ಬ್ರೇಕಿಂಗ್ ನ್ಯೂಸ್
31-12-23 03:32 pm Mangalore Correspondent ಕರಾವಳಿ
ಮಂಗಳೂರು, ಡಿ.31: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ಕೆ.ಎ. ಹಿದಾಯತುಲ್ಲಾ ಅವರು ತಮ್ಮ ಪ್ರವಾಸ ಕಾರ್ಯಕ್ರಮದಲ್ಲಿ ವಿಮಾನ ಸಂಚಾರ ಮತ್ತು ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ಬುಕ್ ಮಾಡಿರುವ ವಿಚಾರದಲ್ಲಿ ಸಚಿವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
‘ಆರೋಗ್ಯ ಸಚಿವರು ಇಲಾಖಾ ಕಾರ್ಯಕ್ರಮ ಹಾಗೂ ಕೋವಿಡ್ ಇನ್ನಿತರ ಅಗತ್ಯ ಸಭೆಗಳಲ್ಲಿ ಬಿಝಿಯಾಗಿರುವುದರಿಂದ ಸಚಿವರ ಆಪ್ತ ಕಾರ್ಯದರ್ಶಿ ಹಿದಾಯತುಲ್ಲಾ ಅವರು ಡಿ.27ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪ್ರಯಾಣ ಬೆಳೆಸಿದ್ದರು. ಸಾರ್ವಜನಿಕರ ಮಾಹಿತಿಗಾಗಿ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ವೇಳೆ, ವಿಮಾನ ಪ್ರಯಾಣದ ವೆಚ್ಚವನ್ನು ಹಿದಾಯತುಲ್ಲಾ ಅವರೇ ತಮ್ಮ ಸ್ವಂತ ಹಣದಿಂದ ಭರಿಸಿದ್ದಾರೆ.’
‘ಕೆಲವು ಮಾಧ್ಯಮಗಳು ಈ ಬಗ್ಗೆ ಸರ್ಕಾರಿ ವೆಚ್ಚದಲ್ಲಿ ವಿಮಾನ ಸಂಚಾರ, ರೆಸಾರ್ಟ್ ಬುಕ್ಕಿಂಗ್ ಮಾಡಿದ್ದಾರೆಂದು ತಪ್ಪಾಗಿ ಸುದ್ದಿ ಪ್ರಕಟಿಸಿವೆ. ಈ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿ ಹಿದಾಯತುಲ್ಲಾ ಅವರೇ ಸ್ಪಷ್ಟನೆ ನೀಡಿದ್ದು, ತಾವು ಪ್ರಯಾಣಿಸಿದ್ದ ಪ್ರಯಾಣದ ವೆಚ್ಚದ ಬಗ್ಗೆ ದಾಖಲೆಗಳನ್ನು ಮುಂದಿಟ್ಟಿದ್ದಾರೆ. ಸರಕಾರದ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಪ್ರವಾಸದ ವಿವರವನ್ನು ಆಯಾ ಜಿಲ್ಲಾಡಳಿತಕ್ಕೆ ಶಿಷ್ಟಾಚಾರಕ್ಕಾಗಿ ಕಳುಹಿಸುವ ಪದ್ಧತಿ ಸರ್ವೇ ಸಾಮಾನ್ಯ. ಕೆಎ ಹಿದಾಯತ್ ಅವರು ಸರಕಾರದ ಅಪರ ಕಾರ್ಯದರ್ಶಿ ಹುದ್ದೆಯ ಅಧಿಕಾರಿಯಾಗಿದ್ದು ತಮ್ಮ ಕರ್ತವ್ಯದ ನಿಮಿತ್ತ ಪ್ರವಾಸದ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿಗಳ ಮಾಹಿತಿಗಾಗಿ ಹಾಕಿಕೊಂಡು ಜಿಲ್ಲಾ ಪ್ರವಾಸ ಕೈಗೊಂಡಿರುತ್ತಾರೆಯೇ ಹೊರತು ಸರ್ಕಾರದಿಂದ ವೆಚ್ಚ ಭರಿಸಿಕೊಳ್ಳುವ ಉದ್ದೇಶದಿಂದಲ್ಲ.’
‘ಸಚಿವರ ಆಪ್ತ ಕಾರ್ಯದರ್ಶಿ ಅವರಿಗೆ ಸರ್ಕಾರದಲ್ಲಿ ಟಿಎ, ಡಿಎ ಕ್ಲೈಮ್ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಅಲ್ಲದೆ, ಹಿದಾಯತುಲ್ಲಾ ಅವರು ಈವರೆಗೆ ಬೇರೆ ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಯಾವುದೇ ವೆಚ್ಚಗಳನ್ನು ಸರ್ಕಾರದಿಂದ ಭರಿಸಿಕೊಂಡಿಲ್ಲ. ಬದಲಿಗೆ ತಮ್ಮ ಸ್ವಂತ ಹಣದಿಂದಲೇ ಪ್ರಯಾಣಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಗೆ ತೆರಳಿ ಜನರ ಅಹವಾಲು ಸ್ವೀಕರಿಸಿದರೂ ಅದರಲ್ಲಿ ತಪ್ಪು ಹುಡುಕುವುದು ಎಷ್ಟು ಸರಿ’ ಎಂದು ಸಚಿವರ ಕಚೇರಿಯ ಮಾಧ್ಯಮ ಸಲಹೆಗಾರರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದೆಂದು ಈ ಸ್ಪಷ್ಟನೆ ನೀಡುತ್ತಿರುವುದಾಗಿ ಸಚಿವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿದಾಯತುಲ್ಲಾ ಅವರು ಡಿ.27ರಂದು ಪ್ರವಾಸ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದಂತೆ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಮಂಗಳೂರಿನಲ್ಲಿ ಅಹವಾಲು ಸ್ವೀಕಾರ ಎಂದು ಪ್ರವಾಸ ವಿವರದಲ್ಲಿ ನಮೂದಾಗಿತ್ತು. ಇದಲ್ಲದೆ, ಡಿ.30 ಮತ್ತು 31ರಂದು ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ಬುಕ್ ಮಾಡಿರುವುದನ್ನು ಪ್ರವಾಸ ವಿವರದಲ್ಲಿ ಉಲ್ಲೇಖಿಸಲಾಗಿತ್ತು. ಅಹವಾಲು ಸ್ವೀಕಾರಕ್ಕೆ ಬರುತ್ತಿದ್ದ ಅಧಿಕಾರಿ ತನ್ನ ಪ್ರವಾಸ ಕಾರ್ಯಕ್ರಮದಲ್ಲಿಯೇ ವಿಮಾನ ಸಂಚಾರ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೆಸಾರ್ಟ್ ಬುಕ್ ಮಾಡಿರುವುದನ್ನು ಉಲ್ಲೇಖಿಸಿದ್ದರು. ಈ ಬಗ್ಗೆ ಹೆಡ್ಲೈನ್ ಕರ್ನಾಟಕ ವೆಬ್ ನಲ್ಲಿ ಅಧಿಕಾರಿಯ ದುಂದುವೆಚ್ಚವನ್ನು ಪ್ರಶ್ನಿಸಿ ವರದಿ ಪ್ರಕಟಿಸಲಾಗಿತ್ತು.
Following the viral story from Headline Karnataka, Health Minister Dinesh Gundurao PS Hidayatullah provides clarity. Makes it clear that the funds used to purchase airline tickets and hotel reservations are his own and are not provided by the government. Following the viral breakout of Headline Karnataka News, the explanation became apparent.
23-04-25 02:51 pm
Bangalore Correspondent
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm