ಬ್ರೇಕಿಂಗ್ ನ್ಯೂಸ್
30-08-25 10:10 pm Mangalore Correspondent ಕರಾವಳಿ
ಮಂಗಳೂರು, ಆ.30 : ಗಣೇಶೋತ್ಸವ ಸಾಮರಸ್ಯದ ಪ್ರತೀಕ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಅನುಷ್ಠಾನಕ್ಕೆ ತಂದಿದ್ದ ಗಣೇಶೋತ್ಸವದಲ್ಲಿ ಎಲ್ಲ ಮತ ಬಾಂಧವರು ಭಾಗವಹಿಸುತ್ತಾರೆ. ಮಂಗಳೂರಿನ ಆರೆಸ್ಸೆಸ್ ಕಾರ್ಯಾಲಯ ಸಂಘನಿಕೇತನದಲ್ಲಿ 78ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು ಶನಿವಾರ ಕ್ರಿಶ್ಚಿಯನ್ ಪ್ರತಿನಿಧಿಗಳು ಪಾಲ್ಗೊಂಡು ಗಣೇಶನಿಗೆ ನಮಿಸಿ ಪ್ರಸಾದ ಸ್ವೀಕರಿಸಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಕ್ರಿಶ್ಚಿಯನ್ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ಹೂ, ಹಣ್ಣುಗಳನ್ನು ಸಮರ್ಪಿಸಿತು. ಗಣೇಶನ ಪ್ರಸಾದವನ್ನು ಸ್ವೀಕರಿಸಿ, ಆರೆಸ್ಸೆಸ್ ನೂತನ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವೇದಿಕೆಯ ಸಂಚಾಲಕ ಫ್ರಾೃಂಕ್ಲಿನ್ ಮೊಂತೆರೋ, ಮತ- ಧರ್ಮದ ಆಚರಣೆ ಬೇರೆ ಇದ್ದರೂ ರಾಷ್ಟ್ರೀಯತೆಯಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶಯ ಕೂಡ ರಾಷ್ಟ್ರೀಯ ಐಕ್ಯತೆ. ಹಾಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಕ್ತಿ, ಶ್ರದ್ಧೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಪ್ರತಿ ವರ್ಷ ಈ ಭೇಟಿ ಹಮ್ಮಿಕೊಳ್ಳುತ್ತಿದ್ದೇವೆ. ಈ ಬಾರಿಯೂ 18 ಮಂದಿ ಕ್ರಿಶ್ಚಿಯನ್ ಪ್ರತಿನಿಧಿಗಳು ಆಗಮಿಸಿ, ಗಣೇಶನ ಪ್ರಸಾದ ಸ್ವೀಕರಿಸಿದ್ದಾರೆ ಎಂದರು.
ಕೇಶವ ಸ್ಮತಿ ಸಂವರ್ಧನಾ ಸಮಿತಿಯ ಉಪಾಧ್ಯಕ್ಷ ಸತೀಶ್ ಪ್ರಭು ಮಾತನಾಡಿ, ಸಮಾಜದ ಕ್ರೈಸ್ತ ಬಂಧುಗಳು ಪ್ರತೀ ವರ್ಷವೂ ಭೇಟಿ ನೀಡಿ ಸಾಮರಸ್ಯದ ಸಂದೇಶ ನೀಡುತ್ತಿದ್ದಾರೆ. ಬಾಲಗಂಗಾಧರ ತಿಲಕರ ಚಿಂತನೆಯನ್ನು ಸಾಕಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ, ಸಮಷ್ಟಿ ಚಿಂತನೆಯಿಂದ ಸಾರ್ವಜನಿಕ ಗಣೇಶೋತ್ಸವ ಆರಂಭಿಸಲಾಗಿತ್ತು. ಗಣಪತಿಯ ಅನುಗ್ರಹದಿಂದ ಸ್ವಾತಂತ್ರ್ಯ ಕಾಲದಿಂದಲೂ ಇಲ್ಲಿ ಗಣೇಶನ ಉತ್ಸವ ನಡೆದುಬಂದಿದೆ ಎಂದು ಹೇಳಿದರು.
ಭರತನಾಟ್ಯದಲ್ಲಿ ಇತ್ತೀಚೆಗೆ ವಿಶ್ವ ದಾಖಲೆ ಮಾಡಿದ ರೆಮೊನಾ ಇವೆಟ್ ಪಿರೇರಾ ಅವರನ್ನು ಇದೇ ವೇಳೆ, ಗಣೇಶೋತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ಬಳಿಕ ಸಾಮರಸ್ಯದ ಸಂಕೇತವಾಗಿ ಜೊತೆಯಾಗಿ ಉಪಹಾರ ಸ್ವೀಕರಿಸಿದರು. ಕೇಶವ ಸ್ಮತಿ ಸಂವರ್ಧನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ಜಿ.ಸುರೇಶ್ ವಿ.ಕಾಮತ್, ಯೋಗೀಶ್ ಆಚಾರ್, ವಿನೋದ್ ಶೆಣೈ, ಅಭಿಷೇಕ್ ಭಂಡಾರಿ, ಆರ್‌ಎಸ್‌ಎಸ್ ಪ್ರಮುಖರಾದ ಪಿ.ಎಸ್.ಪ್ರಕಾಶ್, ಸತೀಶ್ ರಾವ್, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಡಾ.ಜೆಸ್ಸಿ ಮರಿಯಾ, ಡಾ.ಎಲ್ವಿಸ್ ರೋಡ್ರಿಗಸ್, ಡಾ.ತೆರೆಸಾ ಲಿಡಿಯಾ ಮೆಂಡೋನ್ಸಾ, ಪ್ರೊ.ಸಂಧ್ಯಾ ಡಿಸೋಜ, ಲ್ಯಾನಿ ಮರೀಜಾ ಪಿಂಟೋ, ರೇಷ್ಮಾ ಡಿಸೋಜ, ಪ್ರವೀಣ್ ತಾವ್ರೊ, ಮ್ಯಾಕ್ಸಿಂ ಪಿರೇರಾ, ಅರುಣ್‌ರಾಜ್ ರೋಡ್ರಿಗಸ್, ವಿನೋದ್ ಪಿಂಟೋ, ನವೀನ್ ಫರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
Ganesh Chaturthi has long stood as a symbol of harmony, first introduced during the freedom movement by Bal Gangadhar Tilak to unite people across communities. Continuing this legacy, the 78th annual Ganeshotsav is being celebrated at Sanghaniketan, the RSS office in Mangaluru. On Saturday, a delegation of Christian representatives participated in the celebrations, offered prayers, and received prasada.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm