ಬ್ರೇಕಿಂಗ್ ನ್ಯೂಸ್
05-08-25 08:22 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.5: ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳ ತನಿಖೆ ಮುಂದುವರಿದಿದ್ದು ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಗುರುತಿಸಿರುವ 11 ಮತ್ತು 12ನೇ ಸ್ಥಳಗಳಲ್ಲಿ ಮಂಗಳವಾರ ಸಮಾಧಿ ಅಗೆದಿದ್ದು ಯಾವುದೇ ಹೆಣ ಹೂತಿರುವ ಸಾಕ್ಷ್ಯ ಲಭ್ಯವಾಗಿಲ್ಲ.
ಪ್ರಕರಣದಲ್ಲಿ ಸ್ಥಳ ಶೋಧ ತನಿಖೆ ಕೈಗೊಂಡು ಏಳನೇ ದಿನವಾದ ಮಂಗಳವಾರ ಇಡೀ ದಿನ ಸ್ನಾನಘಟ್ಟದ ಬಳಿಯ ಹೆದ್ದಾರಿ ಬದಿಯಲ್ಲಿ ಶೋಧ ಕಾರ್ಯ ನಡೆಯಿತು. ರಸ್ತೆಗೆ ಅಡ್ಡಲಾಗಿ ಪ್ಲಾಸ್ಟಿಕ್ ಪರದೆ ಹಾಕಿದ್ದು ಕಾರ್ಮಿಕರು ಮತ್ತು ಹಿಟಾಚಿ ಬಳಸಿ ಅಗೆಯಲಾಗಿದೆ. ಆರು ಅಡಿ ಆಳ ಮತ್ತು ಐದು ಅಡಿ ಅಗಲಕ್ಕೆ ಅಗೆಯಲಾಗಿದ್ದು ಹೆಣ ಹೂತಿರುವ ಅಥವಾ ಎಲುಬುಗಳ ಸಾಕ್ಷ್ಯ ಸಿಕ್ಕಿಲ್ಲ.





ಆ.4ರ ಸೋಮವಾರ ಹಠಾತ್ತಾಗಿ ದೂರುದಾರ ವ್ಯಕ್ತಿ 11ನೇ ಪಾಯಿಂಟ್ ನಿಂದ 120 ಮೀಟರ್ ದೂರದ ಬೆಟ್ಟಕ್ಕೆ ಪೊಲೀಸರನ್ನು ಕರೆದೊಯ್ದಿದ್ದ. ಈ ವೇಳೆ, ಪೊಲೀಸರೇ ಬೆಚ್ಚಿಬೀಳುವ ರೀತಿ ಕಾಡಿನ ಮಧ್ಯೆ ಮೇಲ್ಭಾಗದಲ್ಲಿಯೇ ಅಸ್ಥಿಪಂಜರ ಪತ್ತೆಯಾಗಿತ್ತು. ಸುಮಾರು ಒಂದು ವರ್ಷದಷ್ಟು ಹಳೆಯ ಅಸ್ಥಿಪಂಜರ ಎನ್ನಲಾಗುತ್ತಿದ್ದು ಸ್ಥಳದಲ್ಲಿ ಅಲ್ಲಲ್ಲಿ ಎಲುಬಿನ ತುಂಡುಗಳು ಬಿದ್ದುಕೊಂಡಿದ್ದವು. ಅದನ್ನು ವೈಜ್ಞಾನಿಕ ರೀತಿಯಲ್ಲೇ ಹೆಕ್ಕಿ ತೆಗೆದು ಪ್ಲಾಸ್ಟಿಕ್ ಬಕೆಟ್ ನಲ್ಲಿ ಗುಡ್ಡದಿಂದ ತರಲಾಗಿತ್ತು. ಈ ಮೂಳೆಗಳ ಚೂರುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಮತ್ತು ವಿಧಿ ವಿಜ್ಞಾನ ಕೇಂದ್ರಕ್ಕೆ ಒಯ್ಯಲಾಗಿದೆ.
ಗುಡ್ಡದ ಮೇಲ್ಭಾಗದ ಬಂಡೆ ಕಲ್ಲಿನ ಎಡೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು ಮರದಲ್ಲಿ ಸೀರೆಯನ್ನು ಕಟ್ಟಿದ ರೀತಿ ಇತ್ತು. ಹೀಗಾಗಿ ಸೀರೆಯನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆಯಿದೆ. ಇದು ಪುರುಷನದ್ದೋ, ಮಹಿಳೆಯದ್ದೋ ಎನ್ನುವುದು ಗೊತ್ತಾಗಿಲ್ಲ. ಆದರೆ ಸುಜಾತ ಭಟ್ ಪರ ವಕೀಲ ಮಂಜುನಾಥ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ಸ್ಥಳದಲ್ಲಿ ಮೂರು ಶವಗಳ ಅಸ್ಥಿಪಂಜರ ಸಿಕ್ಕಿದೆ, ಅದರಲ್ಲೊಂದು ಮಹಿಳೆಯದ್ದು ಎನ್ನುವ ಮಾಹಿತಿ ಇದೆ ಎಂದಿದ್ದಾರೆ.
ಗುಡ್ಡದ ಮೇಲ್ಭಾಗದಲ್ಲಿ ಅಸ್ಥಿಪಂಜರ ಸಿಕ್ಕಿರುವುದನ್ನು ದೂರುದಾರ ವ್ಯಕ್ತಿಯ ಪ್ರಕರಣದಲ್ಲಿ ಸೇರಿಸುವುದಕ್ಕೆ ಆಗುವುದಿಲ್ಲ. ಅನಾಥ ಶವದ ಅಸ್ಥಿಪಂಜರ ಆಗಿರುವುದರಿಂದ ಮತ್ತು ಒಂದು ವರ್ಷ ಹಿಂದಿನದ್ದು ಎನ್ನುವ ಗುಮಾನಿ ಇರುವುದರಿಂದ ಈ ಪ್ರಕರಣವನ್ನೂ ಎಸ್ಐಟಿ ತನಿಖೆಗೆ ಪರಿಗಣಿಸುತ್ತಾ ಗೊತ್ತಿಲ್ಲ. ಇದೇ ವೇಳೆ ಆರ್ಟಿಐ ಕಾರ್ಯಕರ್ತ ಜಯನ್ ಧರ್ಮಸ್ಥಳ ಠಾಣೆಯಲ್ಲಿ ನೀಡಿರುವ, 15 ವರ್ಷಗಳ ಹಿಂದೆ ಬಾಲಕಿಯನ್ನು ಹೂತ ಪ್ರಕರಣವನ್ನು ಡಿಜಿಪಿಯವರ ಸೂಚನೆಯಂತೆ ಎಸ್ಐಟಿ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ದ.ಕ. ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.
The Special Investigation Team (SIT) probing the alleged human burial case in Dharmasthala continued excavations on Tuesday at the 11th and 12th identified spots near the Netravathi river bathing ghat. However, no human remains or evidence of burial were found at either location.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 08:49 pm
HK News Desk
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm