ಬ್ರೇಕಿಂಗ್ ನ್ಯೂಸ್
17-02-24 05:41 pm Mangalore Correspondent ಕರಾವಳಿ
ಮಂಗಳೂರು, ಫೆ.17: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಗದ್ದೆಯಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆ. ಅದನ್ನು ಮತ್ತೆ ನೆನಪಿಸುತ್ತೇನೆ. ಚುನಾವಣೆಯಲ್ಲಿ ಏನು ಹೇಳಿದ್ದೆವೋ ಐದು ಗ್ಯಾರಂಟಿಯನ್ನೂ ಕೊಟ್ಟಿದ್ದೇವೆ. ಇದನ್ನೇ ಮುಂದಿಟ್ಟು ಕಾರ್ಯಕರ್ತರು ಮತ ಕೇಳಬೇಕು. ಎರಡು ಸೀಟು ಇರೋದು ಅಂತ ಅಳುಕು ಬೇಡ. ಸೋತಲ್ಲೇ ಗೆಲ್ಲಬೇಕಾಗಿದೆ, ರಾಜ್ಯದಲ್ಲಿ ನಾವು 20 ಸೀಟು ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಡ್ಯಾರಿನಲ್ಲಿ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಐದು ಬೆರಳು ಸೇರಿ ಮುಷ್ಟಿ ಗಟ್ಟಿಯಾಯ್ತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು. ತೆನೆಹೊತ್ತ ಮಹಿಳೆ ಕಾಂಗ್ರೆಸ್ ಗ್ಯಾರಂಟಿಗೆ ಹೆದರಿ ಬಿಜೆಪಿ ಸೇರಿದ್ದಾಳೆ ಎಂದು ಅಣಕಿಸಿದ ಡಿಕೆಶಿ, ನನ್ನನ್ನು ಬಂಡೆಯಂತೆ ಕರೆಯುತ್ತೀರಿ, ಅದು ಚಪ್ಪಡಿಯಾಗಲಿ, ವಿಧಾನಸೌಧಕ್ಕೆ ಚಪ್ಪಡಿಯಾಗಲಿ, ನೀವೆಲ್ಲ ಅದನ್ನು ತುಳಿದು ವಿಧಾನಸೌಧಕ್ಕೆ ಬರುತ್ತೀರಿ ಎಂದಿದ್ದೆ. 136 ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದೀರಿ. ನನಗೆ ಭರವಸೆ ಇದೆ, ರಾಜ್ಯದಲ್ಲಿ 20 ಸೀಟನ್ನು ಗೆಲ್ಲುತ್ತೇವೆ ಎಂದರು.

ಕಾರ್ಯಕರ್ತರು ಆತ್ಮವಿಶ್ವಾಸ ಕಳಕೊಳ್ಳಬೇಡಿ. ಜಿಲ್ಲೆಯಲ್ಲಿ ಎರಡು ಸೀಟು ಇರೋದು ಅಂತ ಅಳುಕು ಬೇಡ. 2011ರಲ್ಲಿ ಸದಾನಂದ ಗೌಡರು ಉಡುಪಿ ಎಂಪಿ ಆಗಿದ್ದಾಗ ಉಪ ಚುನಾವಣೆಯಲ್ಲಿ ನಾವು ಸಂಸದ್ ಸ್ಥಾನವನ್ನು ಗೆದ್ದು ಸಂಸತ್ತಿಗೆ ಕಳಿಸಿದ ಉದಾಹರಣೆ ಇದೆ. ಹಿಂದೆ ದೇವೇಗೌಡರು ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೀನಿ ಎಂದಿದ್ದರು. ಇವತ್ತು ತನ್ನ ಮಗನನ್ನೇ ಬಿಜೆಪಿಗೆ ಕಳಿಸಿದ್ದಾರೆ. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ, ಏನು ಕೂಡ ಆಗಬಹುದು. ಅದರ ಬಗ್ಗೆ ಟೀಕೆ ಮಾಡಲ್ಲ. ಕಾಂಗ್ರೆಸ್ ಬಗ್ಗೆ ಭಯಗೊಂಡಿದ್ದರಿಂದ ಇವರು ಒಟ್ಟು ಸೇರಿ ಚುನಾವಣೆಗೆ ಹೊರಟಿದ್ದಾರೆ. ಆದರೆ ಜನರು ನಮ್ಮ ಸಾಧನೆ ನೋಡಿ ಮತ ಕೊಡಲಿದ್ದಾರೆ.
ಪ್ರಧಾನಿ ಮೋದಿ 375 ಸ್ಥಾನ ಗೆಲ್ತೀವಿ ಎಂದಿದ್ದಾರೆ, ಆದರೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿ ದೇಶಾದ್ಯಂತ ಸುತ್ತುತ್ತಿದ್ದಾರೆ ಎಂದು ಹೇಳಿದ ಅವರು, ನೀವೆಲ್ಲ ಸೇರಿ ಅತಿ ಹೆಚ್ಚು ಮತಗಳನ್ನು ತಂದು ಕೊಡಬೇಕಾಗಿದೆ. ನಾವು ಸೋಲುವುದಿಲ್ಲ ಎಂಬ ಭರವಸೆ ನಮ್ಮಲ್ಲಿರಬೇಕು. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ನೀಡಿರುವುದು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾತ್ರ. ಇದರ ಜೊತೆಗೆ ಐತಿಹಾಸಿಕ ಬಜೆಟ್ ಕೊಟ್ಟಿದ್ದೇವೆ. ಆದರೆ ಬಿಜೆಪಿಯವರು ಬಜೆಟ್ ಅಧಿವೇಶನದಲ್ಲಿ ಪ್ರತಿಭಟನೆ ಮಾಡಿ ಅವಹೇಳನ ಮಾಡಿದ್ದಾರೆ. 30 ವರ್ಷಗಳ ನನ್ನ ರಾಜಕಾರಣದಲ್ಲಿ ಬಜೆಟನ್ನು ವಿರೋಧ ಪಕ್ಷ ವಿರೋಧಿಸಿ ಸಭಾತ್ಯಾಗ ಮಾಡಿದ್ದು ನೋಡಿಲ್ಲ. ಬಿಜೆಪಿ- ಜೆಡಿಎಸ್ ಏನೇ ತಿಪ್ಪರಲಾಗ ಹಾಕಿದರೂ ಏನೂ ಆಗಲ್ಲ. ಮುಂದಿನ ಸಲವೂ ಕಾಂಗ್ರೆಸ್ಸೇ ಗೆಲ್ಲಲಿದೆ ಎಂಬುದನ್ನು ಬರೆದಿಟ್ಟುಕೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳಿದರು.
20 MP seats is for sure from Karnataka says DK Shivakumar in Mangalore addressing the congress rally held at Adyar. Jds has joined bjp with the afraid of Congress.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm