ಬ್ರೇಕಿಂಗ್ ನ್ಯೂಸ್
18-06-25 10:24 am Mangalore Correspondent ಕರಾವಳಿ
ಮಂಗಳೂರು, ಜೂನ್ 18 : ಜಪ್ಪಿನಮೊಗರು ಹೆದ್ದಾರಿಯಲ್ಲಿ ನಸುಕಿನ ವೇಳೆಗೆ ಭೀಕರ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಸ್ಕೋಡಾ ಕಾರು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಕಾರು ಚಾಲಕ, ಮಂಗಳೂರಿನ ಕದ್ರಿ ನಿವಾಸಿ ಅಮನ್ ರಾವ್(22) ಮತ್ತು ಚಾಲಕನ ಸೀಟಿನ ಹಿಂಬದಿಯಲ್ಲಿದ್ದ ದೇರೆಬೈಲ್ ನಿವಾಸಿ, ಎನ್ಎಸ್ ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ(24) ಮೃತಪಟ್ಟವರು.






ತಡರಾತ್ರಿ 2.30ರ ವೇಳೆಗೆ ಘಟನೆ ನಡೆದಿದೆ. ರಾ.ಹೆ. 66ರ ಜಪ್ಪಿನಮೊಗರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎದುರಲ್ಲೇ ಅಪಘಾತ ನಡೆದಿದೆ. ಐವರು ಯುವಕರಿದ್ದ ಫೋಕ್ಸ್ ವೇಗನ್ ವರ್ಟಸ್ ಕಾರು ತಲಪಾಡಿಯಿಂದ ಮಂಗಳೂರಿನ ಕಡೆಗೆ ಅತಿ ವೇಗದಿಂದ ಧಾವಿಸುತ್ತಿತ್ತು. ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಕಾರು ಸಂಪೂರ್ಣ ಪುಡಿಯಾಗಿದ್ದು ಇಂಜಿನ್ ಭಾಗವೇ ಹೊರಕ್ಕೆ ಬಂದಿದ್ದು ಏರ್ ಬ್ಯಾಗ್ ಚಿಂದಿಯಾಗಿದೆ. ಸಾಮಾನ್ಯವಾಗಿ ಜರ್ಮನಿ ಮೂಲದ ಫೋಕ್ಸ್ ವೇಗನ್ ಕಾರು ಡಿಕ್ಕಿಯಾದರೂ ಪ್ರಾಣಾಪಾಯ ಆಗಲ್ಲ. ಏರ್ ಬ್ಯಾಗ್ ಮತ್ತು ಹೊರಭಾಗವೂ ಗಟ್ಟಿಯಾಗಿರತ್ತದೆ. ಇಲ್ಲಿ 200 ಕಿಮೀ ವೇಗದಲ್ಲಿ ಬಂದಿರುವ ಸಾಧ್ಯತೆಯಿದ್ದು ಅದರಿಂದಾಗಿ ಇಷ್ಟೊಂದು ಭೀಕರ ಸ್ಥಿತಿಯಾಗಿದೆ ಎಂದು ಕಾರಿನ ಬಗ್ಗೆ ತಿಳಿದವರು ಹೇಳುತ್ತಾರೆ.
ಮೃತಪಟ್ಟವರಲ್ಲಿ ಓಂಶ್ರೀ ಪೂಜಾರಿ ದಕ್ಷಿಣ ಕನ್ನಡ ಎನ್ ಎಸ್ಐಯು ಘಟಕದ ಉಪಾಧ್ಯಕ್ಷರಾಗಿದ್ದು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿದ್ದರು. ಅಮನ್ ರಾವ್ ಆತನ ಗೆಳೆಯನಾಗಿದ್ದು ರಾತ್ರಿ ಕಂಕನಾಡಿಯಲ್ಲಿ ಪಾರ್ಟಿ ಮುಗಿಸಿ ತಲಪಾಡಿಯಲ್ಲಿ ಊಟ ತಿಂದು ಮುಗಿಸಿ ಹಿಂತಿರುಗುತ್ತಿದ್ದರು. ಜೊತೆಗಿದ್ದ ವಂಶಿ ಮತ್ತು ಆಶಿಕ್ ಗಂಭೀರ ಗಾಯಗೊಂಡಿದ್ದು ತೀವ್ರ ನಿಗಾದಲ್ಲಿದ್ದಾರೆ. ಇವರೊಂದಿಗೆ ಇನ್ನೊಬ್ಬ ಇಟಲಿ ಮೂಲದ ಪ್ರವಾಸಿಗ ಜೆರ್ರಿ ಎಂಬಾತನಿದ್ದು ಆತ ಅಪಾಯದಿಂದ ಪಾರಾಗಿದ್ದಾನೆ. ಮೃತ ಅಮನ್ ರಾವ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಜೊತೆಗೆ ಗುರುತಿಸಿಕೊಂಡಿದ್ದು ಫ್ಲೆಕ್ಸ್, ಪೋಸ್ಟರ್ ಮಾಡುವ ಉದ್ಯಮ ನಡೆಸುತ್ತಿದ್ದ.
A tragic accident occurred early morning on the NH-66 near Japinamogaru, where a speeding Volkswagen Virtus car lost control and crashed into a divider. Two young men, Aman Rao (22) of Kadri and Omshree Poojary (24), NSUI district vice-president from Derebail, died on the spot. The vehicle, reportedly traveling at over 200 km/h, was completely mangled.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm