ಬ್ರೇಕಿಂಗ್ ನ್ಯೂಸ್
07-02-24 04:25 pm Mangalore Correspondent ಕರಾವಳಿ
ಉಳ್ಳಾಲ, ಫೆ.7: ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ , ಸ್ಪೀಕರ್ ಯು.ಟಿ.ಖಾದರ್ ಆಪ್ತ, ಕಾಂಗ್ರೆಸ್ ಹಿರಿಯ ದಲಿತ ಮುಖಂಡರಾದ ಪದ್ಮನಾಭ ನರಿಂಗಾನ(77) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸದಾ ಲವಲವಿಕೆಯಿಂದಿದ್ದ ಪದ್ಮನಾಭರಿಗೆ ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪರೂಪದ ಪ್ರಾಮಾಣಿಕ ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿದ್ದ ಪದ್ಮನಾಭ ಅವರು ಸಾಮಾನ್ಯ ಬಡತನದ ಕುಟುಂಬದಿಂದ ಬಂದು ತನ್ನ ಅಪರಿಮಿತ ಶ್ರಮ ಹಾಗೂ ಬದ್ಧತೆಯಿಂದ ಸಾಮಾಜಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು. ಎರಡು ಬಾರಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಪಂಚಾಯತ್ ಉಪಾಧ್ಯಕ್ಷರೂ ಆಗಿದ್ದರು.
ಕೈರಂಗಳ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಸ್ಥಳೀಯ ದೇವಸ್ಥಾನ, ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಜನಾನುರಾಗಿಯಾಗಿದ್ದರು. ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಈ (2023) ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಪದ್ಮನಾಭರಿಗೆ ಲಭಿಸಿತ್ತು. ಪದ್ಮನಾಭರ ಮಗ ಮೋಹನ್ ಅವರು ಸರಕಾರಿ ವಾಹನ ಚಾಲಕರು. ಮೋಹನ್ ಸ್ಪೀಕರ್ ಯು.ಟಿ.ಖಾದರ್ ಸಚಿವರಾಗಿದ್ದಾಗಲೂ ಅವರಿಗೆ ಚಾಲಕರಾಗಿದ್ದರು. ಈಗ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಕಾರು ಚಾಲಕರಾಗಿದ್ದಾರೆ. ಮಗ ಜಿಲ್ಲಾಧಿಕಾರಿಯ ಕಾರು ಚಾಲಕನಾದರೂ ಅದರ ಯಾವುದೇ ಲಾಭ ಪಡೆಯದ ಪದ್ಮನಾಭರು ಸಿಂಪಲ್ ಆಗಿದ್ದರು.
ಹಿಂದಿನ ಕಮ್ಯೂನಿಸ್ಟ್ ಧುರೀಣ ಮಹಾಬಲೇಶ್ವರ ಭಟ್ಟರ ಪ್ರೇರಣೆಯಿಂದ ಕಮ್ಯೂನಿಸ್ಟ್ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿದ ಪದ್ಮನಾಭ ಅವರು ಅನೇಕ ವರ್ಷಗಳ ಕಾಲ ಸಿಪಿಐ ಪಕ್ಷದಲ್ಲಿ ಸಕ್ರಿಯವಾಗಿ ದುಡಿದವರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದರು. ನರಿಂಗಾನ ಕಂಬಳ ಸಮಿತಿಯ ಗೌರವ ಸಲಹೆಗಾರರೂ, ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಇದ್ದಾರೆ.
ಫೆ.8ರ ಗುರುವಾರ(ನಾಳೆ) ಬೆಳಗ್ಗೆ 10 ಗಂಟೆಗೆ ಪದ್ಮನಾಭರ ನರಿಂಗಾನದ ಸ್ವಗೃಹದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಬಳಿಕ ಅಂತ್ಯಕ್ರಿಯೆ ನಡೆಯಲಿದೆಯೆಂದು ಕುಟುಂಬಸ್ಥರು ತಿಳಿಸಿದ್ದಾರೆ.
Mangalore Congress senior leader Padmanaba Naringana close member of speaker UT Khader dies at 77
02-01-26 10:24 pm
HK News Desk
CM Siddaramaiah, Ballari Clash, MLA Bharat Re...
02-01-26 06:09 pm
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 11:01 pm
Mangalore Correspondent
ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಮೊದಲೇ ನೀರಿನ ಸಮಸ್ಯ...
02-01-26 11:00 pm
Pratibha Kulai: ಹಿಂದು ಮುಖಂಡರು ಮರ್ಯಾದೆ ಕಳಕೊಂಡಿ...
02-01-26 09:32 pm
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm