಸಿಪಾಲ್ ಜಾಯ್ ಜೀವನ್ ರೈ ಮತ್ತು ಹೆಡ್ ಲೈನ್ ಕರ್ನಾಟಕ ಸಂಸ್ಥೆಯ ರೋಹಿತ್ ಕರ್ಕಡ ಉಪಸ್ಥಿತರಿದ್ದರು.
Unregulated use of social media in India is posing serious risks to children and adolescents, experts warned at an awareness program organized at SDM CBSE High School, Ashoknagar, in association with Headline Karnataka digital media. The program was attended by SDM School Correspondent Shrutha Hegde, Principal Joy Jeevan Rai, and Headline Karnataka representative Rohith Karkada.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 04:32 pm
HK News Staffer
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm