ಬ್ರೇಕಿಂಗ್ ನ್ಯೂಸ್
28-12-23 10:10 pm Mangalore Correspondent ಕರಾವಳಿ
ಮಂಗಳೂರು, ಡಿ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ಪರಿಸರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಡಿ.26ರಂದು ರಾತ್ರಿ 12 ಗಂಟೆ ವೇಳೆಗೆ ಇಮೇಲ್ ಸಂದೇಶ ಬಂದಿದೆ. ಮಂಗಳೂರು ಸೇರಿದಂತೆ ದೇಶದ ಬೇರೆ ಕೆಲವು ವಿಮಾನ ನಿಲ್ದಾಣಗಳಿಗೂ ಇದೇ ರೀತಿಯ ಸಂದೇಶ ಬಂದಿದೆ. ಮರುದಿನ ಡಿ.27ರಂದು ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ಮಾಹಿತಿ ತಿಳಿದ ಏರ್ಪೋರ್ಟ್ ಸಿಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಮೇಲ್ ಸಂದೇಶದಲ್ಲಿ, ನಾವು ಫ್ಯೂನಿಂಗ್ ಎನ್ನುವ ಉಗ್ರವಾದಿ ಸಂಘಟನೆಯವರಾಗಿದ್ದು, ನಿಮ್ಮಲ್ಲಿಗೆ ಬರುತ್ತಿರುವ ವಿಮಾನ ಒಂದರಲ್ಲಿ ಬಾಂಬ್ ಇಟ್ಟಿದ್ದೇವೆ. ಆ ಬಾಂಬ್ ನಿಮ್ಮ ಏರ್ಪೋರ್ಟ್ ಒಳಗಡೆಯೂ ಇದ್ದಿರಬಹುದು. ಬಾಂಬನ್ನು ಗುಪ್ತ ಜಾಗದಲ್ಲಿ ಇಡಲಾಗಿದ್ದು, ಕೆಲವೇ ಗಂಟೆಗಳಲ್ಲಿ ಅದು ಬ್ಲಾಸ್ಟ್ ಆಗಲಿದೆ. ನಿಮ್ಮನ್ನೆಲ್ಲ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ವಿಷಯ ತಿಳಿಯುತ್ತಲೇ ಏರ್ಪೋರ್ಟ್ ಮತ್ತು ಪರಿಸರದಲ್ಲಿ ತಪಾಸಣೆ ನಡೆಸಲಾಗಿದೆ. ಹೆಚ್ಚುವರಿ ತಪಾಸಣೆ ಮಾಡಲು ಚೆಕ್ ಪೋಸ್ಟ್ ಹಾಕಲಾಗಿದೆ. ಬಜ್ಪೆ ಠಾಣೆ ಇನ್ಸ್ ಪೆಕ್ಟರ್ ಸೇರಿದಂತೆ ಪೊಲೀಸ್ ಮತ್ತು ಏರ್ಪೋರ್ಟ್ ಹಿರಿಯಧಿಕಾರಿಗಳು ಸಭೆಯನ್ನು ನಡೆಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ದೂರಿನಂತೆ ಬಜ್ಪೆ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
Bomb threat at Mangalore international Airport by Email, security tightened. On 26/12/2023 at 2359 Hrs, an email was received at multiple airports, including Mangalore Airport with respect to threat of Bomb. Email received from - [email protected] There are explosives inside of one of your planes. But also inside of your airport.The explosives are well hidden, and they will go off in a few hours. I will kill you all. WE ARE A TERRORIST GROUP CALLED; "Funing".
23-04-25 02:51 pm
Bangalore Correspondent
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
23-04-25 05:16 pm
HK News Desk
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm