ಬ್ರೇಕಿಂಗ್ ನ್ಯೂಸ್

Pahalgam terror attack, Pakistani terrorists: ಭಯೋತ್ಪಾದಕ ದಾಳಿ ; ಕೆಲವು ದಿನಗಳ ಹಿಂದೆಯೇ ಸಿಕ್ಕಿತ್ತೇ ಗುಪ್ತಚರ ಸುಳಿವು, ಭದ್ರತಾ ನಿರ್ಲಕ್ಷ್ಯದ ಬಗ್ಗೆ ಆರೋಪ, ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಉಗ್ರರು, ಮೂವರ ಗುರುತು ಪತ್ತೆ     |    Bearys Group, Bearys Turning Point mall, Deralakatte, Mangalore: ಎ.26ರಂದು ದೇರಳಕಟ್ಟೆಯಲ್ಲಿ 'ಬ್ಯಾರೀಸ್ ಟರ್ನಿಂಗ್ ಪಾಯಿಂಟ್' ಮಾಲ್ ಲೋಕಾರ್ಪಣೆ ; ಶಾಪಿಂಗ್‌ ಮಾಲ್‌, 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್‌, ಫುಡ್‌ ಕೋರ್ಟ್‌ ಆಕರ್ಷಣೆ, ಆರಂಭಿಕ ದಿನದಂದು ಗೇಮ್ಸ್‌ ಉಚಿತ     |    Cm Siddaramaiah, Pahalgam Attack: ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ ; ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ, ಕೇಂದ್ರ ಗುಪ್ತಚರ ಇಲಾಖೆ ವಿರುದ್ಧ ಸಿದ್ದು ಗರಂ    |   

Money Double fraud, Mangalore News: ಹಣ ಡಬ್ಬಲ್ ಆಗುತ್ತೆ ಎಂದು ಆ್ಯಪ್ ನಲ್ಲಿ ಹೂಡಿಕೆ ; 21 ಲಕ್ಷ ಹಣ ಕಳಕೊಂಡ ಬಂಟ್ವಾಳದ ಮಹಿಳೆ ಆತ್ಮಹತ್ಯೆ 

24-12-23 08:59 pm       Mangaluru Correspondent   ಕರಾವಳಿ

ಹಣ ಡಬ್ಬಲ್ ಆಗುತ್ತೆ ಎಂದು ದಲ್ಲಾಳಿಗಳ ಮಾತು ನಂಬಿ ಆ್ಯಪ್ ಒಂದಕ್ಕೆ ಹೂಡಿಕೆ ಮಾಡಿ ಸುಮಾರು 21 ಲಕ್ಷ ರೂಪಾಯಿ ಕಳಕೊಂಡಿದ್ದ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬಂಟ್ವಾಳ, ಡಿ.24: ಹಣ ಡಬ್ಬಲ್ ಆಗುತ್ತೆ ಎಂದು ದಲ್ಲಾಳಿಗಳ ಮಾತು ನಂಬಿ ಆ್ಯಪ್ ಒಂದಕ್ಕೆ ಹೂಡಿಕೆ ಮಾಡಿ ಸುಮಾರು 21 ಲಕ್ಷ ರೂಪಾಯಿ ಕಳಕೊಂಡಿದ್ದ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಎಂಬವರ ಪತ್ನಿ ವೀಟಾ ಮರಿನಾ ಡಿಸೋಜ (32) ಮೃತರು. ವೀಟಾ ಮರೀನಾ ಅವರು ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಯಾವುದೋ ಮೊಬೈಲ್ ಆ್ಯಪ್ ನಲ್ಲಿ ಹಣ ಹೂಡಿದರೆ ಡಬಲ್ ಆಗುತ್ತದೆ ಎಂದು ನಂಬಿ, ಸುಮಾರು 21 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಬಂಟ್ವಾಳ ಪೊಲೀಸರಿಗೂ ದೂರು ನೀಡಿದ್ದರು.

ಡಿ.23ರ ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ವೀಟಾ ಬಳಿಕ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದ್ದು ಫಲ್ಗುಣಿ ಸೇತುವೆಯಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಭಾನುವಾರ ಬೆಳಗ್ಗೆ ನದಿಯಲ್ಲಿ ಹುಡುಕಾಡಿದ್ದು ಶವ ಪತ್ತೆಯಾಗಿದೆ. 

ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ ಐ ಭಾರತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೇ ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ

Money doubling, woman commits suicide after losing 21 lakhs in Bantwal Mangalore