ಬ್ರೇಕಿಂಗ್ ನ್ಯೂಸ್
21-04-24 04:13 pm Mangalore Correspondent ಕರಾವಳಿ
ಮಂಗಳೂರು, ಎ.21: ಪ್ರವಾಸಿ ತಾಣಗಳಲ್ಲಿ ನದಿ, ಕಡಲಿನ ಮಧ್ಯೆ ತೇಲುವ ಹೋಟೆಲ್ ಗಳನ್ನು ಕಂಡಿದ್ದೇವೆ. ಆದರೆ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಆಗಸದಲ್ಲಿ ಕುಳಿತು ಆಹಾರ ಸೇವಿಸಲು ಹೋಟೆಲ್ ಸಿದ್ಧವಾಗುತ್ತಿದೆ. ಹೌದು, ಭೂಮಿಯಿಂದ ಬರೋಬ್ಬರಿ 120 ಅಡಿ ಎತ್ತರದಲ್ಲಿ ಕುಳಿತು ಕಡಲಿನ ಮೇಲೊಂದು ಹೆಲಿಕಾಪ್ಟರಿನಲ್ಲಿ ಕುಳಿತ ರೀತಿ ಆಹಾರ ಸವಿಯಲು ವೇದಿಕೆ ಸಿದ್ಧವಾಗುತ್ತಿದೆ.
ಬೀಚ್ ಪ್ರವಾಸೋದ್ಯಮದ ಆಕರ್ಷಣೆಗಾಗಿ ಕರಾವಳಿ ತೀರದಲ್ಲೇ ಮೊದಲ ಬಾರಿಗೆ “ಸ್ಕೈ ಡೈನಿಂಗ್’ ಪಣಂಬೂರು ಬೀಚ್ನಲ್ಲಿ ತೆರೆದುಕೊಳ್ಳಲಿದೆ. ಪಣಂಬೂರು ಬೀಚ್ ನಿರ್ವಹಣೆಯ ಗುತ್ತಿಗೆ ಪಡೆದಿರುವ ಬಿಲ್ಡರ್ ಲಕ್ಷ್ಮೀಶ ಭಂಡಾರಿ ನೇತೃತ್ವದ “ಕದಳೀ ಬೀಚ್ ಟೂರಿಸಂ ಸಂಸ್ಥೆ’ ಆಗಸದಲ್ಲಿ ಹೊಟೇಲ್ ಯೋಜನೆ ರೂಪಿಸಿದೆ. ಸದ್ಯಕ್ಕೆ ಈ ಕುರಿತು ಕ್ರೇನ್ ಇನ್ನಿತರ ಪರಿಕಲ್ಪನೆಗಳ ಸಿದ್ಧತೆ ನಡೆಯುತ್ತಿದ್ದು ಮೇ ಮೊದಲ ವಾರದಲ್ಲಿ ಅಧಿಕೃತ ಆರಂಭಗೊಳ್ಳುವ ಸಾಧ್ಯತೆ ಇದೆ.
ಆಗಸದಲ್ಲಿ ಊಟ, ಉಪಾಹಾರ ಸವಿಯುವ “ಸ್ಕೈ ಡೈನಿಂಗ್’ ಎನ್ನುವ ಪರಿಕಲ್ಪನೆ ವಿದೇಶಗಳಲ್ಲಿ ಕೆಲವು ಕಡೆ ಆಕರ್ಷಣೆ ಗಿಟ್ಟಿಸಿದೆ. ಭಾರತದಲ್ಲೂ ಈ ರೀತಿಯ ಡೈನಿಂಗ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಂಗಳೂರಿನಲ್ಲಿ ಬೀಚ್ ಟೂರಿಸಂ ಬೆಳೆಸಲು ಜಿಲ್ಲಾಡಳಿತವೂ ಪ್ರೋತ್ಸಾಹ ನೀಡುತ್ತಿದ್ದು ಪಣಂಬೂರಿನಲ್ಲಿ ಆರಂಭಗೊಂಡರೆ ಕರಾವಳಿಗೆ ಬರುವ ಪ್ರವಾಸಿಗರಿಗೆ ಹೊಸ ಅನುಭವ ನೀಡಬಹುದು.
ಇದಕ್ಕಾಗಿ ಕ್ರೇನ್ ಅಳವಡಿಕೆ ಆಗುತ್ತಿದ್ದು 120 ಅಡಿಗಳಷ್ಟು ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ದು ಉಪಹಾರ ಸವಿಯಲು ಏರ್ಪಾಟು ಮಾಡಲಾಗಿದೆ. ಒಂದು ಕಡೆ ವಿಶಾಲ ಸಮುದ್ರ, ಇನ್ನೊಂದು ಕಡೆ ಮಂಗಳೂರು ನಗರದ ನೋಟ ಕಾಣಸಿಗಲಿದೆ. ಪ್ರವಾಸಿಗರಿಗೆ ವಿಮಾನದಲ್ಲಿ ಕುಳಿತ ರೀತಿಯ ಅನುಭವ ಸಿಗಲಿದೆ. ಸ್ಕೈ ಡೈನಿಂಗ್ ಜತೆಗೆ ಸಾಹಸ ಕ್ರೀಡೆ, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್ ಗಳಿಗೆ ಜಿಲ್ಲಾಡಳಿತ – ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮೀಶ್ ಭಂಡಾರಿ.
ಗಾಜಿನಿಂದ ತಯಾರಿಸಿದ ಕ್ಯಾಬಿನಲ್ಲಿ ಕುಳಿತು ಒಮ್ಮೆಗೆ 16 ಮಂದಿ ಸಂಗೀತದ ಜತೆಗೆ ತಿನಿಸು ಸವಿಯಬಹುದು. ಎಲ್ಲರಿಗೂ ಸೇಫ್ಟಿ ಬೆಲ್ಟ್ ಅಳವಡಿಸಲಿದ್ದು ಸುರಕ್ಷತೆಗೆ ಆದ್ಯತೆ ಇರಲಿದೆ. ಹೊಟೇಲ್ ಪರಿಚಾರಕರಿಗೆ ಮತ್ತು ತಾಂತ್ರಿಕ ಸಿಬಂದಿಗೆ ಪ್ರತ್ಯೇಕ ಕ್ಯಾಬಿನ್ ಇರಲಿದೆ. ಪಣಂಬೂರು ತೀರದಲ್ಲಿ ಸ್ಕೈ ಡೈವಿಂಗ್ ಮಾಡುವುದಕ್ಕೆ ಸಿದ್ಧತೆ ನಡೆದಿತ್ತು. ಅದಕ್ಕೂ ಮೊದಲೇ ಸ್ಕೈ ಡೈನಿಂಗ್ ಕಾರ್ಯರೂಪಕ್ಕೆ ಬರಲಿದೆ.
Sky dining hotel to come up at Panambur beach in Mangalore. An exciting opportunity is on the horizon for the public to savor delectable cuisine while gazing upon the picturesque cityscape from a lofty height of 120 feet above ground level.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am