ಬ್ರೇಕಿಂಗ್ ನ್ಯೂಸ್
13-01-24 10:46 pm HK News Desk ಕರಾವಳಿ
ಮಂಗಳೂರು, ಜ.13: ರಾಜ್ಯ ಬಿಜೆಪಿ ಟೀಮ್ ಬದಲಾಗುತ್ತಿದ್ದಂತೆ ಜಿಲ್ಲಾ ಮಟ್ಟದಲ್ಲಿಯೂ ಪದಾಧಿಕಾರಿಗಳು ಬದಲಾಗಲಿದ್ದಾರೆ. ಜಿಲ್ಲಾ ಮಟ್ಟದ ಸಮಿತಿಗೆ ಪದಾಧಿಕಾರಿಗಳ ನೇಮಕಕ್ಕೂ ಮೊದಲು ಅಧ್ಯಕ್ಷರ ನೇಮಕ ಆಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುದ್ದೆಗೆ ಹಲವರ ಹೆಸರು ಕೇಳಿಬಂದಿದ್ದು, ಆ ಪೈಕಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಯುವಮೋರ್ಚಾ ಮಾಜಿ ಅಧ್ಯಕ್ಷ ಕಿಶೋರ್ ಪುತ್ತೂರು ಮುಂಚೂಣಿಯಲ್ಲಿದ್ದಾರೆ.
ಕೆಲವು ಮೂಲಗಳ ಪ್ರಕಾರ, ಶಾಸಕರಾಗಿದ್ದವರೇ ಪಕ್ಷದ ಜಿಲ್ಲಾಧ್ಯಕ್ಷರಾಗಬೇಕು ಎನ್ನುವ ನಿಲುವು ರಾಜ್ಯ ನಾಯಕರದ್ದು ಇದೆಯಂತೆ. ಕರಾವಳಿಯಲ್ಲಿ ಪ್ರಬಲ ಬಿಲ್ಲವ ಸಮುದಾಯ ಮತ್ತು ಶಾಸಕ ಸ್ಥಾನದ ನೆಲೆಯಲ್ಲಿ ಉಮಾನಾಥ ಕೋಟ್ಯಾನ್ ಹೆಸರು ಮುಂಚೂಣಿಗೆ ಬಂದಿದೆ. ದಿಟ್ಟ ನಿಲುವು ಮತ್ತು ಪಕ್ಷದಲ್ಲಿ ಈ ಹಿಂದೆ ಪ್ರಧಾನ ಕಾರ್ಯದರ್ಶಿ ಇನ್ನಿತರ ಹುದ್ದೆಗಳನ್ನು ನಿಭಾಯಿಸಿದವರು ಕೋಟ್ಯಾನ್. ಹೀಗಾಗಿ ಜಿಲ್ಲೆಯಲ್ಲಿ ಪಕ್ಷದ ಪ್ರಮುಖರು ಮತ್ತು ಆರೆಸ್ಸೆಸ್ ಕಡೆಯಿಂದಲೂ ಉಮಾನಾಥ ಕೋಟ್ಯಾನ್ ಬಗ್ಗೆ ಒಲವು ಇದೆಯಂತೆ.
ಇದೇ ವೇಳೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಮತ್ತು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಉಳ್ಳಾಲ ಕ್ಷೇತ್ರದಿಂದ ಯುಟಿ ಖಾದರ್ ವಿರುದ್ಧ ಸ್ಪರ್ಧಿಸಿದ್ದ ಸತೀಶ್ ಕುಂಪಲ ಹೆಸರನ್ನೂ ಪರಿಗಣಿಸಲಾಗಿದೆ. ಆರೆಸ್ಸೆಸ್ ನಾಯಕರ ಒಲವು ಮತ್ತು ಪಕ್ಷದಲ್ಲಿ ಸುದೀರ್ಘ ಕಾಲದಿಂದ ಮಟ್ಟಸವಾಗಿರುವ ನಿಲುವು ಅವರ ಹೆಸರನ್ನು ಮುನ್ನೆಲೆಗೆ ತಂದಿದೆ. ಇದಲ್ಲದೆ, ಪಕ್ಷದ ಯುವ ಘಟಕದಲ್ಲಿದ್ದು ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಕಿಶೋರ್ ಪುತ್ತೂರು, ಈ ಹಿಂದೆ ಪಕ್ಷದ ಉಪಾಧ್ಯಕ್ಷರಾಗಿದ್ದ ಜಿಪಂ ಸದಸ್ಯೆ ಕಸ್ತೂರಿ ಪಂಜ ಹೆಸರೂ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ. ರಾಜ್ಯ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅಧ್ಯಕ್ಷ ಸ್ಥಾನಕ್ಕೆ ಏಳೆಂಟು ಹೆಸರನ್ನು ಕೊಡಲಾಗಿದ್ದು, ಅದರಲ್ಲಿ ಮುಂಚೂಣಿ ನೆಲೆಯಲ್ಲಿ ಮೂವರ ಹೆಸರಿದೆಯಂತೆ. ಬಿಲ್ಲವರಿಗೆ ಮಣೆ ಹಾಕಿದರೆ, ಉಮಾನಾಥ ಕೋಟ್ಯಾನ್ ಅಥವಾ ಸತೀಶ್ ಕುಂಪಲ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತ ಎನ್ನಲಾಗುತ್ತಿದೆ.
ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಮತ್ತು ಅದರ ಚಟುವಟಿಕೆ ಬಗ್ಗೆಯೂ ರಾಜ್ಯ ಘಟಕದ ನಾಯಕರು ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಮೊದಲು ಈ ಕುರಿತು ಖಚಿತ ನಿಲುವಿಗೆ ಬರಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ನಾಯಕರು ಇದ್ದಾರೆ. ಪುತ್ತಿಲ ಪರಿವಾರವನ್ನು ಬಿಜೆಪಿ ಒಳಗಡೆ ಸೇರಿಸುವುದೋ, ದೂರ ಇರಿಸುವುದೋ ಅನ್ನುವುದರ ಬಗ್ಗೆ ಖಚಿತ ನಿಲುವಿಗೆ ಬರಬೇಕಾಗುತ್ತದೆ. ಹಾಗಾಗಿ ಪಕ್ಷದ ಜಿಲ್ಲಾ ಘಟಕ ರಚನೆಯ ಸಂದರ್ಭದಲ್ಲಿ ಪುತ್ತಿಲ ಪರಿವಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಸಾಧ್ಯತೆಯಿದೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಬಿಲ್ಲವ, ಬಂಟರು ಪ್ರಾಬಲ್ಯ ಇರುವುದರಿಂದ ಇವೆರಡು ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಮತ್ತು ಲೋಕಸಭೆ ಸ್ಥಾನದ ಹಂಚಿಕೆ ಆಗಲಿದೆ.
As the state BJP team changes, the office-bearers at the district level will also change. The chairman of the district-level committee will be appointed before the appointment of office-bearers. Among the names doing the rounds for the post of Dakshina Kannada district BJP president are Moodbidri MLA Umanath Kotian, former ZP vice-president Satish Kumpala and former district yuva morcha president Kishore Puttur.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm