ಬ್ರೇಕಿಂಗ್ ನ್ಯೂಸ್
17-12-23 09:22 pm Udupi Correspondent ಕರಾವಳಿ
ಉಳ್ಳಾಲ, ಡಿ.17: ಚಪ್ಪಲಿ ಹಾಕದೆ ನಡೆಯಲು ಅಸಾಧ್ಯ. ಗುಟ್ಕಾ, ತಂಬಾಕು ಬಿಡಲು ಒಲ್ಲೆ ಎಂಬವರು ಮಾಲಾಧಾರಣೆ ಮಾಡಬೇಡಿ. ಮಾಲಾಧಾರಿ ವ್ಯಕ್ತಿ ಮಡದಿಯೊಂದಿಗೆ ಜೊತೆಯಲ್ಲಿ ವಾಹನ ಸವಾರಿ ಮಾಡೋದಂತೂ ಸಹಿಸಲಸಾಧ್ಯ ಎಂದು ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ(ಸಾಸ್) ಉಳ್ಳಾಲ ತಾಲೂಕು ವತಿಯಿಂದ ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ಭಾನುವಾರ ನಡೆದ "ಅಯ್ಯಪ್ಪ ಭಕ್ತರ ಮಹಾಸಂಗಮ" ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಅಯ್ಯಪ್ಪ ವೃತಾಚರಣೆಯ ಮುದ್ರಾಧಾರಣೆಯ ಒಂದು ವಾರದ ಮೊದಲೇ ಮನೆಮಂದಿಯೆಲ್ಲರೂ ದುಃಖದಿಂದ ಮೌನಿಗಳಾಗುತ್ತಿದ್ದರು. ಯಾಕೆಂದರೆ ಮನೆ ಮಗ ಶಬರಿಮಲೆ ಯಾತ್ರೆ ಮುಗಿಸಿ ಮತ್ತೆ ವಾಪಾಸು ಬರುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಅಂಥ ದುರ್ಗಮ ಹಾದಿ ಮತ್ತು ಕಠಿಣ ವ್ರತ ನಿಯಮಕ್ಕೆ ಬದ್ಧನಾಗಿರಬೇಕಿತ್ತು. ಆದರೆ ಇಂದು ನಾಲ್ಕೈದು ದಿವಸ ಮಾಲಾಧಾರಣೆ ಮಾಡಿ ಶಬರಿಮಲೆ ಯಾತ್ರೆ ಕೈಗೊಳ್ಳುವವರನ್ನ ಕಾಣುವಾಗ ಬೇಸರವಾಗುತ್ತೆ. ಮಹತ್ವದ ವೈರಾಗ್ಯ ವೃತಾಚರಣೆ ಇಂದು ಎಂತಹ ಸ್ಥಿತಿಗೆ ತಲುಪಿದೆ ಎಂದರೆ ಮಾಲಾಧಾರಿಗಳು ಪತ್ನಿಯನ್ನೇ ವಾಹನಗಳಲ್ಲಿ ಕುಳ್ಳಿರಿಸಿ ಹೋಗೋದಂತೂ ಸಹಿಸಲಸಾಧ್ಯ ಎನಿಸಿದೆ. ನಮ್ಮ ಆಚಾರ, ವಿಚಾರ, ಸಂಸ್ಕೃತಿಗಳನ್ನ ನಾವೇ ಅಳಿಸಿದರೆ ಅನ್ಯರನ್ನು ದೂರಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ ಮಾತನಾಡಿ, ಅಯ್ಯಪ್ಪ ಭಕ್ತರು ಪ್ರತಿ ಬಾರಿ ಶಬರಿಮಲೆ ಯಾತ್ರೆಗೈದ ಸಂದರ್ಭದಲ್ಲಿ ಆತನ ಜೀವನ ಪರಿವರ್ತನೆಯಾಗಬೇಕು. ಬೆಳಗ್ಗೆ ಮಾಲಾಧಾರಣೆ ನಡೆಸಿ ಸಂಜೆ ಶಬರಿಮಲೆ ಯಾತ್ರೆ ಕೈಗೊಳ್ಳುವ ಕೆಟ್ಟ ಸಂಸ್ಕೃತಿಯನ್ನ ಗುರುಸ್ವಾಮಿಗಳು ನಿಲ್ಲಿಸಬೇಕೆಂದು ಕರೆ ನೀಡಿದರು.
ಸಮಾವೇಶದಲ್ಲಿ "ಮಾಲಿಗಪ್ಪುರಂ" ಮಲಯಾಳಂ ಹಿಟ್ ಚಲನಚಿತ್ರದ ಖ್ಯಾತ ಬಾಲ ನಟಿ ಬೇಬಿ ದೇವಾನಂದ ವಿಶೇಷ ಅತಿಥಿಯಾಗಿ ಭಾಗವಹಿಸಿ ಅಯ್ಯಪ್ಪ ಭಕ್ತಿಗೀತೆಯನ್ನ ಹಾಡಿ ನೆರೆದವರನ್ನ ರಂಜಿಸಿದರು. ಸಾಸ್ ವತಿಯಿಂದ ದೇವಾನಂದ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಬಳಿಕ ಅಯ್ಯಪ್ಪ ಮಾಲಾಧಾರಿಗಳ ವೃತ ನಿಯಮ ಅನುಷ್ಠಾನಗಳು ಹಿಂದೆ, ಇಂದು, ನಾಳೆ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಚಿಂತಕರಾದ ಸತೀಶ್ ಪೂಜಾರಿ ಸಜಿಪ, ಪ್ರಕಾಶ್ ಮಲ್ಪೆ ಭಾಗವಹಿಸಿದ್ದರು.
ಸೋಮನಾಥ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಸಮಾವೇಶ ಉದ್ಘಾಟಿಸಿದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್ ಅಧ್ಯಕ್ಷತೆ ವಹಿಸಿದ್ದರು.
It is impossible to walk without slippers. Don't wear garlands to give up gutka and tobacco. Sri Yogananda Saraswathi Swamiji of Nithyananda Yogaashrama in Kondevoor said that it is not tolerable for a maladhari man to ride a vehicle with his wife.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
25-04-25 01:16 pm
HK News Desk
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm