ಬ್ರೇಕಿಂಗ್ ನ್ಯೂಸ್
05-02-24 08:51 pm Mangalore Correspondent ಕರಾವಳಿ
ಮಂಗಳೂರು ಫೆ.5: ಆಟೋ ರಿಕ್ಷಾ ಚಾಲಕ- ಮಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ಒಂದು ದಿನ ಆಟೋ ಸೇವೆಯನ್ನು ಬಂದ್ ಮಾಡಿ ಆರ್.ಟಿ.ಓ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಜ್ಯೋತಿ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ಜಾಥಾ ನಡೆಸಿ ಬಳಿಕ ಪ್ರತಿಭಟನಾ ಸಭೆ ನಡೆಸಿದ ಆಟೋ ಚಾಲಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ನಗರದಲ್ಲಿ ಬ್ಯಾಟರಿ ಚಾಲಿತ ಆಟೋಗಳ ಹಾವಳಿ ವಿಪರೀತವಾಗಿದ್ದು ಅವುಗಳಿಂದ ಇತರ ಪೆಟ್ರೋಲ್ ಮತ್ತು ಎಲ್ ಪಿಜಿ ಚಾಲಿತ ಆಟೋಗಳಿಗೆ ಭಾರಿ ಸಮಸ್ಯೆಗಳು ಎದುರಾಗಿದೆ. ಇ- ಆಟೋಗಳಿಗೆ ನಿಗದಿ ಮಾಡಿದ ವಲಯದ ಬಗ್ಗೆ ಸಮರ್ಪಕ ಮಾರ್ಗದರ್ಶನ ಇಲ್ಲ. 25-11-2022ರ ಬಳಿಕ ನೋಂದಣಿಯಾದಂತಹ ಬ್ಯಾಟರಿ ಜಾಲಿತ ಆಟೋರಿಕ್ಷಾಗಳಿಗೆ ವಲಯ-1ರ ಕ್ರಮ ಸಂಖ್ಯೆ ನೀಡಬಾರದು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ವಲಯ- 1 ಕ್ರಮ ಸಂಖ್ಯೆ ಇಲ್ಲದ ಯಾವುದೇ ಕಂಪೆನಿಯ ಆಟೋ ರಿಕ್ಷಾಗಳು ಮಂಗಳೂರು ನಗರ ಪ್ರವೇಶಿಸಬಾರದು. ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳ ಕೊರತೆಯನ್ನು ಸರಿಪಡಿಸಬೇಕು. ಸಿ.ಎನ್.ಜಿ. ಅಥವಾ ಎಲ್.ಪಿ.ಜಿ. ಆಟೋ ರಿಕ್ಷಾಗಳಲ್ಲಿ ಮಂಗಳೂರು ನಗರದ ಪರವಾನಿಗೆ ಇಲ್ಲದೇ ನಕಲಿ ಆಟೋರಿಕ್ಷಾಗಳ ಹಾವಳಿ ಹೆಚ್ಚಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಆಟೋ ರಿಕ್ಷಾಗಳ ಪರವಾನಿಗೆಯನ್ನು ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಬಳಿಕ ತಮ್ಮ ಬೇಡಿಕೆಯನ್ನು ಆರ್ ಟಿಓ ಅಧಿಕಾರಿಗೆ ನೀಡಿ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆಯ ವರೆಗೂ ಆಟೋಗಳನ್ನು ಬದಿಗಿಟ್ಟು ಪ್ರತಿಭಟನೆಯಲ್ಲಿ ಚಾಲಕರು ತೊಡಗಿದ್ದರಿಂದ ನಗರದಲ್ಲಿ ಆಟೋಗಳಿಲ್ಲದೆ ಪ್ರಯಾಣಿಕರು ಪರದಾಡಬೇಕಾಯಿತು.
Protest by Auto drivers over Battery autos in Mangalore.
02-01-26 10:24 pm
HK News Desk
CM Siddaramaiah, Ballari Clash, MLA Bharat Re...
02-01-26 06:09 pm
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 11:01 pm
Mangalore Correspondent
ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಮೊದಲೇ ನೀರಿನ ಸಮಸ್ಯ...
02-01-26 11:00 pm
Pratibha Kulai: ಹಿಂದು ಮುಖಂಡರು ಮರ್ಯಾದೆ ಕಳಕೊಂಡಿ...
02-01-26 09:32 pm
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm