ಬ್ರೇಕಿಂಗ್ ನ್ಯೂಸ್
19-07-25 06:14 pm Mangalore Correspondent ಕರಾವಳಿ
ಮಂಗಳೂರು, ಜುಲೈ 19 : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಕೊಲೆ ಕೃತ್ಯಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳದಲ್ಲಿ 1995ರಿಂದ 2014ರ ವರೆಗೆ ಸ್ವಚ್ಛತಾ ಕಾರ್ಮಿಕನಾಗಿದ್ದ ವ್ಯಕ್ತಿಯೊಬ್ಬ ನೂರಾರು ಹೆಣಗಳನ್ನು ತಾನೇ ಹೂತು ಹಾಕಿದ್ದೇನೆಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರೂ, ಕರ್ನಾಟಕ ಸರಕಾರ ತನಿಖೆಗೆ ಪೊಲೀಸ್ ತಂಡವನ್ನು ನೇಮಿಸಲು ವಿಫಲವಾಗಿದೆ. ಆತ ನೀಡಿರುವ ಹೇಳಿಕೆ ಆಘಾತಕಾರಿಯಾಗಿದ್ದು, ಹೆಚ್ಚಾಗಿ ಅಪ್ರಾಪ್ತ ಮತ್ತು ಹರೆಯದ ಯುವತಿಯರು ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಾರೆ. ಆತನ ಹೇಳಿಕೆಯ ಹಿನ್ನೆಲೆಯಲ್ಲಿ ವಿಶೇಷ ತನಿಖೆಯಾಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗುತ್ತಿದೆ. ವಿಶೇಷ ತನಿಖಾ ತಂಡ ನೇಮಿಸಬೇಕೆಂದು ಒತ್ತಾಯ ಕೇಳಿಬರುತ್ತಿದ್ದರೂ, ಕರ್ನಾಟಕ ಸರಕಾರ ಮೀನ ಮೇಷ ಎಣಿಸುತ್ತಿದೆ. ನಿಷ್ಪಕ್ಷಪಾತ ತನಿಖೆಯ ಉದ್ದೇಶದಿಂದ ಎನ್ಐಎ ತನಿಖೆ ನಡೆಸಬೇಕೆಂದು ಕೇರಳದ ಕಣ್ಣೂರಿನ ಸಿಪಿಐ ಮುಖಂಡ, ರಾಜ್ಯಸಭೆ ಸಂಸದ ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಗಿದ್ದು, ದೇಶದ ಎಲ್ಲ ಕಡೆಯಿಂದ ಭಕ್ತರು ಬರುತ್ತಾರೆ. ಇಂತಹ ಕ್ಷೇತ್ರದ ಪಾವಿತ್ರ್ಯತೆ ರಕ್ಷಿಸುವ ಜೊತೆಗೆ ಭಕ್ತರ ನಂಬಿಕೆಯಂತೆ ಸತ್ಯ, ನ್ಯಾಯದ ರಕ್ಷಣೆಯೂ ಆಗಬೇಕು. ಪವಿತ್ರ ಕ್ಷೇತ್ರದ ಬಗ್ಗೆ ಜನರು ಭಯ, ಸಂಶಯಗಳನ್ನು ಇಟ್ಟುಕೊಳ್ಳುವಂತೆ ಆಗಬಾರದು. ಒಬ್ಬ ಜನಪ್ರತಿನಿಧಿಯಾಗಿ ಸಂತ್ರಸ್ತರು ಮತ್ತು ಭಕ್ತರ ಪರವಾಗಿ ಸತ್ಯ ಏನೆಂದು ತಿಳಿಯಲು ಬಯಸುತ್ತಿದ್ದು, ಇದಕ್ಕಾಗಿ ಈ ಮನವಿಯನ್ನು ತಕ್ಷಣವೇ ಪರಿಗಣಿಸಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಪತ್ರದಲ್ಲಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
1979ರಲ್ಲಿ ವೇದವಲ್ಲಿ ಎಂಬ ಶಾಲಾ ಶಿಕ್ಷಕಿ ತನ್ನ ಬಾತ್ ರೂಮಿನಲ್ಲೇ ಬೆಂಕಿ ಹತ್ತಿಕೊಂಡು ಜೀವಂತ ದಹನವಾಗಿರುವುದು, 1986ರಲ್ಲಿ ಸ್ಥಳೀಯ ಕಮ್ಯುನಿಸ್ಟ್ ನಾಯಕರೊಬ್ಬರ ಪುತ್ರಿ, ಪದ್ಮಲತಾ ಎಂಬ ಪಿಯುಸಿ ವಿದ್ಯಾರ್ಥಿನಿ ಕಿಡ್ನಾಪ್ ಆಗಿದ್ದಲ್ಲದೆ, ನಗ್ನವಾಗಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, 2004ರಲ್ಲಿ ಅನನ್ಯಾ ಭಟ್ ಎಂಬ ಮೆಡಿಕಲ್ ವಿದ್ಯಾರ್ಥಿನಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದು ಮತ್ತು ಇದರ ಬಗ್ಗೆ ಪ್ರಶ್ನೆ ಮಾಡಿದ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿರುವುದು, ಇದರ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ಎಫ್ಐಆರ್ ಆಗದಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2012ರಲ್ಲಿ ನಾರಾಯಣ ಮತ್ತು ಯಮುನಾ ಎಂಬ ಅಣ್ಣ ತಂಗಿಯರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ತಮ್ಮ ಮನೆಯಲ್ಲೇ ಕೊಲೆಯಾಗಿರುವುದು, ಅವರಿಗೆ ಜಾಗವನ್ನು ಬಿಟ್ಟುಕೊಡುವಂತೆ ಒತ್ತಡ ಹೇರಲಾಗಿತ್ತು. ಆನಂತರ, ಅವರ ಮನೆಯನ್ನು ಕೆಡವಿ ಕಮರ್ಶಿಯಲ್ ಕಟ್ಟಡವನ್ನು ಕಟ್ಟಲಾಗಿತ್ತು. ಆಬಳಿಕ 17 ವರ್ಷದ ಸೌಜನ್ಯಾ ಎಂಬ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥನನ್ನು ಆರೋಪಿಯಾಗಿಸಿ ಆಬಳಿಕ ಕೋರ್ಟಿನಿಂದ ಬಿಡುಗಡೆ ಮಾಡಲಾಗಿತ್ತು. ಪ್ರಕರಣದಲ್ಲಿ ಕೆಲವು ಸಾಕ್ಷಿಗಳು ನಿಗೂಢ ಸಾವನ್ನಪ್ಪಿದ್ದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಧರ್ಮಸ್ಥಳ ಆಸುಪಾಸಿನ ಪುದುವೆಟ್ಟು, ಕಲ್ಲೇರಿ, ಬೋಳಿಯಾರ್, ಅಣ್ಣಪ್ಪ ಬೆಟ್ಟದ ಬಳಿಯ ಕಾಡಿನಲ್ಲಿ ಹಲವಾರು ಯುವತಿಯರ ಶವಗಳನ್ನು ಹೂತಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದು, ಈ ಬಗ್ಗೆ ವ್ಯಕ್ತಿಯೊಬ್ಬ ತಾನೇ ಹೆಣ ಹೂತಿದ್ದಾಗಿ ಹೇಳಿಕೆ ನೀಡಿರುವುದರಿಂದ ಜನರಲ್ಲಿ ಭೀತಿಯ ಭಾವನೆ ಮೂಡಿದೆ. ಸ್ಥಳೀಯ ಠಾಣೆಯಲ್ಲಿ ದಾಖಲಾದ ಅಸಹಜ ಸಾವುಗಳ ಬಗ್ಗೆ ಮತ್ತು ನಾಪತ್ತೆಯಾದ ಯುವತಿಯರ ಬಗ್ಗೆ ಆರ್ಟಿಐ ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಪ್ರತಿಗಳನ್ನು ಪಡೆದಿದ್ದಾರೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿದ್ದು, ಈ ಬಗ್ಗೆ ಸತ್ಯಾಸತ್ಯತೆ ಅರಿಯುವುದಕ್ಕಾಗಿ ನಿಷ್ಪಕ್ಷಪಾತ ತನಿಖೆ ದೃಷ್ಟಿಯಿಂದ ಒಟ್ಟು ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕೆಂದು ಸಂತೋಷ್ ಕುಮಾರ್ ಒತ್ತಾಯಿಸಿದ್ದಾರೆ.
CPI(M) Rajya Sabha MP from Kerala, Elamaram Kareem (referred to as Santosh Kumar in the Kannada text), has written a letter to Union Home Minister Amit Shah demanding a National Investigation Agency (NIA) probe into a series of alleged murders and sexual assaults reportedly linked to Dharmasthala in Karnataka.
19-07-25 03:05 pm
Bangalore Correspondent
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 10:01 pm
Mangalore Correspondent
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
Dharmasthala Case, Santosh Kumar, CPIM: ಧರ್ಮಸ...
19-07-25 06:14 pm
Yakshagana Pataala Venkataramana Bhat: ಯಕ್ಷಗಾ...
19-07-25 02:32 pm
19-07-25 09:25 pm
Mangalore Correspondent
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am