Sameer MD, Latest News: ಬುರುಡೆ ರಹಸ್ಯ ; ಬೆಳ್ತಂಗಡಿ ಠಾಣೆಯಲ್ಲಿ ಮುಂದುವರೆದ ಸಮೀರ್ ವಿಚಾರಣೆ, ವಾಯ್ಸ್ ಸ್ಯಾಂಪಲ್, ಟೆಕ್ನಿಕಲ್ ಸಾಕ್ಷ್ಯ ಸಂಗ್ರಹ, AI ವಿಡಿಯೋ ದುಡ್ಡಿನ ಮೂಲ ಕೆದಕಿದ ಖಾಕಿ, ದೂತನಿಗೆ ಢವ - ಢವ !

25-08-25 10:28 pm       Mangalore Correspondent   ಕರಾವಳಿ

ಯೂಟ್ಯೂಬರ್‌ ಸಮೀರ್‌ ಎಂ.ಡಿ. ವಿಚಾರಣೆ ಬೆಳ್ತಂಗಡಿ ಠಾಣೆಯಲ್ಲಿ ಸೋಮವಾರ ನಿರಂತರ ಆರೂವರೆ ತಾಸು ನಡೆದಿದೆ. ಎರಡನೇ ದಿನದ ವಿಚಾರಣೆಗೆ ವಕೀಲರನ್ನು ಜತೆ ಕರೆತಂದಿದ್ದು ಠಾಣೆಯ ಮೆಟ್ಟಲೇರಿದ್ದಾರೆ. ತನಿಖೆಯನ್ನು ತನಿಖಾಧಿಕಾರಿ ನಾಗೇಶ್‌ ಕದ್ರಿ ಕೈಗೆತ್ತಿಕೊಂಡಿದ್ದಾರೆ. ಇನ್ನೊಬ್ಬ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರೂ ತನಿಖೆಗೆ ಸೇರಿಕೊಂಡಿದ್ದಾರೆ.

ಬೆಳ್ತಂಗಡಿ, ಆ 25 : ಯೂಟ್ಯೂಬರ್‌ ಸಮೀರ್‌ ಎಂ.ಡಿ. ವಿಚಾರಣೆ ಬೆಳ್ತಂಗಡಿ ಠಾಣೆಯಲ್ಲಿ ಸೋಮವಾರ ನಿರಂತರ ಆರೂವರೆ ತಾಸು ನಡೆದಿದೆ. ಎರಡನೇ ದಿನದ ವಿಚಾರಣೆಗೆ ವಕೀಲರನ್ನು ಜತೆ ಕರೆತಂದಿದ್ದು ಠಾಣೆಯ ಮೆಟ್ಟಲೇರಿದ್ದಾರೆ. ತನಿಖೆಯನ್ನು ತನಿಖಾಧಿಕಾರಿ ನಾಗೇಶ್‌ ಕದ್ರಿ ಕೈಗೆತ್ತಿಕೊಂಡಿದ್ದಾರೆ. ಇನ್ನೊಬ್ಬ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರೂ ತನಿಖೆಗೆ ಸೇರಿಕೊಂಡಿದ್ದಾರೆ.

ಮೊದಲಿಗೆ ಅಧಿಕಾರಿಗಳು ಸಮೀರ್‌ನ ಯೂಟ್ಯೂಬ್‌ ಆದಾಯದ ಮೂಲದತ್ತ ವಿಚಾರಿಸಿದ್ದಾರೆ. ಪ್ರಕರಣದ ತನಿಖೆಗೆ ಬಹಳ ಮುಖ್ಯವಾದ ಹಣಕಾಸು ಸಾಕ್ಷ್ಯ ಸಂಗ್ರಹದ ದಾಖಲೆ ತಪಾಸಣೆಗೆ ಅನುವಾಗಿದ್ದಾರೆ. ವಿಡಿಯೋ ಮಾಡಿದ ಉದ್ದೇಶ 'ಹಣಕಾಸು ಲಾಭ' ಆಗಿದೆಯೇ ಎಂದು ಪತ್ತೆ ಮಾಡಿದ್ದಾರೆ. ಹೆಚ್ಚಿನ ಅದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಿಕೊಂಡಿದ್ದಾರೆ.

ಯೂಟ್ಯೂಬ್‌, ಗೂಗಲ್‌ ಮೂಲಕ ಬಂದ ಆದಾಯ, ಬ್ಯಾಂಕ್‌ ಖಾತೆಗೆ ಟ್ರಾನ್ಸ್‌ಫರ್‌ ಆದ ಹಣದ ದಾಖಲೆಯನ್ನು ಪರಿಶೀಲಿಸಿ ದಾಖಲಿಸಿಕೊಂಡಿದ್ದಾರೆ. ಸಿಕ್ಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಚಾನಲ್‌ನ್ನು ಸಮೀರ್‌ ಆರಂಭಿಸಿದ್ದಾ ಅಥವಾ ಯಾರಾದರೂ ಜತೆಯಾಗಿ ನಡೆಸುತ್ತಿದ್ದಾರಾ? ಚಾನಲ್‌ ಆಡ್‌ ಸೆನ್ಸ್‌ ಯಾರ ಹೆಸರಿನಲ್ಲಿದೆ? ಯೂಟ್ಯೂಬ್‌ ಚಾನಲ್‌ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬ ವಿವರವನ್ನು ಕಲೆ ಹಾಕಿದ್ದಾರೆ.

2025ರ ಜುಲೈ ತಿಂಗಳಲ್ಲಿ ಈ ವೀಡಿಯೊ ಪಬ್ಲಿಷ್‌ ಆದ ನಂತರ ಆದಾಯದಲ್ಲಿ ಏರಿಕೆ ಕಂಡಿದ್ದು, ಅದರ ಮಾಹಿತಿ, ಹಣ ಯಾವ ಬ್ಯಾಂಕ್‌ ಖಾತೆಗೆ ಜಮಾ ಆಗಿದೆ ಎಂಬ ವಿವರಗಳನ್ನು ನಮೂದಿಸಿಕೊಂಡಿದ್ದಾರೆ. 'ಧೂತ' ಚಾನಲ್‌ಗೆ ಯಾವುದೇ ರಾಜಕೀಯ/ಸಾಮಾಜಿಕ ಸಂಘಟನೆಗಳಿಂದ ಹಣಕಾಸು ಸಹಾಯ ಸಿಕ್ಕಿದೆಯೇ ಎಂಬ ವಿವರಗಳನ್ನೂ ದಾಖಲಿಸಿಕೊಂಡಿದ್ದಾರೆ.

ಎಸ್‌ಐಟಿ ತನಿಖೆಗೆ ಮೊದಲೇ ಅನಾಮಿಕನ ಗುರುತು ಪತ್ತೆ, ಸಾವಿರಾರು ಕೊಲೆಗಳಾಗಿವೆ, ಕ್ಷೇತ್ರ ವಿರುದ್ಧ ಜನ ದಂಗೆ ಏಳುವಂತೆ ಪ್ರಚೋದನಕಾರಿ ವಿಡಿಯೋ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದಡಿ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6.30ರವರೆಗೆ ವಿಚಾರಣೆ ನಡೆಯಿತು.

ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ನಾಗೇಶ್‌ ಕದ್ರಿ ದಾಖಲೆಗಳ ಮೂಲಕ ವಿಚಾರಣೆ ನಡೆಸಿದ್ದು, ಈ ವೇಳೆ ಸಮೀರ್‌ನ ಧ್ವನಿಯನ್ನು ತಜ್ಞರ ಸಮ್ಮುಖದಲ್ಲಿ ರೆಕಾರ್ಡ್‌ ಮಾಡಿಕೊಳ್ಳಲಾಗಿದೆ. ಮತ್ತೆ ಅಗತ್ಯ ಇದ್ದರೆ ವಿಚಾರಣೆಗೆ ಬರಲು ತಿಳಿಸಿ ನೋಟಿಸ್‌ ನೀಡಿ ಸೂಚನೆ ಕೊಟ್ಟು ದಾಖಲೆಗಳಿಗೆ ಸಹಿ ಪಡೆದು ಕಳುಹಿಸಿದ್ದಾರೆ.

ಸಮೀರ್ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್‌ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಬಾಕಿ ಇರುವುದಾಗಿ ಪೊಲೀಸ್‌ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

In a significant development in the Dharmasthala skull case, YouTuber Sameer MD underwent intense interrogation for over six and a half hours at the Belthangady Police Station on Monday. He appeared with his legal team for the second consecutive day of questioning, as part of the ongoing probe into the controversial video that sparked outrage and prompted an SIT investigation.