ಬ್ರೇಕಿಂಗ್ ನ್ಯೂಸ್
18-08-25 04:07 pm Mangalore Correspondent ಕರಾವಳಿ
ಮಂಗಳೂರು, ಆ.18 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆಯ ಮಧ್ಯೆ ರಾಜಕಾರಣಿಗಳ ಮಧ್ಯಪ್ರವೇಶ ಒಟ್ಟು ಪ್ರಕರಣವೇ ಹಳ್ಳ ಹಿಡಿಯುತ್ತಾ ಎನ್ನುವ ಶಂಕೆ ಮೂಡಿಸಿದೆ. ಇದರ ನಡುವಲ್ಲೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ವಿಲೇವಾರಿ ಬಗ್ಗೆ ಪೊಲೀಸರು ಎಷ್ಟು ನಿರ್ಲಕ್ಷ್ಯ ವಹಿಸಿದ್ದರು ಎನ್ನುವ ಬಗ್ಗೆ ಕೆಲವು ಸಾಕ್ಷ್ಯಗಳು ಹೊರಬೀಳುತ್ತಿವೆ. ಆರ್ಟಿಐನಡಿ ಪಡೆದ ಮಾಹಿತಿಗಳನ್ನು ಒಂದೊಂದಾಗಿಯೇ ಸಾಮಾಜಿಕ ಕಾರ್ಯಕರ್ತರು ಹೊರಕ್ಕೆ ಬಿಡುತ್ತಿದ್ದಾರೆ.
2009ರ ಜೂನ್ 15ರಂದು ಧರ್ಮಸ್ಥಳ ಸ್ನಾನಘಟ್ಟದ ಬಳಿ ಪತ್ತೆಯಾದ 15-20 ವರ್ಷದ ಅಪರಿಚಿತ ಹುಡುಗಿಯ ಶವವನ್ನು ಧರ್ಮಸ್ಥಳ ಹೊರ ಠಾಣೆ ಪೊಲೀಸರು ಅದೇ ದಿನವೇ ವಿಲೇವಾರಿ ಮಾಡುವುದಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಬರೆದ ಪತ್ರವೊಂದನ್ನು ಸಾಮಾಜಿಕ ಕಾರ್ಯಕರ್ತ ನವೀನ್ ಸೂರಿಂಜೆ ತನ್ನ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸ್ನಾನಘಟ್ಟದ ಬಳಿ 15-06-09ರಂದು 15-20 ವರ್ಷ ಪ್ರಾಯದ ಅಪರಿಚಿತ ಹುಡುಗಿಯ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 51/09 ಕಲಂ 174 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದೆ. ಮೃತ ಅಪರಿಚಿತ ಹುಡುಗಿಯ ವಾರೀಸುದಾರರು ಯಾರೆಂದು ತಿಳಿದುಬಂದಿರುವುದಿಲ್ಲ.
ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಸದ್ರಿ ಮೃತದೇಹದ ಅಂತ್ಯಸಂಸ್ಕಾರವನ್ನು ಪಂಚಾಯತ್ ವತಿಯಿಂದ ಮಾಡುವರೇ ಕೋರಿಕೆ ಎಂದು ಧರ್ಮಸ್ಥಳ ಹೊರ ಠಾಣೆ ಪೊಲೀಸ್ ಅಧಿಕಾರಿ ಜೂನ್ 15ರಂದೇ ಪಂಚಾಯತ್ ಕಚೇರಿಗೆ ಪತ್ರ ಬರೆದಿರುವ ಪತ್ರ ಇದಾಗಿದ್ದು, ಆರ್ಟಿಐನಡಿ ಈ ಮಾಹಿತಿಯನ್ನು ಪಡೆಯಲಾಗಿದೆ. ಜೂನ್ 15ರಂದು ಮೃತದೇಹ ಪತ್ತೆಯಾಗಿದ್ದರೆ, ಅದೇ ದಿನ ಪೋಸ್ಟ್ ಮಾರ್ಟಂ ನಡೆಸಿ ಅದೇ ದಿನವೇ ವಿಲೇವಾರಿ ಮಾಡುವಂತೆ ಕೇಳಿಕೊಳ್ಳಲಾಗಿದೆ.
ಯಾವುದೇ ಅಪರಿಚಿತ ಶವ ಸಿಕ್ಕರೆ ಕನಿಷ್ಠ 15 ದಿನಗಳ ಕಾಲ ಇಟ್ಟುಕೊಂಡು ವಾರೀಸುದಾರರ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಪೊಲೀಸರು ಶವ ಸಿಕ್ಕ ದಿನವೇ ವಿಲೇವಾರಿ ಮಾಡಲು ತರಾತುರಿಯಲ್ಲಿ ಧರ್ಮಸ್ಥಳ ಗ್ರಾಪಂ ಕಚೇರಿಗೆ ಪತ್ರ ಬರೆದಿರುವುದು ಯಾಕೆ ಎನ್ನುವ ಪ್ರಶ್ನೆ ಮುಂದಿಡಲಾಗಿದೆ. ಈ ಪತ್ರದ ಬಗ್ಗೆ ಜಾಲತಾಣದಲ್ಲಿ ಪರ- ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದರೂ, ಪೊಲೀಸರು ಬರೆದಿರುವ ಪತ್ರದಲ್ಲಿ ಶವ ಪತ್ತೆಯಾದ ದಿನವೇ ಪಂಚಾಯತ್ ಕಚೇರಿಗೂ ವಿಲೇವಾರಿ ಮಾಡಲು ಬರೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪೊಲೀಸರು ತರಾತುರಿಯಲ್ಲಿ ವಿಲೇವಾರಿಗೆ ಮುಂದಾಗಿದ್ದಕ್ಕೆ ಕಾರಣ ಏನು ಎಂದು ಪ್ರಶ್ನೆ ಮಾಡಲಾಗಿದೆ.
Fresh controversy has erupted in the ongoing Dharmasthala human remains case after an RTI disclosure revealed that police showed negligence in handling unidentified bodies in the past. According to information obtained under the Right to Information Act and shared online by activist Naveen Soorinje, the body of an unidentified girl aged 15–20 years was found on June 15, 2009, near the Dharmasthala Snanaghat.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm