ಮಾತೆರೆಗ್ಲಾ ನಮಸ್ಕಾರ, ಡ್ರಗ್ಸ್ ದೂರ ದೀಲೇ.. ನಿಕ್ಲೆನ ಇಲ್ಲ್, ಬದ್ಕ್ ಎಡ್ಡೆ ಆಪುಂಡು..! ಮಂಗಳೂರಿನ ಯುವಕರಿಗೆ ತುಳುವಿನಲ್ಲೇ ಆಪ್ತ ಸಲಹೆಯಿತ್ತ ಕಮಿಷನರ್ ಸುಧೀರ್ ರೆಡ್ಡಿ 

02-01-26 11:01 pm       Mangalore Correspondent   ಕರಾವಳಿ

ಡಿ.31ರ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪೊಲೀಸರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವಿಸಿದ್ದ 52 ಮಂದಿಯನ್ನು ಪತ್ತೆ ಮಾಡಿದ್ದರು. ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ತುಳುವಿನಲ್ಲೇ ಮಂಗಳೂರಿನ ಯುವಕರಿಗೆ ಡ್ರಗ್ಸ್ ನಿಂದ ದೂರವಿದ್ದರೆ ನಿಮ್ಮೆಲ್ಲರ ಜೀವನವೂ ಒಳ್ಳೆದಾಗುತ್ತದೆ ಎಂದು ಆಪ್ತ ಸಲಹೆ ನೀಡಿದ್ದಾರೆ.

ಮಂಗಳೂರು, ಜ.2 : ಡಿ.31ರ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪೊಲೀಸರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವಿಸಿದ್ದ 52 ಮಂದಿಯನ್ನು ಪತ್ತೆ ಮಾಡಿದ್ದರು. ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ತುಳುವಿನಲ್ಲೇ ಮಂಗಳೂರಿನ ಯುವಕರಿಗೆ ಡ್ರಗ್ಸ್ ನಿಂದ ದೂರವಿದ್ದರೆ ನಿಮ್ಮೆಲ್ಲರ ಜೀವನವೂ ಒಳ್ಳೆದಾಗುತ್ತದೆ ಎಂದು ಆಪ್ತ ಸಲಹೆ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ಮಂಗಳೂರಿನಲ್ಲಿ ನಡೆಯುವ ಹೆಚ್ಚಿನ ಅಪರಾಧ ಪ್ರಕರಣಗಳಿಗೆ ಡ್ರಗ್ಸ್ ಸೇವನೆಯೇ ಕಾರಣ. ಡ್ರಗ್ಸ್ ಸೇವನೆಯ ಪ್ರೇರಣೆಯಿಂದಲೇ ಇಲ್ಲಿ ಕ್ರೈಮ್ ಆಗುತ್ತಿರುವುದನ್ನು ಮನಗಂಡಿದ್ದೇನೆ. ಡ್ರಗ್ಸ್ ನಿಂದ ದೂರವಿದ್ದರೆ ಜೀವನವೂ ಉತ್ತಮವಾಗುತ್ತದೆ, ನಿಮ್ಮ ಮನೆಯೂ ಉಳಿಯುತ್ತದೆ. ಸಂಬಂಧವೂ ಸುಗಮಗೊಳ್ಳುತ್ತದೆ. ಅದರಿಂದ ಸಮಾಜಕ್ಕೂ ಒಳ್ಳೆಯದಾಗುತ್ತದೆ. ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ನೀವೆಲ್ಲರೂ ಕೈಜೋಡಿಸಿ ಎಂದು ಅಚ್ಚ ತುಳುವಿನಲ್ಲಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ಯುವಕರಿಗೆ ಕರೆ ನೀಡಿದ್ದಾರೆ.

ಸುಧೀರ್ ಕುಮಾರ್ ರೆಡ್ಡಿ ಮೂಲತಃ ಆಂಧ್ರಪ್ರದೇಶದವರಾದರೂ ಮಂಗಳೂರಿಗೆ ಬಂದು ಕೇವಲ ನಾಲ್ಕು ತಿಂಗಳಲ್ಲೇ ಇಲ್ಲಿನ ತುಳು ಭಾಷೆಯನ್ನು ಕಲಿತಿದ್ದಾರೆ. ಅಪ್ಪಟ ತುಳುವನೇ ಅನ್ನುವ ರೀತಿ ತುಳುವಿನಲ್ಲೇ ಮಾತನಾಡುತ್ತ ಜನರನ್ನು ಕಾನೂನು ವ್ಯಾಪ್ತಿಗೆ ತರಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸುಧೀರ್ ರೆಡ್ಡಿ ತಾನೊಬ್ಬ ಐಪಿಎಸ್ ಅಧಿಕಾರಿ ಎನ್ನುವ ಹಮ್ಮನ್ನು ಇಟ್ಟುಕೊಳ್ಳದೆ ಮಂಗಳೂರಿನ ಜನರ ವ್ಯಾವಹಾರಿಕ ಭಾಷೆಯಾಗಿರುವ ತುಳುವಿನಲ್ಲೇ ಆಪ್ತ ಸಲಹೆಯನ್ನು ಹೇಳಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಮಂಗಳೂರು ಆಕಾಶವಾಣಿಯಲ್ಲಿ ತನ್ನ ಪತ್ನಿಯ ಸಂದರ್ಶನದ ವೇಳೆ ಜೊತೆಗೆ ತೆರಳಿದ್ದ ಕಮಿಷನರ್ ಸುಧೀರ್ ರೆಡ್ಡಿ ಅಲ್ಲಿನ ಸಿಬಂದಿ ಜೊತೆಗೆ ತುಳುವಿನಲ್ಲೇ ಮಾತನಾಡಿದ್ದು ಅದರ ವಿಡಿಯೋ ವೈರಲ್ ಆಗಿತ್ತು. ನೀವು ಹೇಗೆ ಇಷ್ಟು ಸುಲಭದಲ್ಲಿ ತುಳು ಕಲಿತಿರಿ ಎಂಬ ಪ್ರಶ್ನೆಗೆ, ನೀವೆಲ್ಲ ತುಳುವಿನಲ್ಲೇ ಮಾತಾಡ್ತೀರಲ್ವಾ ಎಂದು ಹೇಳಿ ಮರು ಪ್ರಶ್ನೆಯ ಚಟಾಕಿ ಹಾರಿಸಿದ್ದರು. ಇದರ ವಿಡಿಯೋ ವಾಟ್ಸಪ್ ಸ್ಟೇಟಸ್ ನಲ್ಲಿ ರಾರಾಜಿಸಿತ್ತು.

ಸಾಮಾನ್ಯವಾಗಿ ಮಂಗಳೂರಿಗೆ ಯಾವುದೇ ಅಧಿಕಾರಿ ಬಂದರೂ, ಕೆಲವೇ ತಿಂಗಳಲ್ಲಿ ಇಲ್ಲಿನ ತುಳು ಭಾಷೆಯನ್ನು ಕಲಿತು ಬಿಡುತ್ತಾರೆ. ಕೆಲವರು ಸರಾಗವಾಗಿ ಮಾತನಾಡಲು ತಡವರಿಸಿದರೂ, ಎದುರಿನವ ಮಾತನಾಡುವುದನ್ನಂತೂ ಅರ್ಥ ಮಾಡಿಕೊಳ್ಳುತ್ತಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಕೂಡ ಎರಡು ವರ್ಷ ಇಲ್ಲಿದ್ದಾಗ ತುಳುವನ್ನು ಕಲಿತು ಮಾತನಾಡುವಷ್ಟರ ಮಟ್ಟಿಗೆ ಬೆಳೆದಿದ್ದರು. ಈಗ ಪೊಲೀಸ್ ಕಮಿಷನರ್ ತುಳುವಿನಲ್ಲೇ ಮಾತನಾಡುತ್ತ ಇಲ್ಲಿನ ಜನರೊಂದಿಗೆ ಆಪ್ತವಾಗಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂಬ ಗರಿಮೆ ನೀಡಲು ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದ್ದರೂ, ಮಂಗಳೂರಿಗೆ ಬಂದ ಅಧಿಕಾರಿಗಳೆಲ್ಲ ತುಳು ತಮ್ಮದೇ ಭಾಷೆಯೆಂದು ಕಲಿತು ಅದನ್ನು ರಾಷ್ಟ್ರ ಭಾಷೆಯಾಗಿಸಲು ಕೊಡುಗೆ ನೀಡುತ್ತಿದ್ದಾರೆ.

After 52 youths were caught using drugs during New Year’s Eve celebrations, Mangaluru Police Commissioner Sudheer Reddy delivered a heartfelt message in Tulu, urging young people to stay away from drugs for a better life, safer families, and a healthier society. Despite being from Andhra Pradesh, the Commissioner has quickly learned Tulu and is using the local language to build trust and connect closely with Mangaluru residents.