ಬ್ರೇಕಿಂಗ್ ನ್ಯೂಸ್
22-04-24 07:26 pm Mangalore Correspondent ಕರಾವಳಿ
ಮಂಗಳೂರು, ಏ.22: ಭಾರತೀಯ ವಾಯುಪಡೆಯಲ್ಲಿ ಸೇವೆಗೈದು ನಿವೃತ್ತಿಯಾದ ಮಂಗಳೂರಿನ ಕಂಕನಾಡಿ ನಿವಾಸಿ 72 ವರ್ಷದ ಯೋಧ ದಿವಾಕರ್ ತನ್ನ ಒಂದು ತಿಂಗಳ ಪಿಂಚಣಿ ದುಡ್ಡನ್ನು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಚುನಾವಣಾ ವೆಚ್ಚಕ್ಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಾವು ದೇಶಕ್ಕಾಗಿ ದುಡಿದು ನಿವೃತ್ತಿಯಾದವರನ್ನು ಸರಕಾರ, ಅಧಿಕಾರಿ ವರ್ಗ ಕ್ಷುಲ್ಲಕವಾಗಿ ನೋಡುತ್ತ ಬಂದಿದೆ. ಈ ಬಾರಿ ಸೇನೆಯಲ್ಲಿ ದುಡಿದ ವ್ಯಕ್ತಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದ್ದು ನಮಗೆಲ್ಲ ಹೆಮ್ಮೆ ತಂದಿದೆ. ಅವರನ್ನು ಗೆಲ್ಲಿಸಲು ನಾವು ಪೂರ್ಣ ಮಟ್ಟದ ಬೆಂಬಲ ನೀಡುತ್ತೇವೆ. ನನ್ನ ಒಂದು ತಿಂಗಳ ಪಿಂಚಣಿ ಮೊತ್ತವನ್ನು ಚೌಟರ ಚುನಾವಣೆ ವೆಚ್ಚಕ್ಕೆ ನೀಡುತ್ತಿದ್ದು, ನಮ್ಮೆಲ್ಲರ ಹಾರೈಕೆ ಬಯಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರ ಹಿಡಿದರೆ ದೇಶ ಉಳಿಯಲ್ಲ
ದೇಶಕ್ಕಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕಾಗಿದೆ. ಕಾಂಗ್ರೆಸ್ ದೇಶ ಹಿತ ಬಯಸುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಅಧಿಕಾರ ನೀಡಿದಂತಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಅಧಿಕಾರ ನಡೆಸುವಂತಾದರೆ ಇನ್ನು 50 ವರ್ಷದಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ. ಹಾಗಾಗಿ ಪ್ರಜ್ಞಾವಂತ ಮತದಾರರು ದೇಶದ ಹಿತಕ್ಕಾಗಿ ಬಿಜೆಪಿ ಪರ ಮತ ಚಲಾಯಿಸಬೇಕಿದೆ ಎಂದರು.
ಐದು ಜಿಲ್ಲಾಧಿಕಾರಿ ಬಳಿ ಹೋದರೂ ನ್ಯಾಯ ಸಿಕ್ಕಿಲ್ಲ
ನನ್ನ ದುಡಿದ ಹಣದಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ 2.36 ಎಕ್ರೆ ಜಾಗ ಖರೀದಿಸಿದ್ದೆ. ಆದರೆ ಆ ಜಾಗವು ನೇತ್ರಾವತಿ ಅಣೆಕಟ್ಟು ಸಲುವಾಗಿ ಮಹಾನಗರ ಪಾಲಿಕೆಗೆ ಹೋಗಿದೆ. ಆದರೆ 23 ಸೆಂಟ್ ಜಾಗದ ಪರಿಹಾರ ಇನ್ನೂ ಸಿಕ್ಕಿಲ್ಲ. ಇದಕ್ಕಾಗಿ ಕಳೆದ ಆರು ವರ್ಷಗಳಲ್ಲಿ ಐದು ಜಿಲ್ಲಾಧಿಕಾರಿಗಳ ಬಳಿಗೂ ಹೋಗಿದ್ದೇನೆ. ಯಾವುದೇ ಅಧಿಕಾರಿಯೂ ನಾನೊಬ್ಬ ಯೋಧನೆಂದು ಹೇಳಿದರೂ ನನ್ನ ಕೆಲಸ ಮಾಡಿಸಿಕೊಟ್ಟಿಲ್ಲ. ಹೈಕೋರ್ಟಿಗೆ ಹೋಗಿ ಆದೇಶ ತಂದರೂ, ಜಿಲ್ಲಾಧಿಕಾರಿಯಾಗಲೀ, ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಆಗಲೀ ನನ್ನ ಕೆಲಸ ಮಾಡಿಕೊಟ್ಟಿಲ್ಲ. ಡೀಸಿ ಕೋರ್ಟಿನಲ್ಲಿ ಒಬ್ಬ ನ್ಯಾಯಾಧೀಶರಂತೂ ನನ್ನ ಬಳಿಯೇ ಲಂಚ ಕೇಳುವಂತಹ ಸ್ಥಿತಿ ಎದುರಿಸಿದ್ದೇನೆ. ಭ್ರಷ್ಟಾಚಾರ ತೊಲಗಿಸಬೇಕು, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ. ಸೇನೆಯಲ್ಲಿದ್ದವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಕಡಿಮೆಯಾಗಬಹುದು. ನಮ್ಮ ಪರವಾಗಿ ಸಂಸತ್ತಿನಲ್ಲಿ ಧ್ವನಿ ಬರಬಹುದು ಎಂಬ ವಿಶ್ವಾಸ ಇದೆ ಎಂದು ಹೇಳಿದರು.
1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಭಾಗವಹಿಸಿದ್ದ ದಿವಾಕರ್ ಮೂಲತಃ ಉಳ್ಳಾಲದ ಮುಕ್ಕಚ್ಚೇರಿಯವರು. ಅಲ್ಲಿದ್ದ ಜಾಗವನ್ನು ತಮ್ಮ ಕುಟುಂಬದ ದೈವಸ್ಥಾನಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಈಗ ಮಕ್ಕಳ ಜೊತೆಗೆ ಮಂಗಳೂರಿನ ಕಂಕನಾಡಿಯಲ್ಲಿ ನೆಲೆಸಿದ್ದಾರೆ.
Mangalore Ex Indian army soldier Divakar to donate his pension fund to BJP MP candidate Brijesh Chowta
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm