ಬ್ರೇಕಿಂಗ್ ನ್ಯೂಸ್
27-12-23 01:50 pm Mangalore Correspondent ಕರಾವಳಿ
ಮಂಗಳೂರು, ಡಿ.27: ಎನ್ಎಂಪಿಟಿ ಬಂದರಿನಿಂದ 9.5 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಲೈಬೀರಿಯಾ ಮೂಲದ ತೈಲ ಟ್ಯಾಂಕರ್ ಹಡಗಿನಲ್ಲಿ ಸಿಬ್ಬಂದಿಯೊಬ್ಬರು ತೀವ್ರ ಅನಾರೋಗ್ಯಕ್ಕಿಡಾಗಿದ ಘಟನೆ ನಡೆದಿದ್ದು ಅವರನ್ನು ಕೋಸ್ಟ್ ಗಾರ್ಡ್ ಸಿಬಂದಿ ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಂಟಿ ಐವರಿ ರೇ ಎನ್ನುವ ಹೆಸರಿನ ಹಡಗಿನಲ್ಲಿದ್ದ ಸಿಬ್ಬಂದಿಯೊಬ್ಬರು ನಿನ್ನೆ ರಾತ್ರಿ ವಾಶ್ ರೂಮಿನಲ್ಲಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಕರ್ನಾಟಕದ ಕೋಸ್ಟ್ ಗಾರ್ಡ್ ಸಿಬಂದಿಗೆ ರಕ್ಷಣೆ ಕೋರಿ ಕರೆ ಬಂದಿತ್ತು. ಮಧ್ಯರಾತ್ರಿ 12.30ಕ್ಕೆ ಕರೆ ಬಂದಿದ್ದು ತುರ್ತಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್ ಸಿಬಂದಿ ಸಿ-448 ಇಂಟರ್ ಸೆಪ್ಟರ್ ಬೋಟಿನಲ್ಲಿ ವೈದ್ಯರ ಸಹಿತ ಹಡಗಿನ ಬಳಿಗೆ ತೆರಳಿದ್ದಾರೆ. ತಡರಾತ್ರಿ 2.10ರ ವೇಳೆಗೆ ಬೋಟ್ ಅಲ್ಲಿಗೆ ತಲುಪಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಬಂದಿಗೆ ತುರ್ತು ಚಿಕಿತ್ಸೆ ನೀಡಿ, ಕೂಡಲೇ ಅವರನ್ನು ಮಂಗಳೂರಿನ ಬಂದರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಡರಾತ್ರಿಯಾದರೂ ಕೋಸ್ಟ್ ಗಾರ್ಡ್ ಸಿಬಂದಿ ತುರ್ತಾಗಿ ಸ್ಪಂದಿಸಿ, ರಕ್ಷಣಾ ಕಾರ್ಯ ನಡೆಸಿದ್ದಾರೆ. ಐವರಿ ರೇ ಹಡಗು ತೈಲ ಮತ್ತು ಕೆಮಿಕಲ್ ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು 13 ದಿನಗಳ ಹಿಂದೆ ಲೈಬೀರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರಿನ ಬಂದರಿಗೆ ಆಗಮಿಸಿತ್ತು. ಮಂಗಳೂರು ಬಂದರಿನಲ್ಲಿ ಒಳಬರಲು ಸಿಗ್ನಲ್ ಸಿಗದೇ ಇದ್ದುದರಿಂದ ಸಮುದ್ರ ಮಧ್ಯೆ ಲಂಗರು ಹಾಕಿತ್ತು. ಈ ವೇಳೆ, ಸಿಬಂದಿ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿತ್ತು.
A crew member of a Liberian oil tanker ship, which was anchored in the sea 9.5 nautical miles from NMPT port, fell seriously ill and was rescued by the Coast Guard personnel and admitted to a hospital in Mangaluru.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm