ಬ್ರೇಕಿಂಗ್ ನ್ಯೂಸ್
27-04-24 05:31 pm HK News Desk ಕರಾವಳಿ
ಪುತ್ತೂರು, ಎ.27: ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತನಗೆ ಈ ಮದುವೆ ಬೇಡ ಎಂದು ರಂಪಾಟ ನಡೆಸಿದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದ್ದು ಕೊನೆಗೆ ಪೊಲೀಸರ ಸಮಕ್ಷಮ ರಾಜಿ ಪಂಚಾಯ್ತಿ ಆದರೂ ಮದುವೆ ಸಂಬಂಧ ಮುರಿದು ಬಿದ್ದಿದೆ.
ಕೊಣಾಲು ಗ್ರಾಮದ ಉಮೇಶ ಹಾಗೂ ಬಂಟ್ವಾಳ ತಾಲೂಕು ಕುಳ ಗ್ರಾಮದ ಸರಸ್ವತಿ ಅವರ ಮದುವೆ ನಿಗದಿಯಾಗಿತ್ತು. ನಿನ್ನೆ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದೂ ಆಗಿತ್ತು.
ಧಾರೆ ಕಾರ್ಯಕ್ರಮ ನಡೆದು ವಧು ಹಾಗೂ ವರ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು. ಕರಾವಳಿ ಹಿಂದು ಸಂಪ್ರದಾಯ ಪ್ರಕಾರ ಕೊನೆಗೆ ತಾಳಿ ಕಟ್ಟಿದರೆ ಮದುವೆ ಮುಗಿದಂತೆ. ಆದರೆ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿದ್ದು ರಂಪಾಟ ನಡೆಸಿದ್ದಾಳೆ. ಇದ್ದಕ್ಕಿದ್ದಂತೆ ವಧುವಿನ ಈ ನಿರ್ಧಾರದಿಂದ ಎರಡೂ ಕಡೆಯವರು ವಿಚಲಿತಗೊಂಡಿದ್ದು ವಧುಮಗಳನ್ನು ಮನವೊಲಿಸಿದರೂ ಆಕೆ ತಾಳಿ ಕಟ್ಟಿಸಿಕೊಳ್ಳಲು ಬಿಡಲಿಲ್ಲ. ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ್ದು ಅಲ್ಲಿ ರಾಜಿ ಪಂಚಾತಿಕೆ ನಡೆಸಲಾಯಿತು.
ಪೊಲೀಸ್ ಠಾಣೆಯಲ್ಲಿ ವಧು ಸರಸ್ವತಿ ಪಶ್ಚಾತಾಪ ಪಟ್ಟಿದ್ದು ಉಮೇಶ ಅವರನ್ನು ಮದುವೆ ಆಗಲು ಒಪ್ಪಿಗೆ ಸೂಚಿಸಿದ್ದಾಳೆ. ಆದರೆ ಅಷ್ಟರ ವರೆಗೂ ಪಟ್ಟು ಬಿಡದೆ ಮದುವೆ ಕಾರ್ಯವನ್ನೇ ಹಾಳು ಮಾಡಿದ ವಧುವನ್ನು ಉಮೇಶ್ ನಿರಾಕರಿಸಿದ್ದು ಮದುವೆ ಸಂಬಂಧವೇ ಮುರಿದು ಬಿದ್ದಿದೆ. ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆದು ತಮ್ಮಷ್ಟಕ್ಕೇ ತೆರಳಿದ್ದಾರೆ.
ಇತ್ತ ವರನ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಅಡುಗೆ ಸಿದ್ಧಪಡಿಸಲಾಗಿತ್ತು. 500 ಮಂದಿಗೆ ಊಟಕ್ಕೆ ಸಿದ್ಧಪಡಿಸಿದ್ದಲ್ಲದೆ, ಸಾವಿರದಷ್ಟು ಐಸ್ ಕ್ರೀಮ್ ಕೂಡ ತರಿಸಲಾಗಿತ್ತು. ಕೊನೆ ಕ್ಷಣದಲ್ಲಿ ಯುವತಿ ಮದುವೆ ರದ್ದುಗೊಂಡಿದ್ದರಿಂದ ಎರಡು ಕಡೆಯವರಿಗೂ ಲಕ್ಷಾಂತರ ರೂ. ನಷ್ಟ ಆಗಿದೆ. ಇಷ್ಟಕ್ಕೂ ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದು ಯಾಕೆನ್ನುವುದು ತಿಳಿದುಬಂದಿಲ್ಲ.
A marriage at the Konalu village wedding hall took a dramatic turn as the bride refused to allow the groom to tie the mangalsutra on Friday. The marriage of Umesh, son of the late Kolpe Babu Gowda, was arranged with Saraswati, daughter of the late Koragappa Gowda of Kula in Bantwal.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 07:06 pm
Mangaluru Staffer
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm