ಬ್ರೇಕಿಂಗ್ ನ್ಯೂಸ್
26-12-23 01:09 pm Mangalore Correspondent ಕರಾವಳಿ
ಮಂಗಳೂರು, ಡಿ.26: ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು - ಮಡಗಾಂವ್ ಮಧ್ಯೆ ಪ್ರಾಯೋಗಿಕ ಓಡಾಟ ನಡೆಸಿದೆ. ಇಂದು ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್ ಹೊರಟಿದೆ.
ಇಂದಿನಿಂದ ಮೂರು ದಿನ ಪ್ರಾಯೋಗಿಕ ಓಡಾಟ ನಡೆಸಲಿದೆ ಎಂದು ರೈಲ್ವೇ ಮೂಲಗಳಿಂದ ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟ ರೈಲು ಮಧ್ಯಾಹ್ನ 1:15ಕ್ಕೆ ಮಡಗಾಂವ್ (ಗೋವಾ) ತಲುಪಲಿದೆ. ವಾಪಾಸು ಮಧ್ಯಾಹ್ನ 1:45ಕ್ಕೆ ಮಡಗಾಂವ್ ನಿಂದ ಹೊರಟು ಸಂಜೆ 6:30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಇಂದು ಬೆಳಗ್ಗೆ ಪ್ರಾಯೋಗಿಕ ಓಡಾಟ ಸಂದರ್ಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್ ರೈಲಿನ ವೀಕ್ಷಣೆ ಮಾಡಿದ್ದಾರೆ.
ನೂತನ ವಂದೇ ಭಾರತ್ ರೈಲು ಚೆನ್ನೈಯಿಂದ ಹೊರಟು ಕೇರಳದ ಕೋಝಿಕೋಡ್ ಮಾರ್ಗವಾಗಿ ಸೋಮವಾರ ಸಂಜೆ ಮಂಗಳೂರು ತಲುಪಿತ್ತು. ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ಡಿಸೆಂಬರ್ 30ರಿಂದ ಅಧಿಕೃತ ಓಡಾಟಕ್ಕೆ ದಕ್ಷಿಣ ರೈಲ್ವೇ ಸಜ್ಜಾಗಿದೆ. ಆದರೆ ಈ ಬಗ್ಗೆ ರೈಲ್ವೆ ಮಂಡಳಿಯಿಂದ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.
ಮಂಗಳೂರು - ಮಡಗಾಂವ್ ಸಹಿತ ದೇಶದಲ್ಲಿ ಹೊಸತಾಗಿ ಆರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಹಾಗೂ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನಿರ್ಮಿಸಿದ ಹೆಚ್ಚುವರಿ ಪ್ಲಾಟ್ ಫಾರಂ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿ.30ರಂದು ಉದ್ಘಾಟಿಸುವ ನಿರೀಕ್ಷೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ಬಗ್ಗೆಯೂ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.
ಸಂಸದ ನಳಿನ್ ಕುಮಾರ್ ಕಳೆದ ಒಂದು ವರ್ಷದಿಂದ ಮಂಗಳೂರು - ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲಿನ ಬಗ್ಗೆ ಹೇಳುತ್ತಲೇ ಬಂದಿದ್ದರು. ಮಂಗಳೂರು - ಗೋವಾ ಮಧ್ಯೆ ಕಳೆದ ಅಕ್ಟೋಬರ್ ತಿಂಗಳಲ್ಲಿಯೇ ರೈಲು ಸಂಚಾರ ಆಗುತ್ತೆ ಎಂದಿದ್ದರು. ಸತತ ಟೀಕೆ ಕೇಳಿಬಂದ ಬಳಿಕ ಮಂಗಳೂರಿಗೆ ವಂದೇ ಭಾರತ್ ರೈಲು ಬಂದಿದ್ದು ಇಂದು ಪ್ರಾಯೋಗಿಕ ಓಡಾಟ ನಡೆಸಿದೆ.
The Southern Railway will do the trial run of Mangaluru Central-Madgaon Vande Bharat Express on Tuesday, December 26. The train on trial run will depart from Mangaluru Central at 8.30 a.m. On the return journey, it will depart from Madgaon to Mangaluru at 1.45 p.m.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm