ಬ್ರೇಕಿಂಗ್ ನ್ಯೂಸ್
29-02-24 10:43 am Mangalore Correspondent ಕರಾವಳಿ
ಮಂಗಳೂರು, ಫೆ.28: ಈಗೆಲ್ಲಾ ದೈವ, ದೇವರುಗಳ ಬಗ್ಗೆ ಜನರು ನಂಬಿಕೆ ಕಳಕೊಳ್ಳುತ್ತಿದ್ದಾರೆ ಎನ್ನುವ ಟೀಕೆ ಕೇಳಿಬರುತ್ತಿರುವಾಗಲೇ ಮಂಗಳೂರಿನಲ್ಲಿ ದೈವ ಪವಾಡ ತೋರಿಸಿದೆ. ಮಂಗಳೂರು ನಗರದ ಯೆಯ್ಯಾಡಿ ಕೈಗಾರಿಕಾ ಸಂಕೀರ್ಣದ ಒಳಗಡೆ ಇರುವ ನಾಗ ರಕ್ತೇಶ್ವರಿ ದೈವ ಸಾನ್ನಿಧ್ಯದ ವಠಾರದಲ್ಲಿ ರಾತ್ರಿ ವೇಳೆ ದೈವದ ಸಂಚಾರ ಜನಸಾಮಾನ್ಯರ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲ, ಅದನ್ನು ಆಸ್ತಿಕ ಭಕ್ತರು ಕುತೂಹಲದಿಂದ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದು ವಿಡಿಯೋ ವೈರಲ್ ಮಾಡಿದ್ದಾರೆ.
ಮಧ್ಯರಾತ್ರಿ ಗೆಜ್ಜೆ ಸದ್ದು ಹಾಗು ಬೆಂಕಿಯ ರೂಪದಲ್ಲಿ ದೈವದ ಸಂಚಾರ ಆಗುವ ವಿಸ್ಮಯಕಾರಿ ದೃಶ್ಯ ಸ್ಥಳೀಯ ನಿವಾಸಿಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಂಗಳೂರಿನ ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾದ ಲಿಯೋ ಕ್ರಾಸ್ತಾ ಕಾಂಪೌಂಡ್ ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ದೈವದ ಗೆಜ್ಜೆ ಸದ್ದು ಕೇಳಿಬರುತ್ತಿದೆ. ಮಧ್ಯರಾತ್ರಿ ಕಳೆದ ಬಳಿಕ ದೈವದ ಸಂಚಾರ ಆರಂಭವಾಗುತ್ತಿದ್ದು, ಅಲ್ಲಿನ ತುಸು ದೂರದ ಎರಡು ಮಾರ್ಗ ಜೋಡುವ ಸ್ಥಳದಿಂದ ದೈವ ಸಾನ್ನಿಧ್ಯ ಇರುವಲ್ಲಿ ವರೆಗೆ ಗೆಜ್ಜೆ ಸದ್ದು ಕೇಳಿಬರುತ್ತಿದೆ. ಇದನ್ನು ಸ್ಥಳೀಯ ಪರಿಸರದ ಹಲವಾರು ಮಂದಿ ಕೇಳಿಸಿಕೊಂಡಿದ್ದು ರಕ್ತೇಶ್ವರಿ ದೈವದ ಸಂಚಾರ ಎಂದು ನಂಬಿದ್ದರು. ಅಲ್ಲದೆ, ಆ ದೈವಕ್ಕೆ ಭಕ್ತಿಯಿಂದ ನಮಿಸುವುದನ್ನೂ ಮಾಡಿಕೊಂಡಿದ್ದರು.



ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಕಳೆದ ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ನೆಲೆಸಿದ್ದು ಕಳೆದ ಹತ್ತು ವರ್ಷಗಳಿಂದ ಸ್ಥಳೀಯ ನಾಗನ ಬನಕ್ಕೆ ದೀಪ ಇಟ್ಟು ಆರಾಧನೆ ಮಾಡುತ್ತಿದ್ದಾರೆ. ಮೊದಲಿಗೆ ನಾಗನಿಗೆ ಸಂಜೆ ದೀಪ ಇಡುತ್ತಿದ್ದ ಹೊತ್ತಿನಲ್ಲಿ ದೈವದ ಹೆಜ್ಜೆ ಸದ್ದು ಕೇಳಿಸಿತ್ತು. ಯಾರೋ ಗೆಜ್ಜೆ ಕಟ್ಟಿಕೊಂಡು ನಡೆದು ಹೋಗುವಂತೆ ಅನುಭವಕ್ಕೆ ಬಂದಿತ್ತು. ಈ ಬಗ್ಗೆ ಜ್ಯೋತಿಷ್ಯದಲ್ಲಿ ಕೇಳಿದಾಗ, ನಾಗ ಬನದ ಪಕ್ಕದಲ್ಲೇ ಇರುವ ರೆಂಜೆಯ ಮರದಲ್ಲಿ ರಕ್ತೇಶ್ವರಿ ದೈವದ ಸಾನಿಧ್ಯವಿರುವ ಸಾಧ್ಯೆತೆಯಿದೆ. ಅದಕ್ಕೂ ಒಂದು ದೀಪ ಇಡುವಂತೆ ಸೂಚಿಸಿದ್ದರು. ಅದರಂತೆ, ರಕ್ತೇಶ್ವರಿ ದೈವಕ್ಕೂ ದೀಪು ಶೆಟ್ಟಿಗಾರ್ ದೀಪ ಇಡಲು ಆರಂಭಿಸಿದ್ದರು.
ಆದರೆ ಗೆಜ್ಜೆ ಸದ್ದು ಕಡಿಮೆಯಾಗಿರಲಿಲ್ಲ. ಆಗೊಮ್ಮ ಈಗೊಮ್ಮೆ ಎಂಬಂತೆ ರಾತ್ರಿ ವೇಳೆ ಗೆಜ್ಜೆಯ ಸದ್ದಿನೊಂದಿಗೆ ದೈವ ನಡೆದುಕೊಂಡು ಹೋಗುವ ಅನುಭವ ಅಲ್ಲಿನ ಜನರಿಗೆ ಆಗುತ್ತಿದೆ. ರಾತ್ರಿ ವೇಳೆ ಗೆಜ್ಜೆ ಸದ್ದಿನೊಂದಿಗೆ ಸಾನ್ನಿಧ್ಯಕ್ಕೆ ಬರುವುದು, ಆ ಸಂದರ್ಭದಲ್ಲಿ ಬೆಂಕಿಯಂತೆ ಬೆಳಕು ಹರಿಯುವುದು ಇತ್ಯಾದಿ ಜನರ ಗೋಚರಕ್ಕೆ ಬರುತ್ತಿದೆ. ಇದರಿಂದ ಒಂದಷ್ಟು ಜನರು ಭಯಗೊಂಡಿದ್ದರೆ, ಮತ್ತೊಂದಷ್ಟು ಜನರು ಅದು ದೈವದ ಪವಾಡ, ಕಾರಣಿಕ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ದೈವ ಕಟ್ಟುವವರಲ್ಲಿ ಕೇಳಿ ತಿಳಿಯಬೇಕು ಎಂದುಕೊಂಡು ದೀಪು ಶೆಟ್ಟಿಗಾರ್ ಮತ್ತು ಅವರ ಸ್ನೇಹಿತರು ಅಲ್ಲಿನ ಕಟ್ಟಡ ಒಂದರ ಮರೆಯಲ್ಲಿ ನಿಂತು ರಾತ್ರಿ ಹೊತ್ತಿನಲ್ಲಿ ವಿಡಿಯೋ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗಿದ್ದು, ಆಧುನಿಕ ಕಾಲದಲ್ಲಿಯೂ ತುಳುನಾಡಿನ ದೈವಗಳು ಕಾರಣಿಕ ತೋರಿಸುತ್ತಿವೆ ಎನ್ನುವುದನ್ನು ಸಾಬೀತು ಮಾಡಿದೆ.
ಈ ರೀತಿ ವಿಚಿತ್ರ ಗೆಜ್ಜೆ ಸದ್ದು ಕೇಳುತ್ತಿದ್ದರೆ, ಸುತ್ತಮುತ್ತಲಿನ ನಾಯಿಗಳು ಬಾಲ ಅಲ್ಲಾಡಿಸಿಕೊಂಡು ಹೋಗುವುದನ್ನೂ ಕೆಲವರು ಕಂಡಿದ್ದಾರೆ. ದೂರದಲ್ಲಿ ಮನೆ ಒಳಗೆ ಕಟ್ಟಿದ್ದ ನಾಯಿ ತೀವ್ರವಾಗಿ ಬೊಗಳುವುದನ್ನೂ ಜನ ಕಂಡಿದ್ದಾರೆ. ಹೀಗಾಗಿ ಜನರಲ್ಲಿಯೂ ದೈವದ ಕಾರಣಿಕ, ಅದನ್ನು ಹಿಂಬಾಲಿಸುವ ನಾಯಿಗಳ ಬಗ್ಗೆಯೂ ಕುತೂಹಲ ಮನೆ ಮಾಡಿದೆ. ದೈವಗಳ ನಡೆಯನ್ನು ನಾಯಿಗಳು ಗುರುತು ಹಿಡಿಯುತ್ತಾ ಎನ್ನುವ ಕುತೂಹಲದಲ್ಲಿ ಜನ ಇದ್ದಾರೆ.
ಯೆಯ್ಯಾಡಿ ನಾಗ, ರಕ್ತೇಶ್ವರಿ ಹಾಗು ಪರಿವಾರ ದೈವಗಳ ಸಾನಿಧ್ಯದಲ್ಲಿ ಪ್ರತಿ ವರ್ಷ ಪರ್ವಾದಿಗಳು ನಡೆಯುತ್ತಿದ್ದು ಆ ಸಂದರ್ಭದಲ್ಲಿಯೂ ರಾತ್ರಿ ವೇಳೆ ಗೆಜ್ಜೆ ಸದ್ದು ಕೇಳಿಸಿದ್ಯಂತೆ. ಸದ್ಯಕ್ಕೆ ಆ ಜಾಗದಲ್ಲಿ ರೆಂಜೆ ಮರ ಮತ್ತು ದೀಪ ಇಡುವ ಜಾಗ ಬಿಟ್ಟರೆ ಅಲ್ಲಿ ಬೇರೇನೂ ಇಲ್ಲ. ಖಾಲಿ ಜಾಗವೇ ಆಗಿದ್ದರೂ ರಾತ್ರಿ ಹೊತ್ತಿನಲ್ಲಿ ವಿಚಿತ್ರ ದನಿಯೊಂದಿಗೆ ದೈವ ಸಂಚಾರ ಮಾಡುವುದು ಭಕ್ತರ ಕುತೂಹಲ ಮತ್ತು ನಾಸ್ತಿಕರಿಗೆ ಸವಾಲಿನ ಸಂಗತಿಯಾಗಿ ಪರಿಣಮಿಸಿದೆ. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ದೈವದ ಕಾರಣಿಕಕ್ಕೆ ಸಾಕ್ಷಿ ಎಂದು ಆಸ್ತಿಕರು ಹೇಳುತ್ತಿದ್ದಾರೆ.
People in Yeyyadi Estate experience sound of daiva with stepa at raktheshwari daiva centre in Mangalore. The video of this has gone viral on social media.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm