ಬ್ರೇಕಿಂಗ್ ನ್ಯೂಸ್
04-09-25 07:57 pm Mangalore Correspondent ಕರಾವಳಿ
ಮಂಗಳೂರು, ಸೆ.4: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರು ಹೇಳಿದಂತೆ, ಕೇಂದ್ರ ಹಣಕಾಸು ಸಚಿವರು ಜಿಎಸ್ಟಿ ಹೊರೆಯನ್ನು ಇಳಿಸಿ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ದೇಶದ ಬಡ, ಮಧ್ಯಮ ವರ್ಗದ ಜನರಿಗೆ ಇದರಿಂದ ದೊಡ್ಡ ಲಾಭ ಸಿಗಲಿದ್ದು, ದಿನಬಳಕೆ ವಸ್ತುಗಳ ದರವೂ ಇಳಿಯಲಿದೆ. ರಾಷ್ಟ್ರದ ಹಿತದಿಂದ ತೆರಿಗೆ ಇಳಿಸಲು ಒಪ್ಪಿದ ರಾಜ್ಯ ಸರಕಾರಗಳ ಆರ್ಥಿಕ ಸಚಿವರು ಮತ್ತು ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪರೋಕ್ಷವಾಗಿ ಜನರ ಮೇಲೆ ಹೇರಲಾಗುತ್ತಿದ್ದ ತೆರಿಗೆಯನ್ನು ಜಿಎಸ್ಟಿ ಮೂಲಕ ಏಕರೂಪದ ತೆರಿಗೆಯಾಗಿ ಮಾಡಲಾಗಿತ್ತು. ಆದರೆ ನಾಲ್ಕು ಸ್ಲಾಬ್ ಗಳಲ್ಲಿಬೇರೆ ಬೇರೆ ರೂಪದಲ್ಲಿದ್ದ ಜಿಎಸ್ಟಿ ತೆರಿಗೆಯನ್ನು ಈಗ ಸರಳೀಕರಿಸಿದ್ದು ಜನಸಾಮಾನ್ಯರು ಬಳಸುವ ಹೆಚ್ಚಿನ ವಸ್ತುಗಳ ತೆರಿಗೆಯನ್ನು 5 ಶೇಕಡಕ್ಕೆ ಇಳಿಸಲಾಗಿದೆ. ಟಿವಿ ಇನ್ನಿತರ ಉಪಕರಣಗಳ ತೆರಿಗೆಯನ್ನೂ 18ರಿಂದ 5 ಶೇ.ಕ್ಕೆ ಇಳಿಸಿದ್ದಾರೆ.
ಇದಲ್ಲದೆ, ಹಾಲು ಇನ್ನಿತರ ಆಹಾರ ಪದಾರ್ಥಗಳ ಉಪ ಉತ್ಪನ್ನಗಳ ತೆರಿಗೆಯನ್ನೂ ಇಳಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಬಹುತೇಕ ತೆರಿಗೆಯನ್ನು ಶೂನ್ಯಕ್ಕಿಳಿಸಿ ಜನರ ಮೇಲಾಗುತ್ತಿದ್ದ ಹೊರೆಯನ್ನು ಇಳಿಸಿದ್ದಾರೆ. ಜೀವ ರಕ್ಷಕ ಔಷಧಿಗಳು, ಉಪಕರಣಗಳ ಬೆಲೆಯನ್ನೂ ಶೂನ್ಯಕ್ಕೆ ಇಳಿಸಲಾಗಿದೆ. ಜೀವ ವಿಮೆ, ವೈಯಕ್ತಿಕ ವಿಮೆಗಳ ಜಿಎಸ್ಟಿಯನ್ನು ತೆಗೆದು ಹಾಕಲಾಗಿದೆ. ತೆರಿಗೆ ಇಳಿದಿರುವುದರಿಂದ ಸಾಮಾನ್ಯ ಮಾದರಿಯ ವಾಹನಗಳ ಬೆಲೆಯೂ ಇಳಿಕೆಯಾಗಲಿದೆ. ಇದೆಲ್ಲವನ್ನು ಕೇಂದ್ರ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾಡಲಾಗಿದ್ದು, ಬಡ ಮಧ್ಯಮ ವರ್ಗದ ಜನರ ಹಿತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರಿಂದ ರೈತರು ಮತ್ತು ಗ್ರಾಮೀಣ ಭಾಗದಲ್ಲಿ ಕೃಷಿ ಪೂರಕ ಚಟುವಟಿಕೆಗಳಿಗೆ ಒತ್ತು ಸಿಗಲಿದೆ. ಬಡವರಿಗೆ ಶಿಕ್ಷಣ ಹೊರೆಯಾಗ ಬಾರದೆಂದು ತೆರಿಗೆ ಕಡಿತ ಮಾಡಲಾಗಿದೆ. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಆರ್ಥಿಕ ಸಚಿವರೂ ಇದಕ್ಕೆ ಒಪ್ಪಿದ್ದು, ಸ್ವಾರ್ಥ ಬದಿಗಿಟ್ಟು ರಾಷ್ಟ್ರದ ಹಿತದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಸೆ.22ರಿಂದ ಈ ನೀತಿ ದೇಶಾದ್ಯಂತ ಜಾರಿಗೆ ಬರಲಿದ್ದು, ನಿಧಾನಕ್ಕೆ ಜನರ ಅನುಭವಕ್ಕೆ ಬರಲಿದೆ ಎಂದು ಬ್ರಿಜೇಶ್ ಚೌಟ ಹೇಳಿದರು. ತೆರಿಗೆ ಕಡಿತದಿಂದ ರಾಜ್ಯಕ್ಕೆ ಹೊರೆಯಾಗುತ್ತದೆಯಲ್ಲ ಎಂಬ ಪ್ರಶ್ನೆಗೆ, ಅದು ಊಹನೆ ಮಾತ್ರ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಲಿದೆ ಎಂದರು. ಸಿಎ ಶಾಂತರಾಮ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ವಸಂತ ಪೂಜಾರಿ ಇದ್ದರು.
In what is being hailed as a historic decision, the central government has reduced GST rates on several essential items, providing major relief to the country’s poor and middle-class citizens. South Canara MP Brijesh Chowta lauded the move, stating that this fulfills Prime Minister Narendra Modi's Independence Day assurance to reduce the tax burden on the common man.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm