Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ ಉಚಿತ ಎಐ ಶಿಕ್ಷಣ ಕಿಟ್ ; ರಾಜ್ಯದಲ್ಲಿ ಹತ್ತು ಸಾವಿರ ಫಲಾನುಭವಿಗಳಿಗೆ ಕಿಟ್ ವಿತರಿಸುವ ಗುರಿ, ಪೈಲಟ್ ಯೋಜನೆ ಕೈಗೆತ್ತಿಕೊಂಡ ಐಟಿ ಕಂಪನಿ 

22-07-25 09:42 pm       Mangalore Correspondent   ಕರಾವಳಿ

ಎಐ ತಂತ್ರಜ್ಞಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿ. ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಮೌಲ್ಯದ ಎಐ ಶಿಕ್ಷಣ ಕಿಟ್ ಉಚಿತವಾಗಿ ವಿತರಿಸುವ ಪೈಲಟ್ ಯೋಜನೆ ಆರಂಭಿಸಿದೆ ಎಂದು ಯತಿಕಾರ್ಪ್ ಸಂಸ್ಥೆಯ ಮುಖ್ಯಸ್ಥ ಯತೀಶ್ ಕೆ.ಎಸ್ ತಿಳಿಸಿದ್ದಾರೆ. 

ಮಂಗಳೂರು, ಜುಲೈ 22 : ಎಐ ತಂತ್ರಜ್ಞಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿ. ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಮೌಲ್ಯದ ಎಐ ಶಿಕ್ಷಣ ಕಿಟ್ ಉಚಿತವಾಗಿ ವಿತರಿಸುವ ಪೈಲಟ್ ಯೋಜನೆ ಆರಂಭಿಸಿದೆ ಎಂದು ಯತಿಕಾರ್ಪ್ ಸಂಸ್ಥೆಯ ಮುಖ್ಯಸ್ಥ ಯತೀಶ್ ಕೆ.ಎಸ್ ತಿಳಿಸಿದ್ದಾರೆ. 

ಪ್ರತಿ ತಾಲೂಕಿನಲ್ಲಿ 10 ಉದ್ಯೋಗಾಕಾಂಕ್ಷಿಗಳು, ಐವರು ಪ್ರಗತಿಪರ ಕೃಷಿಕರು, 15 ವಿದ್ಯಾರ್ಥಿಗಳು, ಐವರು ಪೊಲೀಸ್ ಅಧಿಕಾರಿಗಳು, ಐವರು ಪತ್ರಕರ್ತರು ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗುವುದು. ರಾಜ್ಯದಲ್ಲಿ ಒಟ್ಟು ಹತ್ತು ಸಾವಿರ ಫಲಾನುಭವಿಗಳನ್ನು ಗುರುತಿಸಿ ಎಐ ಶಿಕ್ಷಣ ಕಿಟ್ ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷ ಪೈಲಟ್ ಯೋಜನೆ ಕಾರ್ಯಕ್ರಮದ ಮೂಲಕ ಆರು ತಿಂಗಳಲ್ಲಿ ರಾಜ್ಯದಲ್ಲಿ ನಾನಾ ಕ್ಷೇತ್ರಗಳ 10 ಸಾವಿರ ಎಐ ತಂತ್ರಜ್ಞರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. 'ಎಐ ಈಗ ಆಯ್ಕೆಯಲ್ಲ, ಅವಶ್ಯಕತೆ' ಎನ್ನುವ ಧ್ಯೇಯವಾಕ್ಯದೊಂದಿಗೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕದಲ್ಲಿ ಎಐ ಸಾಕ್ಷರತಾ ಅಭಿಯಾನ ಆರಂಭಿಸಿದೆ. 

ಎಐ ಕಿಟ್‌ನಲ್ಲಿ ಆ್ಯಕ್ಷನ್ ಕಾರ್ಡ್, ಎಐ ಪ್ರಿಂಟೆಡ್ ಹ್ಯಾಂಡ್‌ಬುಕ್, ಡಿಜಿಟಲ್ ಆ್ಯಕ್ಸೆಸ್ ಮೆಟೀರಿಯಲ್, ಎಐ ವರ್ಕ್ ಬುಕ್, ನೋಟ್ ಪ್ಯಾಡ್, ಮಾಸ್ಕಾಟ್ ಬ್ಯಾಡ್ಜ್ ವೆಲ್‌ಕಮ್ ಲೆಟರ್, ಸರ್ಟಿಫಿಕೆಟ್ ಆಫ್ ಎನ್ ರೋಲ್‌ಮೆಂಟ್, ಲರ್ನಿಂಗ್ ಟ್ರ್ಯಾಕ್ಟರ್ ಮತ್ತಿತರ 20ಕ್ಕೂ ಅಧಿಕ ಟೂಲ್ ಬಳಕೆಯ ಎಐ ತರಬೇತಿ ನೀಡಲಾಗುವುದು. ಫಲಾನುಭವಿಗಳನ್ನು ರೋಟರಿ, ಲಯನ್ಸ್, ಜೇಸಿಐ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರಕಾರೇತರ ಸಂಸ್ಥೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದವರು ಹೇಳಿದರು. 

ವಿಶ್ವದ ಮೊದಲ ಎಐ ಕಾರ್ಡ್

ಯತಿಕಾರ್ಪ್ ಸಂಸ್ಥೆಯ ತಂತ್ರಜ್ಞರು ನಿರಂತರ ಸಂಶೋಧನೆ ನಡೆಸಿ, ವಿಶ್ವದ ಮೊದಲ ಎಐ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸಿದೆ. ಅಮೆರಿಕದ ಎಐ ವಿಜ್ಞಾನಿ ಪ್ರೊ.ಎಸ್.ಎಸ್.ಅಯ್ಯಂಗಾರ್ ಮಾರ್ಗದರ್ಶನದಲ್ಲಿ ಎಐ ಕಾರ್ಡ್ ಅಭಿವೃದ್ಧಿಪಡಿಸಲಾಗಿದೆ. ಎಐ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಪ್ರತಿಯೊಬ್ಬರಲ್ಲಿ ಬೆಳೆಸುವುದು ಅನಿವಾರ್ಯವಾಗಿದೆ. ಈಗಾಗಲೇ ವಿವಿಧ ಕ್ಷೇತ್ರಗಳ ಒಂದು ಲಕ್ಷಕ್ಕೂ ಹೆಚ್ಚು ಬಳಕೆದಾರರಿದ್ದು ವೈದ್ಯರು, ವಕೀಲರು, ಪತ್ರಕರ್ತರು ಸೇರಿ 32 ವಿವಿಧ ಕ್ಷೇತ್ರಗಳ ವೃತ್ತಿಪರರು ಈ ಕಾರ್ಡ್ ನಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. 

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಕೃಪಾ ಕೆ., ಪ್ರತಿನಿಧಿಗಳಾದ ನವ್ಯಾ ಅಮೈ, ಭೂಮಿ ಪೂಜಾರಿ, ಶ್ರೀನಿಧಿ ಸಿ, ರೆತಿಕ್, ಜಿತೇಶ್ ಶೆಟ್ಟಿ ಉಪಸ್ಥಿತರಿದ್ದರು.

In a major step toward promoting AI literacy in Karnataka, Yathicorp India Pvt. Ltd., a leading name in AI innovation, has launched a pilot initiative to distribute AI Education Kits worth ₹20,000 each—completely free of cost—to selected beneficiaries across every taluk in the state. The initiative was announced by Yatheesh K.S., CEO of Yathicorp, at a press conference on Monday.