ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ಎಸ್ಸೆಸ್ಸೆಲ್ಸಿ ; ಬಳ್ಪದ ಹಳ್ಳಿ ಹುಡುಗ ರಾಜ್ಯಕ್ಕೆ ಟಾಪರ್, ಆರು ಮಂದಿ 625 !! 11 ಮಂದಿ 624ರ ಸಾಧನೆ !! 

10-08-20 12:31 pm       Mangalore Reporter   ಕರಾವಳಿ

ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ. ಪ್ರತಿ ಬಾರಿ ಮೊದಲ ಸಾಲಿನಲ್ಲಿರುತ್ತಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ 7 ಮತ್ತು 12ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 

ಮಂಗಳೂರು, ಆಗಸ್ಟ್ 10: ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸೋ‌ಂಕು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ. ಪ್ರತಿ ಬಾರಿ ಮೊದಲ ಸಾಲಿನಲ್ಲಿರುತ್ತಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ 7 ಮತ್ತು 12ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 

ವಿಶೇಷ ಅಂದರೆ ಕೊರೊನಾ ಸೋಂಕಿನ ಆತಂಕದ ಮಧ್ಯೆಯೂ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಶಾಲೆಯ ಅನುಷ್ ಕೂಡ ಸೇರಿದ್ದಾನೆ. ಇತರೇ ಆರು ವಿದ್ಯಾರ್ಥಿಗಳ ಜೊತೆ ಅನುಷ್ ಕೂಡ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಸಾಧನೆ ಮಾಡಿದ್ದಾನೆ. ಅನುಷ್, ಬಳ್ಪ ಗ್ರಾಮದ ಲೋಕೇಶ್ ಮತ್ತು ಉಷಾ ದಂಪತಿಯ ಪುತ್ರನಾಗಿದ್ದು ರಾಜ್ಯಕ್ಕೆ ಟಾಪರ್ ಆಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. 

ಇನ್ನು 624 ಅಂಕ ಗಳಿಸಿದವರಲ್ಲಿ 11 ಮಂದಿ ಇದ್ದಾರೆ. ವಿಟ್ಲದ ಅಳಿಕೆಯ ಸತ್ಯಸಾಯಿ ಲೋಕಸೇವಾ ಶಾಲೆಯ ಸುಮುಖ, ಮಂಗಳೂರಿನ ಕೆನರಾ ಹೈಸ್ಕೂಲಿನ ನಿಧಿ ರಾವ್, ಉಡುಪಿ ಜಿಲ್ಲೆಯ ಬೈಂದೂರಿನ ಸಾಂದೀಪನಿ ಶಾಲೆಯ ಸುರಭಿ ಎಸ್. ಶೆಟ್ಟಿ 624 ಅಂಕದ ಸಾಧನೆ ಮಾಡಿದವರಲ್ಲಿದ್ದಾರೆ. 

623 ಮಂದಿ ಅಂಕ ಗಳಿಸಿದವರಲ್ಲಿ ಮೂವರಿದ್ದಾರೆ. ಇನ್ನು 622 ಅಂಕ ಗಳಿಸಿದವರಲ್ಲೂ ಮೂರು ಮಂದಿ ಇದ್ದಾರೆ. 622 ಅಂಕದ ಗಳಿಕೆಯಲ್ಲಿ ಮೂಡುಬಿದ್ರೆಯ ಆಳ್ವಾಸ್ ಪ್ರೌಢಶಾಲೆಯ ಇಬ್ಬರಿದ್ದು ಪ್ರಕೃತಿ ಪ್ರಿಯ ಮತ್ತು ಸಮ್ಮದ್ ಮಹಾವೀರ್ ಈ ಸಾಧನೆ ಮಾಡಿದ್ದಾರೆ.