ಬ್ರೇಕಿಂಗ್ ನ್ಯೂಸ್
10-01-24 11:09 pm Mangalore Correspondent ಕರಾವಳಿ
ಮಂಗಳೂರು, ಜ.10: ಬೆಂಗಳೂರಿನಲ್ಲಿ ಲೋಕಸಭೆ ಸಿದ್ಧತೆ ಬಗ್ಗೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ ಖೂಬಾಗೆ ಟಿಕೆಟ್ ನೀಡಬಾರದೆಂದು ಶಾಸಕ ಪ್ರಭು ಚವಾಣ್ ಆಗ್ರಹ ಮಾಡಿದ್ದು ಮತ್ತು ಇಬ್ಬರು ನಾಯಕರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ. ಕೊನೆಗೆ, ಭಗವಂತ ಖೂಬಾ ಸಭೆಯಿಂದ ಅರ್ಧದಲ್ಲಿ ಹೊರ ನಡೆದು ಬಂದಿದ್ದಾರೆ ಎನ್ನಲಾಗಿತ್ತು.
ಈ ಬಗ್ಗೆ ಕಡಬ ತಾಲೂಕಿನ ಬಳ್ಪದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಲ್ಲಿ ಕೇಳಿದಾಗ, ಅದು ಸತ್ಯಕ್ಕೆ ದೂರವಾದ ಮಾತು. ಹಾಗೇನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಸುದ್ದಿ ನಾನು ನೋಡಿದೆ. ಆ ಸಭೆಯಲ್ಲಿ ಪ್ರತೀ ಲೋಕಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಮಾತ್ರ ಲೋಕಸಭಾ ಸಿದ್ದತಾ ಸಭೆ ನಡೆದಿತ್ತು. ಅಲ್ಲಿ ಯಾರ ಪರ, ವಿರೋಧ ಅಭಿಪ್ರಾಯದ ಸಭೆ, ಚರ್ಚೆ ನಡೆದಿಲ್ಲ. ಟಿಕೆಟ್ ಹಂಚಿಕೆ ಕೇಂದ್ರದವರು ಅನೇಕ ಆಯಾಮ ಮತ್ತು ಮಾನದಂಡಗಳಲ್ಲಿ ಮಾಡ್ತಾರೆ. ಅದು ಬಿಟ್ಟು ಸಭೆಯಿಂದ ಹೊರನಡೆದಿರುವ ಯಾವುದೇ ಘಟನೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾಗಿದೆ.
ನಿನ್ನೆ ರಾತ್ರಿ ಬಂದ ನನ್ನ ಟಿಪಿ ನೋಡಿ, ಅದರಲ್ಲಿ 12 ಗಂಟೆಗೆ ಹೊರಡಬೇಕು ಅಂತ ಇದೆ. ನಾನು ರಾಜ್ಯಾಧ್ಯಕ್ಷರ ಅನುಮತಿ ಕೇಳಿಯೇ ಹೊರಗೆ ಬಂದಿದ್ದೇನೆ. ಸಂಜೆ 5 ಗಂಟೆ ಹೊತ್ತಿಗೆ ಕಡಬದ ಬಳ್ಪದ ಕಾರ್ಯಕ್ರಮಕ್ಕೆ ಬರಬೇಕಿತ್ತು. ಇದನ್ನ ಒಂದು ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದೇನೆ. ಹೀಗಾಗಿ ಬೀದರ್ ಮತ್ತು ಕಲಬುರ್ಗಿ ಲೋಕಸಭೆ ಸ್ಥಾನಗಳ ಚರ್ಚೆ ಮುಗಿಸಿ ಹೊರಬಂದೆ.
ನಿಮ್ಮ ವಿರುದ್ಧ ಪ್ರಭು ಚವಾಣ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ, ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಮಾಧಾನಕ್ಕೆ ಪಕ್ಷದಲ್ಲಿ ಯಾವ ಸ್ಥಾನ ಇದೆ. ಅವರು ಹೇಳಬಹುದು, ಆದರೆ ಅವರು ಹೇಳಿದ ತಕ್ಷಣ ವರಿಷ್ಠರು ಮಾಡಬೇಕು ಅಂತ ಇಲ್ಲ. ಒಂದು ವ್ಯವಸ್ಥೆ ಅಂತ ಇರುತ್ತೆ, ಎಲ್ಲರನ್ನೂ ಕೂಡಿಸೋದು, ಅದು ಪಕ್ಷದಲ್ಲಿ ನಡೆಯುತ್ತೆ. ಯಾರ ಅಸಮಾಧಾನವೂ ಪಕ್ಷದಲ್ಲಿ ಕೆಲಸಕ್ಕೆ ಬರಲ್ಲ. ತಮ್ಮ ಅಭಿಪ್ರಾಯ ಕೇಳಿದಾಗ ಹೇಳುವ ವ್ಯವಸ್ಥೆ ಪಕ್ಷದಲ್ಲಿ ಇದೆ. ಹೀಗಾಗಿ ಇಂಥದ್ದರಲ್ಲಿ ಅಸಮಾಧಾನಕ್ಕೆ ಯಾವುದೇ ಆಸ್ಪದ ಇಲ್ಲ ಎಂದು ಹೇಳಿದರು.
ಖೂಬಾ ಅವರು ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ ಗ್ರಾಮೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದರು.
At a meeting of BJP leaders in Bengaluru on lok sabha preparations, MLA Prabhu Chavan demanded that sitting MP Bhagwant Khuba should not be given a ticket from Bidar constituency and the two leaders had a verbal spat with each other. In the end, it was said that Lord Khooba had left the congregation halfway.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 09:32 pm
HK News Desk
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm