ಬ್ರೇಕಿಂಗ್ ನ್ಯೂಸ್
17-08-25 11:06 pm Mangalore Correspondent ಕರಾವಳಿ
ಬಂಟ್ವಾಳ, ಆ.17 : ವಿಟ್ಲ ಬಳಿಯ ಸಿಪಿಸಿಆರ್ ಐ ಬಳಿತ ಪ್ರತಿಷ್ಠಿತ ದೇವಸ್ಯ ಬ್ರಾಹ್ಮಣ ಮನೆತನಕ್ಕೆ ಸೇರಿದ ಪ್ರಗತಿಪರ ಕೃಷಿಕ, ನಿವೃತ್ತ ವಿಜ್ಞಾನಿ, ಖ್ಯಾತ ಇಂಟೀರಿಯರ್ ಡಿಸೈನರ್ ಆಗಿದ್ದ ಕಿಶನ್ ಭಟ್ (55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿಶನ್ ಭಟ್ ಹಿಂದೆ ಹಲವು ವರ್ಷಗಳ ಕಾಲ ವಿಜ್ಞಾನಿಯಾಗಿದ್ದು ಆಬಳಿಕ ಕುಟುಂಬದಿಂದ ಬಂದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. ಅಡಿಕೆ ತೋಟ ಸೇರಿದಂತೆ ಹೈನುಗಾರಿಕೆಯನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿದ್ದರು. ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಪತ್ನಿ ಜೊತೆಗೆ ವಾಸವಿದ್ದರು.
ಮನೆಯಲ್ಲಿ ಕೆಲಸಕ್ಕೆ ಕಾರ್ಮಿಕರನ್ನು ಇಟ್ಟುಕೊಂಡಿದ್ದರು. ದೊಡ್ಡ ದನಗಳನ್ನು ಸಾಕುತ್ತಿದ್ದ ಕಿಶನ್ ಭಟ್ ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿದ್ದ ಅತ್ಯಂತ ಸಾಧು ಸ್ವಭಾವದ ವ್ಯಕ್ತಿ. ಮನೆಯಲ್ಲಿ ಸಣ್ಣ ಮಟ್ಟದ ಮಾತಿನ ಜಗಳವಾಗಿ ನೊಂದು ಭಾನುವಾರ ಬೆಳಗ್ಗೆ ತನ್ನ ನೆಚ್ಚಿನ ಗೋವುಗಳನ್ನು ಕಟ್ಟಿದ್ದ ಹಟ್ಟಿಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ದೇವಸ್ಯ ಬ್ರಾಹ್ಮಣರ ಕುಟುಂಬದ ಬಹು ಶಿಸ್ತಿನ ಮತ್ತು ವಿದ್ಯಾವಂತ ಹಿನ್ನೆಲೆಯನ್ನು ಹೊಂದಿದ್ದು ಹೆಚ್ಚಿನವರು ದೊಡ್ಡ ಹುದ್ದೆಯಲ್ಲಿದ್ದಾರೆ. ಅಪಾರ ಕೃಷಿ ಜಮೀನು ಇದ್ದವರೂ ಇದ್ದಾರೆ. ಇಂಥ ಹಿನ್ನೆಲೆಯ ವ್ಯಕ್ತಿ ದಿಢೀರ್ ಸಾವಿಗೆ ಶರಣಾಗಿದ್ದು ಊರಿನ ಜನರನ್ನು ದಂಗುಬಡಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident, Kishan Bhat (55) — a well-known interior designer, progressive farmer, and retired scientist — reportedly died by suicide at his residence near CPCRI, Vittla.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm