ಬ್ರೇಕಿಂಗ್ ನ್ಯೂಸ್
12-01-24 02:54 pm Mangalore Correspondent ಕರಾವಳಿ
ಮಂಗಳೂರು, ಜ.12: ಕಾಂಗ್ರೆಸ್ ನವರು ಮಾತ್ರ ಯಾಕೆ?ಅನೇಕ ಸ್ವಾಮೀಜಿಗಳು ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಅಂತಿದಾರೆ. ಮಂದಿರಕ್ಕೆ ಹೋಗೋಕೆ ಯಾರ ಪರ್ಮಿಷನ್ ಬೇಕಿಲ್ಲ, ಆದರೆ ಅವತ್ತೇ ಹೋಗಬೇಕಂತ ಇಲ್ಲ. ದೇವಸ್ಥಾನ ಹೋಗೋದು ಅವರವರ ಭಕ್ತಿಗೆ ಬಿಟ್ಟದ್ದು ಎಂದು ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ, ಎಲ್ಲರೂ ಹೋಗಬೇಕು. ಹಾಗೆಂದು ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಅಂತ ಜಗದ್ಗುರು ಸ್ವಾಮೀಜಿಗಳೇ ಹೇಳ್ತಿದಾರೆ. ಇದು ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ. ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ, ರಾಜ್ಯದಲ್ಲೂ ದೇವಸ್ಥಾನದಲ್ಲಿ ಪ್ರಾರ್ಥನೆ ಇದೆ.

ರಾಮನ ಬಗ್ಗೆ ಗೌರವ ಎಲ್ಲರಿಗೂ ಇದೆ, ಆದರೆ ರಾಜಕಾರಣ ಬೆರೆಸಬಾರದು. ಆದರೆ ರಾಮ ಮಂದಿರವನ್ನು ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಬಳಸಲಾಗ್ತಿದೆ. ದೇವಸ್ಥಾನಗಳು ಇರೋದು ನಮಗಾಗಿ, ಭಕ್ತಿಯಿರೋರು ಹೋಗ್ತಾರೆ. ಸ್ವಇಚ್ಛೆಯಿಂದ ಎಲ್ಲರೂ ಹೋಗ್ತಾರೆ, ಹೋಗದಿದ್ರೆ ಟೀಕೆ ಮಾಡಬಾರದು ಎಂದು ಹೇಳಿದರು.
ಡಿಸಿಎಂ ಹುದ್ದೆ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ, ಅದೆಲ್ಲ ಪಕ್ಷದ ಆಂತರಿಕ ವಿಚಾರ. ನನ್ನ ಹೆಸರು ಏನೂ ಇಲ್ಲ, ಅದೆಲ್ಲ ಹೈಕಮಾಂಡ್ ನಿರ್ಧಾರ ಎಂದು ಆ ಕುರಿತ ಪ್ರಶ್ನೆಗೆ ನುಣುಚಿಕೊಂಡರು. ಹಾವೇರಿ ನೈತಿಕ ಪೊಲೀಸ್ ಕುರಿತ ಪ್ರಶ್ನೆಗೆ, ಆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಯಾರೇ ನೈತಿಕ ಪೊಲೀಸ್ ಕೃತ್ಯ ಮಾಡಿದರೂ ಖಂಡಿಸುತ್ತೇನೆ. ನೈತಿಕ ಪೊಲೀಸ್ ಗಿರಿ ಕೃತ್ಯ ಸಹಿಸಲ್ಲ, ಅದರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಸಮನ್ಸ್ ಹಾಕುವುದು ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ, ನೀವು ಬಿಜೆಪಿಯಾದರೆ ಹಿಂದೂ ಕಾರ್ಯಕರ್ತರು ಅಂತೀರಿ ಯಾಕೆ? ಕಾಂಗ್ರೆಸ್ ನವರಾದ್ರೆ ಕಾಂಗ್ರೆಸ್ ಕಾರ್ಯಕರ್ತರು ಅಂತೀರಿ. ಬಿಜೆಪಿಯದ್ದೂ ಬಿಜೆಪಿ ಕಾರ್ಯಕರ್ತರೇ. ಹಾಗೆ ಪ್ರಶ್ನೆ ಮಾಡಬಾರದು ಎಂದು ಮಾಧ್ಯಮದವರ ಬಗ್ಗೆ ಗರಂ ಆದರು. ಅದೆಲ್ಲ ಹಿಂದೂ ಕಾರ್ಯಕರ್ತರು ಅನ್ನಲು ಆಗಲ್ಲ, ನಾವೆಲ್ಲ ಹಿಂದೂಗಳಲ್ವಾ? ಎಂದು ಕೇಳಿದರು.
ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದಿಂದ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲದೆ ಮಾಡಿದ್ದೇವೆ. ಇಷ್ಟು ಪಾರದರ್ಶಕ ಕೆಲಸ ಇಡೀ ದೇಶದಲ್ಲಿ ಆಗಿಲ್ಲ, ಅದೊಂದು ದಾಖಲೆಯಾಗಿದೆ. ಈ ಬಾರಿ 32 ಸಾವಿರ ಕೋಟಿ ದುಡ್ಡು ಇದಕ್ಕಾಗಿ ಕೊಟ್ಟಿದ್ದೇವೆ, ಮುಂದಿನ ವರ್ಷ 58 ಸಾವಿರ ಕೋಟಿ ಕೊಡುತ್ತಿದ್ದೇವೆ. ಬಿಜೆಪಿ ಸರ್ಕಾರ ಹೇಳಿದ್ದನ್ನ ಯಾವುದನ್ನೂ ಜಾರಿಗೆ ತಂದಿಲ್ಲ. ಕೇಂದ್ರದ ಅಧಿಕಾರಿಗಳೇ ಇಲ್ಲಿಗೆ ಬಂದಾಗ ಇದೆಲ್ಲ ಹೇಗೆ ಮಾಡಿದ್ರಿ ಅಂತಿದ್ದಾರೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಕೋವಿಡ್ ಹೆಸರಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆಯೆಂಬ ಯತ್ನಾಳ್ ಆರೋಪದ ಬಗ್ಗೆ, ಯತ್ನಾಳ್ ಈವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಬಿಜೆಪಿ ವಿರುದ್ದದ ಆರೋಪದ ಬಗ್ಗೆ ಮಾಹಿತಿ ಕೊಡಲು ಹೇಳಿದ್ದೇವೆ. ಹೇಳಿಕೆ ನೀಡುವ ಬದಲು ಯತ್ನಾಳ್ ಗೆ ದಾಖಲೆ ಕೊಡಲು ಹೇಳಿದ್ದೇವೆ. ಆಪಾದನೆ ಮಾಡೋದ್ರ ಜೊತೆಗೆ ತನಿಖಾ ಸಮಿತಿ ಮುಂದೆ ಕೊಡಲು ಹೇಳಿದ್ದೇವೆ. ಆಯೋಗದ ವಿಚಾರಣೆ ವೇಳೆ ನೀಡಿದ್ರೆ ಉಪಯೋಗ ಆಗುತ್ತೆ ಅಂತ ಸಲಹೆ ನೀಡಿದ್ದೇನೆ ಎಂದರು. ತನಿಖಾ ಸಮಿತಿ ನೋಟಿಸ್ ಕೊಟ್ಟಿದೆಯಾ ಎಂದಿದ್ದಕ್ಕೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.
Why only the Congress? Many swamis have said that they will not go for the inauguration of ram temple. You don't need anyone's permission to go to the temple, but you don't have to go that day. Health and Dakshina Kannada district in-charge minister Dinesh Gundu Rao said that going to the temple is up to their devotees.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm