ಬ್ರೇಕಿಂಗ್ ನ್ಯೂಸ್
08-01-24 03:18 pm Mangaluru Correspondent ಕರಾವಳಿ
ಮಂಗಳೂರು, ಜ.8: ಪ್ರಧಾನಿ ಮೋದಿ ಲಕ್ಷದ್ವೀಪ ಸಮುದ್ರದಲ್ಲಿ ಮುಳುಗೆದ್ದು ಡೈವ್ ಮಾಡಿ ಬಂದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲಿನ ಪ್ರವಾಸೋದ್ಯಮದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಮೋದಿ ಬಂದಿರುವುದು ಮಾಲ್ದೀವ್ಸ್ ಪ್ರವಾಸೋದ್ಯಮಕ್ಕೆ ಪೆಟ್ಟು ಬಿತ್ತೆಂದು ಅಲ್ಲಿನ ಸಚಿವರು ಮೋದಿಯನ್ನು ಟೀಕಿಸಿ ತಾವೇ ತಮ್ಮ ಬುಡಕ್ಕೆ ಕಲ್ಲು ಹಾಕ್ಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್ ಸೆಲೆಬ್ರಿಟಿಗಳು ಬಾಯ್ಕಾಟ್ ಮಾಲ್ದೀವ್ಸ್, ಲಕ್ಷದ್ವೀಪ ಹೋಗೋಣ ಎಂದು ಅಭಿಯಾನ ಆರಂಭಿಸಿದ್ದರೆ, ಇತ್ತ ಲಕ್ಷದ್ವೀಪಕ್ಕೆ ಹೋಗುವುದೆಲ್ಲಿಂದ ಅನ್ನುವ ಚರ್ಚೆ ಜಾಲತಾಣದಲ್ಲಿ ವ್ಯಕ್ತವಾಗಿದೆ. ಲಕ್ಷದ್ವೀಪ ತಲುಪಲು ಅತಿ ಹತ್ತಿರದ ಮಂಗಳೂರು ನಗರದಿಂದ ಸಂಪರ್ಕ ವ್ಯವಸ್ಥೆಯೇ ಇಲ್ಲ, ಇದರತ್ತ ಸಂಸದರು ಗಮನಹರಿಸಿಯಾರೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಲಕ್ಷದ್ಪೀಪಕ್ಕೆ ಈ ಹಿಂದೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಸಂಚಾರಕ್ಕೆ ಹಡಗು ವ್ಯವಸ್ಥೆ ಇತ್ತು. ಐದಾರು ಸಾವಿರಕ್ಕೆ ನಾಲ್ಕೈದು ದಿನಗಳ ಟೂರ್ ಪ್ಯಾಕೇಜ್ ಕೂಡ ಇತ್ತು. ಅದು ಕಾರಣಾಂತರಗಳಿಂದ ನಿಂತು ಹೋದ ಬಳಿಕ ಆ ವ್ಯವಸ್ಥೆಗೆ ಚಾಲನೆ ಸಿಕ್ಕಿಲ್ಲ. ಆದರೆ, ಲಕ್ಷದ್ವೀಪಕ್ಕೆ ಎಲ್ಲ ರೀತಿಯ ತರಕಾರಿ, ಇನ್ನಿತರ ಸರಕು ಸಾಗಿಸುವುದು ಮಂಗಳೂರಿನ ಬಂದರಿನಿಂದಲೇ. ಈಗಲೂ 2-3 ದಿನಕ್ಕೊಮ್ಮೆ ದೊಡ್ಡ ಬೋಟಿನಲ್ಲಿ ಸರಕು ತುಂಬಿಕೊಂಡು ಅಕ್ಕಿಯಿಂದ ಹಿಡಿದು ಕಟ್ಟಡ ಸಾಮಾಗ್ರಿಯ ವರೆಗೆ ಎಲ್ಲವನ್ನೂ ಮಂಗಳೂರಿನಿಂದಲೇ ಸಾಗಿಸಲಾಗುತ್ತದೆ. ಆದರೆ ಜನರ ಸಂಚಾರಕ್ಕಾಗಲೀ, ಪ್ರವಾಸೋದ್ಯಮ ದೃಷ್ಟಿಯಿಂದ ತೆರಳುವ ಮಂದಿಗೆ ಲಕ್ಷದ್ವೀಪಕ್ಕೆ ತೆರಳಲು ಸಂಪರ್ಕ ವ್ಯವಸ್ಥೆಯೂ ಇಲ್ಲ, ಜಿಲ್ಲಾಡಳಿತದಿಂದ ಅನುಮತಿಯೂ ಸಿಗೋದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ವಯಸ್ಸು 75 ಆದರೂ ಸ್ಕೂಬಾ ಡೈವಿಂಗ್ ಮಾಡುವ ಕಸರತ್ತು ನಡೆಸಿದ್ದಾರೆ. ಅದರ ಫೋಟೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಪ್ರವಾಸೋದ್ಯಮದ ಆಕರ್ಷಣೆ ಗರಿಗೆದರಿದೆ. ಬಾಲಿವುಡ್ಡಿಗರು ಲಕ್ಷದ್ವೀಪಗಳತ್ತ ಮುಖ ಮಾಡಿದ್ದಾರೆ. ಇದರ ನಡುವಲ್ಲೇ ಲಕ್ಷದ್ವೀಪ ತಲುಪುವ ದಾರಿ ಯಾವುದಯ್ಯಾ ಎಂದು ಕನ್ನಡಿಗ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸದ್ಯಕ್ಕೆ ಕೇರಳದ ಕೊಚ್ಚಿಯಿಂದ ಮಾತ್ರ ಹಡಗು ಮತ್ತು ವಿಮಾನ ಸಂಚಾರದ ವ್ಯವಸ್ಥೆ ಇದೆ. ಅಂತರದಲ್ಲಿ ಹತ್ತಿರ ಇರುವ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸಾಗುವ ವ್ಯವಸ್ಥೆ ಬಂದ್ ಆಗಿದೆ. ಈ ಬಗ್ಗೆ ಮಂಗಳೂರಿನ ಸಂಸದರು, ಶಾಸಕರು ಗಮನಹರಿಸುತ್ತಾರೆಯೇ ಎಂದು ಚುನಾವಣೆ ಹೊತ್ತಲ್ಲಿ ಜಾಲತಾಣದಲ್ಲಿ ಜನಸಾಮಾನ್ಯರು ಪ್ರಶ್ನೆ ಮಾಡಿದ್ದಾರೆ.
ವಿಕ್ರಮ್ ಮಂಗಳೂರು ಎಂಬವರು ಫೇಸ್ಬುಕ್ ನಲ್ಲಿ ಮಾಡಿರುವ ಪೋಸ್ಟಿಗೆ ಸಂಸದ ನಳಿನ್ ಕುಮಾರ್ ಸ್ವತಃ ಅವರನ್ನು ಸಂಪರ್ಕಿಸಿದ್ದು ತಾನು ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾತನಾಡಿದ್ದೇನೆ, ಸೋಮವಾರಕ್ಕೆ ಅಪ್ಡೇಟ್ ತಿಳಿಸುತ್ತೇನೆ ಎಂದಿದ್ದಾರಂತೆ. ಎರಡು ದಿನಗಳ ಹಿಂದೆ ವಿಕ್ರಮ್ ಹಾಕಿರುವ ಪೋಸ್ಟ್ ಮತ್ತು ಅದರಲ್ಲಿ ಸಂಸದರ ಕುರಿತು ಇಚ್ಛಾಶಕ್ತಿ ಇಲ್ಲದವರಿಗೆ ಹೇಳಿಯೇನು ಪ್ರಯೋಜನ ಎಂದು ಅಣಕಿಸಿ ಮಾಡಿರುವ ಕಮೆಂಟುಗಳಿವೆ. ಲಕ್ಷದ್ವೀಪಕ್ಕೆ ತೆರಳಲು ಸಾಮಾನ್ಯ ಜನರಿಗೆ ಪರ್ಮಿಟ್ ವೀಸಾನೇ ಸಿಗಲ್ಲ. ಅದಕ್ಕೆ ಪಡುವ ಕಷ್ಟ ನೋಡಿದರೆ ಅಮೆರಿಕ, ಇಂಗ್ಲೆಂಡ್ ನೋಡಿಕೊಂಡು ಬರಬಹುದು ಎಂದು ಇನ್ನೊಂದು ಪೋಸ್ಟ್ ಇದೆ. ಲಕ್ಷದ್ವೀಪ ಭಾರತದ್ದೇ ಅಂಗವಾಗಿದ್ದರೂ, ಅಲ್ಲಿಗೊಂದು ಸಂಸತ್ ಕ್ಷೇತ್ರ ಇದ್ದರೂ ಅದನ್ನೊಂದು ಪರದೇಶದ ರೀತಿ ಮಾಡಿದ್ದು ನಮ್ಮ ವ್ಯವಸ್ಥೆ. ಪ್ರವಾಸೋದ್ಯಮಕ್ಕೆ ಇದರಿಂದ ದೊಡ್ಡ ಪೆಟ್ಟು ಬಿದ್ದಿದೆ.
ಮಾಲ್ದೀವ್ಸ್ ದ್ವೀಪಗಳ ರೀತಿಯಲ್ಲೇ ಲಕ್ಷದ್ವೀಪ ಇದೆ. ಮಾಲ್ದೀವ್ಸ್ ಇಡೀ ಜಗತ್ತಿನವರನ್ನು ಪ್ರವಾಸೋದ್ಯಮ ಕಾರಣಕ್ಕೆ ಸೆಳೆಯುತ್ತಿದೆ. ಅದೇ ಆದಾಯದಲ್ಲಿ ಅಲ್ಲಿನ ಜನ ಬದುಕುತ್ತಿದ್ದಾರೆ. ಆಡಳಿತ ವ್ಯವಸ್ಥೆ ನಡೀತಾ ಇದೆ. ಲಕ್ಷದ್ವೀಪದ ಜನರು ಇವತ್ತಿಗೂ ತುತ್ತು ಅನ್ನಕ್ಕೆ ಕಷ್ಟ ಪಡುತ್ತಿದ್ದಾರೆ. ಅಲ್ಲಿನ ಜನರಿಗೆ ಮೀನುಗಾರಿಕೆ ಬಿಟ್ಟರೆ ಬೇರೆ ಆದಾಯ ಇಲ್ಲ. ಎಲ್ಲದಕ್ಕೂ ಕರ್ನಾಟಕ, ಕೇರಳವನ್ನೇ ಅವಲಂಬಿಸಿದ್ದಾರೆ. ಭಾರತ ಸರಕಾರ ಲಕ್ಷದ್ವೀಪದ ಬಗ್ಗೆ ಅಸಡ್ಡೆ ವಹಿಸಿದ್ದು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡದಿರುವುದೂ ಇದಕ್ಕೆ ಕಾರಣ. ಮಂಗಳೂರಿನಿಂದ ಹಡಗು ಮತ್ತು ವಿಮಾನ ಸಂಚಾರಕ್ಕೆ ಸುಲಭದ ವ್ಯವಸ್ಥೆ ಮಾಡಬಹುದು. ಈ ಹಿಂದೆ ಇದ್ದ ರೀತಿಯಲ್ಲೇ ಹಡಗಿನಲ್ಲಿ ಕಡಿಮೆ ಖರ್ಚಿನ ಟೂರ್ ಪ್ಯಾಕೇಜ್ ಮಾಡಬಹುದು. ಬೆಂಗಳೂರಿನ ಟೆಕ್ಕಿಗಳು ಸಾವಿರಾರು ಖರ್ಚು ಮಾಡಿ ಕರಾವಳಿಯ ರೆಸಾರ್ಟಿನಲ್ಲಿ ಇದ್ದು ಹೋಗುವ ಬದಲು ಸಮುದ್ರ ನೋಡ್ಕೊಂಡು ದ್ಪೀಪ ಸುತ್ತಿ ಬರಬಹುದು. ಇಂತಹ ನೂರೆಂಟು ದ್ವೀಪಗಳು ನಮ್ಮ ಕರಾವಳಿಯಲ್ಲಿದ್ದರೂ ಅವುಗಳನ್ನು ತೋರಿಸಿ ಪ್ರವಾಸೋದ್ಯಮ ಬೆಳೆಸುವ ದೂರದೃಷ್ಟಿ ನಮ್ಮ ಜನಪ್ರತಿನಿಧಿಗಳಿಗಿಲ್ಲ. ಪ್ರಧಾನಿ ಮೋದಿ ಲಕ್ಷದ್ವೀಪದ ದಡದಲ್ಲಿ ಕುಳಿತು ಫೋಟೊ ಕ್ಲಿಕ್ಕಿಸಿದ್ದು, ನೀಲ ಸಮುದ್ರದಲ್ಲಿ ಡೈವ್ ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಆಕರ್ಷಿಸುವಂತೆ ಮಾಡಿದ್ದರೆ, ಕರಾವಳಿಯ ಸಂಸದ, ಶಾಸಕರು ನಿದ್ದೆಯಿಂದ ಎಚ್ಚರಗೊಂಡಿಲ್ಲ.
Modi in Lakshadweep, Mangaloreans question MP Nalin on social media about travel arrangement after which Nalin Kumar Kateel has instructed the district administration of Dakshina Kannada to initiate measures for the commencement of a cruise service to Lakshadweep from Mangalore.
23-04-25 01:06 pm
Bangalore Correspondent
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm