ಬ್ರೇಕಿಂಗ್ ನ್ಯೂಸ್
13-01-24 08:46 pm Mangalore Correspondent ಕರಾವಳಿ
ಮಂಗಳೂರು, ಜ.13: ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳಗಂಗೋತ್ರಿಯ ಕೊಣಾಜೆ ಕ್ಯಾಂಪಸ್ಸಿನಲ್ಲಿ ಈ ಸಾಲಿನ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಸಲು ಮುಂದಾಗಿದೆ. ಮೌಲ್ಯಮಾಪನ ನಡೆಸುವ ಅಧ್ಯಾಪಕರು ತಮಗೆ ಸಮಯ ಸಿಕ್ಕಾಗ ಕೊಣಾಜೆಗೆ ಬಂದು ಮೌಲ್ಯಮಾಪನ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿರುವುದು ಗಮನಕ್ಕೆ ಬಂದಿದೆ. ಮೌಲ್ಯಮಾಪನ ಕಾರ್ಯವನ್ನು ಈ ರೀತಿ ಮಾಡುವುದರಿಂದ ಅಧ್ಯಾಪಕರಿಗೆ ದೊಡ್ಡ ಸಮಸ್ಯೆ ಆಗಲಿದೆ. ಹಾಗಾಗಿ ಮಂಗಳೂರು ನಗರ ವ್ಯಾಪ್ತಿಯ ಕಾಲೇಜಿನಲ್ಲಿಯೇ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೆಟ್ ಸದಸ್ಯ ಎಸ್.ಆರ್ ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಈವರೆಗೂ ನಿಯಮ ತಪ್ಪಿರಲಿಲ್ಲ. ಪರೀಕ್ಷಾ ಮಂಡಳಿಯ ಅಧ್ಯಕ್ಷರ ಕಡ್ಡಾಯ ಉಪಸ್ಥಿತಿಯಲ್ಲಿ ಹಾಗೂ ವಿಷಯವಾರು ಮುಖ್ಯಸ್ಥರು ಮತ್ತು ಉಪ ಮುಖ್ಯಸ್ಥರ ನೇರ ಉಸ್ತುವಾರಿಯಲ್ಲಿ ನಡೆಯಬೇಕು ಎಂಬುದು ಮೌಲ್ಯಮಾಪನ ನೀತಿ. ಅಲ್ಲದೆ ಈ ಮೌಲ್ಯಮಾಪನ ಕಾರ್ಯವು ಪಾರದರ್ಶಕ ಆಗಿರಬೇಕು. ಅಧ್ಯಾಪಕರು ತಮ್ಮ ಸಮಯದಲ್ಲಿ ಬಂದು
ಮೌಲ್ಯಮಾಪನ ಕಾರ್ಯ ನಡೆಸುವಂತೆ ಹೇಳಿದರೆ ಈ ನಿಯಮ ಪಾಲನೆ ಹೇಗೆ ಸಾಧ್ಯ? ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಮಹತ್ತರ ಜವಾಬ್ದಾರಿ ಹೊಂದಿರುವಂಥದ್ದು. ಆದರೆ ತಮ್ಮ ಮೂಗಿನ ನೇರಕ್ಕೆ ಮೌಲ್ಯಮಾಪನ ನೀತಿಯನ್ನು ಬದಲಾಯಿಸುವುದರಿಂದ ವಿಶ್ವವಿದ್ಯಾನಿಲಯದ ಮಹತ್ವ ಮತ್ತು ಘನತೆಗೆ ಕುಂದುಂಟಾಗುತ್ತದೆ ಎಂದು ಎಸ್.ಆರ್ ಹರೀಶ್ ಆಚಾರ್ಯ ಹೇಳಿದ್ದಾರೆ.
ಪರೀಕ್ಷಾ ಮೌಲ್ಯಮಾಪನ ನಿಯಮಗಳ ಪ್ರಕಾರ ಪರೀಕ್ಷಾ ಮಂಡಳಿಯ ಅಧ್ಯಕ್ಷರ ಉಪಸ್ಥಿತಿಯಲ್ಲೇ ವಿಷಯವಾರು ಮುಖ್ಯಸ್ಥರು ಮತ್ತು ಉಪ ಮುಖ್ಯಸ್ಥರ ನೇರ ಹೊಣೆಗಾರಿಕೆಯ ನಿಯಂತ್ರಣದಲ್ಲಿ ಮೌಲ್ಯಮಾಪನ ಕಾರ್ಯವನ್ನು ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೌಲ್ಯಮಾಪನವನ್ನು ವಿವಿಯ ಕೊಣಾಜೆ ಕ್ಯಾಂಪಸ್ ಕೇಂದ್ರೀಕೃತವಾಗಿ ನಡೆಸಿದರೆ ಆರ್ಥಿಕವಾಗಿ ಮತ್ತು ಪ್ರಾಯೋಗಿಕವಾಗಿ ಸಾಧುವಲ್ಲ. ದೂರದ ಪ್ರದೇಶಗಳಿಂದ ಬರುವ ಅಧ್ಯಾಪಕರು ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಂಗಳೂರು ನಗರ ಹೊರಭಾಗದ ಕೊಣಾಜೆಗೆ ಬಂದು ಮೌಲ್ಯಮಾಪನ ನಡೆಸುವುದು ಅನವಶ್ಯಕ ತೊಂದರೆ ಉಂಟು ಮಾಡಿದಂತೆ. ಇದು ವಿಶ್ವವಿದ್ಯಾನಿಲಯಕ್ಕೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ರೂಪದಲ್ಲಿ ಆರ್ಥಿಕ ಹೊರೆಯನ್ನೂ ಉಂಟು ಮಾಡುತ್ತದೆ. ತಕ್ಷಣವೇ ಮಂಗಳೂರು ವಿವಿಯು ಉದ್ದೇಶಿತ ಪ್ರಸ್ತಾಪ ಕೈಬಿಟ್ಟು ಮಂಗಳೂರು ನಗರದ ಯಾವುದಾದರೂ ಕಾಲೇಜಿನಲ್ಲಿ ಈ ಸಾಲಿನ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೈಗೊಳ್ಳಬೇಕೆಂದು ಹರೀಶ್ ಆಚಾರ್ಯ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತವನ್ನು ಒತ್ತಾಯಿಸಿದ್ದಾರೆ.
Evaluation of degree examination; Lecturers asked to work at Konaje campus, object to violation of rules, demand drop of proposal
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm