ಬ್ರೇಕಿಂಗ್ ನ್ಯೂಸ್
31-08-25 12:49 pm Udupi Correspondent ಕರಾವಳಿ
ಉಡುಪಿ, ಆ.31 : ಸತತ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ವಿದುಷಿ ದೀಕ್ಷಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿನ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಇವೆಟ್ಟ್ 170 ಗಂಟೆಗಳ ಭರತನಾಟ್ಯ ಮೂಲಕ ದಾಖಲೆ ಸ್ಥಾಪಿಸಿದ್ದರು. ಅದನ್ನೀಗ ಉಡುಪಿಯ ದೀಕ್ಷಾ ಮುರಿದಿದ್ದಾರೆ.
ಆ.21 ರಂದು ಪ್ರತಿ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮದಂತೆ ಭರತನಾಟ್ಯ ಆರಂಭಿಸಿದ್ದ ವಿದುಷಿ ದೀಕ್ಷಾ, ಆ.30ರ ಮಧ್ಯಾಹ್ನ 3.30 ಕ್ಕೆ ನೃತ್ಯ ಪ್ರದರ್ಶನ ಅಂತ್ಯಗೊಳಿಸಿದ್ದಾರೆ. ಆಮೂಲಕ ಸತತ 216 ಗಂಟೆಗಳ ಭರತನಾಟ್ಯ ಪ್ರದರ್ಶನದಿಂದ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ದಾಖಲೆ ಮಾಡುತ್ತಿದ್ದಂತೆ ಪುಷ್ಪವೃಷ್ಟಿ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಣೋಯ್ ಅವರು ವಿದುಷಿ ದೀಕ್ಷಾ ವಿ. ಅವರ ದಾಖಲೆಯ ಬಗ್ಗೆ ಘೋಷಣೆ ಪತ್ರ ನೀಡಿದರು.





ಈ ಹಿಂದೆ ಗುಜರಾತ್ ಮೂಲದ ಯುವತಿಯ ಹೆಸರಲ್ಲಿದ್ದ 127 ಗಂಟೆಗಳ ದಾಖಲೆಯನ್ನು ಮಂಗಳೂರಿನ ರೆಮೋನಾ ಮುರಿದು 170 ಗಂಟೆಗಳ ದಾಖಲೆ ಮಾಡಿದ್ದರು. ಇದಾಗಿ ಒಂದೇ ತಿಂಗಳಲ್ಲಿ ಆ ದಾಖಲೆಯನ್ನು ಮುರಿದು ದೀಕ್ಷಾ ತನ್ನ ಹೆಸರಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅಂದಹಾಗೆ, ದೀಕ್ಷಾ ಬ್ರಹ್ಮಾವರ ತಾಲೂಕಿನ ಮುಂಡ್ಕಿನಜೆಡ್ಡು ನಿವಾಸಿ.
ಮಣಿಪಾಲ ರತ್ನಾ ಸಂಜೀವ ಕಲಾಮಂಡಲದ ಸಹಭಾಗಿತ್ವದಲ್ಲಿ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮ 'ನವರಸ ದೀಕ್ಷಾ ವೈಭವಂ' ಶನಿವಾರ ಸಮಾಪನಗೊಂಡಿತು. ಕಲಾಗುರು ಶ್ರೀಧರ ರಾವ್ ಬನ್ನಂಜೆ ಮತ್ತು ಮಹೇಶ್ ಠಾಕೂರ್ ಹಾಗೂ ಮಾಜಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ವಿಶ್ವ ದಾಖಲೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶನಿವಾರ ಸಂಜೆ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ, ದೀಕ್ಷಾಗೆ ಪ್ರಮಾಣಪತ್ರ ವಿತರಿಸಿ ಅಭಿನಂದನೆ ಸಲ್ಲಿಸಿದರು. ನಾಡೋಜ ಡಾ.ಜಿ.ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುನಿಯಾಲು ಉದಯ ಶೆಟ್ಟಿ ಡಾ.ರೋಶನ್ ಶೆಟ್ಟಿ, ಗುರು ಶ್ರೀಧರ್ ಬನ್ನಂಜೆ, ವಿದುಷಿ ಉಷಾ ಹೆಬ್ಬಾರ್, ಗೀತಾಂಜಲಿ ಸುವರ್ಣ, ಮಹೇಶ್ ಠಾಕೂರ್, ತಂದೆ ವಿಠಲ ಪೂಜಾರಿ, ತಾಯಿ ಶುಭಾ, ಪತಿ ರಾಹುಲ್, ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾಧಿಕಾರಿ ಸ್ವರೂಪಾ ಕೆ.ಟಿ ಉಪಸ್ಥಿತರಿದ್ದರು.
In a historic feat, Bharatanatyam dancer Diksha from Brahmavar has entered the Golden Book of World Records by performing non-stop for 216 hours (nine days), creating a new world record. The record was achieved between August 21 and August 30, with Diksha performing under the stipulated rule of a 15-minute break every three hours.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm