Fake Human Right, Rowdy Sheeter Madan Bugadi, Johan Shamine: ಗಿರೀಶ್ ಮಟ್ಟೆಣ್ಣವರ್ ಮಾನವ ಹಕ್ಕು ಅಧಿಕಾರಿಗಳೆಂದು ಹೇಳಿದ್ದು ಯಾರನ್ನು? ಒಬ್ಬ ಹುಬ್ಬಳ್ಳಿಯ ರೌಡಿ ಶೀಟರ್, ಇನ್ನೊಬ್ಬ ಬೆಂಗಳೂರಿನ ಪಾಸ್ಟರ್ ! ಬೆಳ್ತಂಗಡಿಯ ಪೊಲೀಸರನ್ನೇ ಯಾಮಾರಿಸಿದ ಮಾನವ ಹಕ್ಕು ಸೋಗಿನ ಕಂತ್ರಿಗಳು !

24-08-25 10:49 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ತಂದುಕೊಟ್ಟ ವಿಚಾರ ದೂರುದಾರ ಮತ್ತು ಆತನ ಜೊತೆಗಿದ್ದ ತಂಡಕ್ಕೇ ಮುಳುವಾಗತೊಡಗಿದೆ. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಗಿರೀಶ್ ಮಟ್ಟೆಣ್ಣವರ್, ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಇದೇ ವಿಚಾರ ಉಲ್ಟಾ ಹೊಡೆದಿದೆ.

ಮಂಗಳೂರು, ಆ.24 : ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ತಂದುಕೊಟ್ಟ ವಿಚಾರ ದೂರುದಾರ ಮತ್ತು ಆತನ ಜೊತೆಗಿದ್ದ ತಂಡಕ್ಕೇ ಮುಳುವಾಗತೊಡಗಿದೆ. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಗಿರೀಶ್ ಮಟ್ಟೆಣ್ಣವರ್, ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಇದೇ ವಿಚಾರ ಉಲ್ಟಾ ಹೊಡೆದಿದೆ. ಇವೆಲ್ಲದರ ಮಧ್ಯೆ ಹುಬ್ಬಳ್ಳಿಯ ರೌಡಿಶೀಟರ್ ಮತ್ತು ಮಾನವ ಹಕ್ಕು ಸೋಗಿನ ಕತರ್ನಾಕ್ ಖದೀಮರು ಕೂಡ ಇವರ ಜೊತೆಗೆ ಸೇರಿಕೊಂಡು ಬೆಳ್ತಂಗಡಿಯಲ್ಲಿ ಪೋಸು ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ತಿಮರೋಡಿ ಬಂಧನ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ವಿಚಾರದಲ್ಲಿ ಗಿರೀಶ್ ಮಟ್ಟೆಣ್ಣವರ್ ತನ್ನ ಸಂಗಡಿಗರ ಜೊತೆಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದರು. ಈ ವೇಳೆ, ಹುಬ್ಬಳ್ಳಿ ಮೂಲದ ನಟೋರಿಯಸ್ ರೌಡಿ ಮದನ್ ಮುಗಡಿ ಎಂಬಾತನೂ ಜೊತೆಗಿದ್ದ. ಕೋಟ್ ಹಾಕ್ಕೊಂಡು ಬಂದಿದ್ದ ಈತನನ್ನು ಗಿರೀಶ್ ಮಟ್ಟೆಣ್ಣವರ್ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಬಂದಿದ್ದಾರೆಂದು ಹೇಳಿ ಮಾಧ್ಯಮಕ್ಕೆ ಪರಿಚಯಿಸಿದ್ದರು. ಪೊಲೀಸರು ಅರೆಸ್ಟ್ ಮಾಡಲಿ, ಸರೆಂಡರ್ ಆಗೋದಕ್ಕೇ ಬಂದಿದ್ದೇನೆ, ಪೊಲೀಸ್ ಸ್ಟೇಶನ್ ನಂಗೆ ಮಾವನ ಮನೆ ಇದ್ಯಂತೆ ಎಂದೂ ಹೇಳಿ ಅಣಕಿಸಿದ್ದರು. ಮಾಧ್ಯಮಕ್ಕೆ ಹೇಳಿಕೆ ನೀಡುವ ಸಂದರ್ಭದಲ್ಲಿ ಗಿರೀಶ್ ಅಕ್ಕ ಪಕ್ಕದಲ್ಲಿ ಇಬ್ಬರು ಅಧಿಕಾರಿಗಳ ಸೋಗಿನಲ್ಲಿದ್ದವರ ಹಿನ್ನೆಲೆಯೇ ಕತರ್ನಾಕ್ ಇದೆ.  

ಈ ರೀತಿ ಪೋಸು ನೀಡಿದವರಿಬ್ಬರೂ ನಟೋರಿಯಸ್ ವ್ಯಕ್ತಿಗಳು ಅನ್ನೋದು ಬೆಳಕಿಗೆ ಬರುತ್ತಿದೆ. ಮದನ್ ಮುಗಡಿ ಎನ್ನುವಾತ ಹಳೇ ಹುಬ್ಬಳ್ಳಿ ಶಿವಶಂಕರ್ ನಗರ ತಾಂಡಾದ ನಿವಾಸಿಯಾಗಿದ್ದು, ಹಲವಾರು ಕೊಲೆ, ಕೊಲೆಯತ್ನ, ಸುಲಿಗೆ, ದನ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಮತ್ತು ಪೊಲೀಸರಿಗೆಲ್ಲ ಗೊತ್ತಿರುವ ನಟೋರಿಯಸ್ ವ್ಯಕ್ತಿ. ಒಂದು ವರ್ಷದ ಹಿಂದೆ ಹುಬ್ಬಳ್ಳಿ ನಗರ ಕಮಿಷನರ್ ಆಗಿ ಚಾರ್ಜ್ ತೆಗೆದುಕೊಂಡ ಸಂದರ್ಭದಲ್ಲಿ ಶಶಿಕುಮಾರ್ ರೌಡಿ ಪರೇಡ್ ಮಾಡಿದ್ದರು. ಆ ಸಂದರ್ಭದಲ್ಲಿ ಅದೇ ರೌಡಿ ಮದನ್ ಮುಗಡಿಯನ್ನು ನೋಡಿ, ಏನಪ್ಪಾ ಕೈಗೆ ಅಂಬೇಡ್ಕರ್ ಹಚ್ಚೆ ಹಾಕಿಸ್ಕೊಂಡರೆ ರೌಡಿಶೀಟ್ ಹೋಗುತ್ತೆ ಅನ್ಕೊಂಡಿದ್ದೀಯಾ.. ರೌಡಿಗಳು ಅಂಬೇಡ್ಕರ್ ಅವರಂಥ ಮಹಾನ್ ವ್ಯಕ್ತಿಯ ಫೋಟೋ ಹಾಕಿಸಿಕೊಳ್ಳುವ ಸ್ಥಿತಿ ಈ ದೇಶಕ್ಕೆ ಬಂದಿಲ್ಲ. ಅಂಬೇಡ್ಕರ್ ಹಚ್ಚೆ ಹಾಕಿಸ್ಕೊಂಡು ದೌಲತ್ತು ತೋರಿಸ್ತೀಯಾ ಎಂದು ಆವಾಜ್ ಹಾಕಿದ್ದರು. ಹಳೆ ಕೇಸು ಇರೋದು, ಈಗ ಕೇಸು ಇಲ್ಲ ಎಂದು ವಾದಕ್ಕೆ ನಿಂತಾಗ, ಏಯ್ ನೀನು ನನ್ನಲ್ಲಿಯೇ ವಾದ ಮಾಡ್ತೀಯಾ.. ನಮ್ಮ ಮೆನ್ಸ್ ಜೊತೆಗೆ ಹೇಗೆ ಮಾತಾಡಲ್ಲ. ಇಂಥವರನ್ನು ಯಾಕೆ ಬಿಟ್ಟಿದ್ದೀರಿ, ಕೇಸು ಜಡಿದು ಒಳಗೆ ಹಾಕ್ರೀ ಎಂದು ಜೋರು ಮಾಡಿದ್ದರು.

ಇಂಥ ಸೋಗಲಾಡಿಯ ವ್ಯಕ್ತಿಯೀಗ ಬೆಳ್ತಂಗಡಿಗೆ ಬಂದು ಗಿರೀಶ್ ಮಟ್ಟೆಣ್ಣವರ್ ಜೊತೆಗೆ ಮಾನವ ಹಕ್ಕು ಅಧಿಕಾರಿಯೆಂದು ಸೋಗು ಹಾಕಿದ್ದಾನೆ. ಈತನ ಜೊತೆಗೆ ಜಾನ್ ಶಾಮೈನ್ ಎಂಬ ಬೆಂಗಳೂರಿನ ಕ್ರಿಶ್ಚಿಯನ್ ವ್ಯಕ್ತಿಯೂ ಮಾನವ ಹಕ್ಕು ಆಯೋಗದ ಹೆಸರಲ್ಲಿ ಬೆಳ್ತಂಗಡಿಗೆ ಬಂದಿರುವುದು ಪತ್ತೆಯಾಗಿದೆ. ಜಾನ್ ಶಾಮೈನ್ ಬೆಂಗಳೂರಿನಲ್ಲಿ ಹ್ಯೂಮನ್ ರೈಟ್ಸ್ ಹೆಸರಿನಲ್ಲಿ ಓಡಾಡುತ್ತ ಪೊಲೀಸರನ್ನೇ ಬೆದರಿಸಿ ವಸೂಲಿ ಮಾಡುತ್ತಿರುವ ವ್ಯಕ್ತಿಯೆಂಬ ಆರೋಪಗಳಿವೆ. ಇಂಥ ಐನಾತಿ ವ್ಯಕ್ತಿಯೊಂದಿಗೆ ಸೇರಿಕೊಂಡು ರೌಡಿ ಮದನ್ ಮುಗಡಿಯೂ ಬೆಳ್ತಂಗಡಿಗೆ ಬಂದಿದ್ದರು. ಜಾನ್ ಬೆಂಗಳೂರಿನ ದೊಡ್ಡ ಬಳ್ಳಾಪುರದಲ್ಲಿ ತನ್ನದೇ ಚರ್ಚ್ ನಡೆಸ್ಕೊಂಡಿದ್ದು ಅಲ್ಲಿ ಪಾಸ್ಟರ್ ಕೂಡ ಆಗಿದ್ದಾನೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ನ್ಯಾಯ ಆಯೋಗ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದೀನೆಂದು ಪೋಸು ಕೊಡುತ್ತಾನೆ. ಪೊಲೀಸರಿಂದ ಹಿಂಸೆಯಾದರೆ ನಾವು ಸಹಾಯ ಮಾಡುತ್ತೀವಿ ಎಂದು ಹೇಳುವ ಇವರೆಲ್ಲ ನಕಲಿಗಳೆಂದು ಗಿರೀಶ್ ಮಟ್ಟೆಣ್ಣವರ್ ಮತ್ತು ತಂಡಕ್ಕೂ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಇವರು ಆಯೋಗದ ಅಧಿಕಾರಿಗಳೆಂದು ಹೇಳಿಕೊಂಡು ಗಿರೀಶ್ ಮಟ್ಟೆಣ್ಣವರ್ ಬೆಳ್ತಂಗಡಿಯಲ್ಲಿ ಬಹಿರಂಗ ಪೋಸು ಕೊಟ್ಟಿದ್ದಾರೆ. ರೌಡಿಶೀಟರ್ ಮದನ್ ಮುಗಡಿ, ಜಾನ್ ಶ್ಯಾಮೈನ್ ಬೆಳ್ತಂಗಡಿಗೆ ಬಂದಿದ್ದು ಮಾನವ ಹಕ್ಕು ಆಯೋಗದ ಅಧಿಕಾರಿಗಳೆಂದು ಪೋಸು ಕೊಟ್ಟು ಮಾಧ್ಯಮ ತಂಡವನ್ನು, ಪೊಲೀಸರನ್ನೂ ಯಾಮಾರಿಸಿದ್ದಾರೆ. ಪೊಲೀಸ್ ದೌರ್ಜನ್ಯ ಹೆಸರಲ್ಲಿ ಮೇಲ್ನೋಟಕ್ಕೆ ಹೋರಾಟಗಾರರಿಗೆ ಸಹಾಯ ಮಾಡಲೆಂದು ಬಂದಿದ್ದಾರೆ ಎನ್ನಲಾಗುತ್ತಿದೆ. ಇದೇ, ಮದನ್ ಮುಗಡಿ ತನ್ನ ಹಳೆ ರೌಡಿಸಂ ಶೈಲಿಯನ್ನು ಬಿಟ್ಟು ಪೊಲೀಸರಿಂದ ದೌರ್ಜನ್ಯ, ಹಿಂಸೆಯಾದರೆ ಹೇಳಿ, ನಾವು ಸಹಾಯ ಮಾಡುತ್ತೇವೆ ಎನ್ನುವ ವಿಡಿಯೋ ಜಾಲತಾಣದಲ್ಲಿದೆ. ಇದನ್ನು ನೋಡಿದರೆ, ಮದನ್ ಮತ್ತು ಜಾನ್ ಶ್ಯಾಮೈನ್ ಇಬ್ಬರೂ ಜೊತೆಗೂಡಿ ರಾಜ್ಯದಲ್ಲಿ ಮಾನವ ಹಕ್ಕು ಅಧಿಕಾರಿಯ ಸೋಗು ಹಾಕಿರುವುದು ಸ್ಪಷ್ಟವಾಗಿದ್ದು ಪೊಲೀಸರು ಇವರ ಮೇಲೂ ಕೇಸು ಜಡಿಯಬೇಕಾಗಿದೆ.

In a sensational twist to the ongoing Dharmasthala case, two individuals posing as human rights officers—one a known rowdy-sheeter from Hubballi and the other a controversial pastor from Bengaluru—have been exposed for misleading the police and media in Belthangady. The duo, Madan Mugadi and Pastor John Shamine, reportedly accompanied former police officer and activist Girish Mattennavar during a visit to the Belthangady police station and falsely claimed to be officials from a human rights commission.