ಬ್ರೇಕಿಂಗ್ ನ್ಯೂಸ್
24-01-24 03:12 pm Udupi Correspondent ಕರಾವಳಿ
ಉಡುಪಿ, ಜ.24: ಅತಿಕ್ರಮಣದ ಜಾಗದಲ್ಲಿ ನಮಾಜ್ ಮಾಡಿದರೆ ಅದು ಹರಾಮ್. ಇದನ್ನು ಸ್ವತಃ ಮುಸಲ್ಮಾನರೇ ಹೇಳುತ್ತಾರೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ನಮಗೆ ಪವಿತ್ರ. ಜ್ಞಾನ ವ್ಯಾಪಿಯ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ ಎಂದು ಬಿಜೆಪಿ ಮುಖಂಡ ಸಿಟಿ ರವಿ, ಮುಸ್ಲಿಂ ನಾಯಕರಿಗೆ ಸಲಹೆ ಮಾಡಿದ್ದಾರೆ.
ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕ ಬೀಜಾಂಕುರ ಆಗಿದೆ. ಬಾಬರ್ ಮತ್ತು ಅವನ ಸಂತಾನ ಓಲೈಸುವವರಿಗೂ ವೋಟ್ ಬ್ಯಾಂಕ್ ರಾಜಕೀಯದ ಅನಿವಾರ್ಯತೆ ಉಂಟಾಗಿದೆ. ರಾಮನನ್ನು ಬಿಟ್ಟರೆ ರಾಷ್ಟ್ರ ಇಲ್ಲ, ವೋಟ್ ಇಲ್ಲ ಎನ್ನುವುದು ಗೊತ್ತಾಗಿದೆ. ರಾಮ ಕಾಲ್ಪನಿಕ ಎಂದವರು ರಾಮನಾಮ ಜಪ ಆರಂಭಿಸಿದ್ದಾರೆ. ಅತಿಕ್ರಮಣಕಾರರನ್ನು ಬಿಟ್ಟು ರಾಮಕೃಷ್ಣ ಶಿವನ ಜೊತೆ ಮುಸಲ್ಮಾನರು ಗುರುತಿಸಿಕೊಳ್ಳುತ್ತಿದ್ದಾರೆ. ಮುಸಲ್ಮಾನರ ಪೂಜಾ ಪದ್ದತಿಯನ್ನು ನಾವು ಪ್ರಶ್ನೆ ಮಾಡುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರೋದು ಡೌಟ್ ಎಂದಿರುವ ವೀರಪ್ಪ ಮೊಯ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ, ನಮಗೆ ವೀರಪ್ಪ ಮೊಯ್ಲಿಯ ಸರ್ಟಿಫಿಕೇಟ್ ಅವಶ್ಯಕತೆ ಇದೆಯಾ? ವೀರಪ್ಪ ಮೊಯಿಲಿ ಸರ್ಟಿಫಿಕೇಟನ್ನು ಯಾರು ಕೇಳುತ್ತಾರೆ. ರಾಮ ಕಾಲ್ಪನಿಕ ಎಂದು ಕಾಂಗ್ರೆಸಿಗರು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಾನು ದೇವಸ್ಥಾನಕ್ಕೆ ಹೋಗಲ್ಲ ಸಂವಿಧಾನ ಮುಖ್ಯ ಎಂದಿದ್ದಾರೆ ಪ್ರಿಯಾಂಕ ಖರ್ಗೆ. ಸಂವಿಧಾನ ನಮಗೂ ಮುಖ್ಯ, ಅದರ ಮೊದಲ ಪುಟದಲ್ಲಿ ರಾಮ ಇದ್ದಾನೆ. ಡಿಕೆಶಿ ರಾಮ ಯಾರಪ್ಪನ ಸ್ವತ್ತು ಅಲ್ಲ ಎನ್ನುತ್ತಾರೆ. ರಾಮನನ್ನು ಯಾರ ಅಪ್ಪನ ಸ್ವತ್ತು ಮಾಡಲು ಸಾಧ್ಯವಿಲ್ಲ ಒಪ್ಪುತ್ತೇವೆ.
ಭಗವಾನ್ ಶ್ರೀರಾಮಚಂದ್ರ ಭಕ್ತರ ಅಧೀನ. ಕಾಂಗ್ರೆಸಿಗರು ಬಾಬರ್ ಮತ್ತು ಅವನ ಸಂತಾನವನ್ನು ಅಪ್ಪನಿಗಿಂತ ಜಾಸ್ತಿ ಹೊತ್ತುಕೊಂಡಿದ್ದಾರೆ. ಬಾಬರ್ ಸಂತಾನವನ್ನು ಪ್ರೀತಿಸಿದಷ್ಟು ಅವರ ಅಪ್ಪನನ್ನು ಪ್ರೀತಿಸುತ್ತಾರೋ ಗೊತ್ತಿಲ್ಲ. ರಾಮ ಈ ದೇಶವನ್ನು ಜೋಡಿಸಿದವ, ರಾಮ ಸಮಸ್ಯೆ ಅಲ್ಲ ಎಂದರು.
ಅರ್ಚಕ ಹಿರೇಮಗಳೂರು ಕಣ್ಣನ್ ಗೆ ನೋಟಿಸ್ ಕೊಟ್ಟ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಕಣ್ಣನ್ ಮಾಮ ನನಗೂ ನೋಟಿಸ್ ತೋರಿಸಿದ್ದರು. ಹಣ ವಾಪಸ್ ಕೇಳುವುದು ಅಕ್ಷಮ್ಯ. ಸರಕಾರದ ಮಾನಸಿಕತೆ ತೋರಿಸುತ್ತದೆ. ದೇವಾಲಯ ಭಕ್ತರ ಸ್ವತ್ತು. ಭಕ್ತರು ಕೊಟ್ಟ ಹಣವನ್ನು ಟೆನೆಂಟ್ ಆಕ್ಟ್ ತಂದು ದೇವಾಲಯವನ್ನು ಬಡವ ಮಾಡಿಬಿಟ್ಟರು. ದೇವಸ್ಥಾನಕ್ಕೆ ತಸ್ತೀಕನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವೇ ತಪ್ಪು. ದೇವಸ್ಥಾನಗಳು ಸಮಾಜದ ನಿಯಂತ್ರಣದಲ್ಲಿರಬೇಕು. ಸರ್ಕಾರದ ಕಪಿಮುಷ್ಠಿಯಿಂದ ಹೊರ ಬಂದರೆ ದೇಗುಲ ಅಭಿವೃದ್ಧಿ ಆಗುತ್ತದೆ. ಈ ನಿಯಂತ್ರಣ ಮಸೀದಿ, ಚರ್ಚುಗಳ ಮೇಲೆ ಇಲ್ಲ ಯಾಕೆ. ಇಲ್ಲಿ ನೋಟಿಸ್ ಕೊಟ್ಟವರ ಮೇಲೆ ಕ್ರಮ ಆಗಬೇಕು, ಸರ್ಕಾರ ಕ್ಷಮೆ ಕೋರಬೇಕು. ಸರ್ಕಾರದ ನಿಯಂತ್ರಣ ಕಡಿಮೆ ಮಾಡಲು ಧಾರ್ಮಿಕ ಪರಿಷತ್ತು ಮಾಡಿದ್ದೆವು. ದೇವಾಲಯಗಳನ್ನು ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ ಎಂದು ಹೇಳಿದರು.
ತಮಿಳುನಾಡಿನಂತಹ ನಾಸ್ತಿಕ ಸರ್ಕಾರಕ್ಕೂ ದೇವರ ದುಡ್ಡು ಬೇಕು. ಅವರಿಗೆ ದೇವರ ಮೇಲೆ ಭಕ್ತಿ ಇಲ್ಲ ಹುಂಡಿ ಮೇಲೆ ಮಾತ್ರ ಪ್ರೀತಿ, ಅದು ತಪ್ಪಬೇಕು ಎಂದು ಸಿಟಿ ರವಿ ಹೇಳಿದರು.
It is haram to offer namaz in a trespassing place. Muslims themselves say this. BJP leader CT Ravi said that Mathura is as sacred to us as the birthplace of Lord Rama.Responding to a media representative's question regarding the liberation of the Mathura Sri Krishna Temple after the Ayodhya Ram Mandir, he said that he is waiting for the resurrection of Nandi Kashi, who is full of knowledge. Do not bear the sin committed against the saints.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm