ಬ್ರೇಕಿಂಗ್ ನ್ಯೂಸ್
16-12-23 05:23 pm Mangalore Correspondent ಕರಾವಳಿ
ಮಂಗಳೂರು, ಡಿ.16: ಕೇಂದ್ರ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಕರ್ನಾಟಕದಲ್ಲಿ ಮಾತ್ರ ಅಳವಡಿಕೆ ಮಾಡಲಾಗಿತ್ತು. ಬೇರಾವುದೇ ರಾಜ್ಯದಲ್ಲಿ ಈ ನೀತಿ ಇನ್ನೂ ಜಾರಿಯಾಗಿಲ್ಲ. ಯೋಗ, ಭಗವದ್ಗೀತೆ ಕಲಿಯುವುದಕ್ಕೆ ಅಥವಾ ಮೂರರಿಂದ ನಾಲ್ಕು ವರ್ಷದ ಡಿಗ್ರಿ ಮಾಡಲು ಎನ್ಇಪಿ ಜಾರಿ ಮಾಡಬೇಕಿದೆಯೇ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರು ವಿವಿಗೆ ಆಗಮಿಸಿದ ಸುಧಾಕರ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಎನ್ಇಪಿ ಬದಲು ರಾಜ್ಯ ಶಿಕ್ಷಣ ನೀತಿ – ಎಸ್ಇಪಿ ಜಾರಿಗೆ ತರಲಿದ್ದೇವೆ. ಅದರ ಬಗ್ಗೆ ಈಗಾಗಲೇ ತಜ್ಞರು ರೂಪುರೇಷೆ ತಯಾರಿಸಿದ್ದಾರೆ. ಹೊಸ ನೀತಿ ಜಾರಿಯಾದ ಬಳಿಕವೇ ಅದರ ಪ್ರಕಾರ ಪ್ರವೇಶಾತಿ ನಡೆಸುತ್ತೇವೆ. ಈಗಾಗಲೇ ಎನ್ಇಪಿಯಡಿ ಸೆಮಿಸ್ಟರ್ ಕಲಿಯುತ್ತಿರುವವರಿಗೆ ಅಥವಾ ಮೂರು ವರ್ಷ ಪೂರ್ತಿಗೊಳಿಸಿದವರಿಗೆ ಹೊಸ ನೀತಿಯಿಂದ ತೊಂದರೆಯಾಗಲ್ಲ ಎಂದು ಹೇಳಿದರು.
ಉದ್ಯೋಗ ಕ್ಷೇತ್ರದಲ್ಲಿ ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯವಾಗುತ್ತಿದ್ದು, ಇದಕ್ಕಾಗಿ ಉನ್ನತ ಶಿಕ್ಷಣದಲ್ಲಿ ಉಚಿತವಾಗಿ ಇಂಗ್ಲಿಷ್ ಕಲಿಸಲು ವಾಧ್ವಾನಿ ಫೌಂಡೇಶನ್ ಮುಂದೆ ಬಂದಿದೆ. ಮೊದಲಿಗೆ ಧಾರವಾಡ ವಿವಿಯಲ್ಲಿ ಫೌಂಡೇಶನ್ ಕಡೆಯಿಂದ ಉಚಿತ ಬೋಧನೆ ನಡೆಯಲಿದೆ. ಆಬಳಿಕ ರಾಜ್ಯ ವ್ಯಾಪಿ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು. ಮಂಗಳೂರು ವಿವಿಯ ಕ್ಯಾಂಪಸ್ ನಲ್ಲಿ ಹಿಂದಿನ ಕುಲಪತಿ ಭೈರಪ್ಪ ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಸ್ಟೆಲ್ ನಿರ್ಮಾಣಕ್ಕಾಗಿ 46 ಕೋಟಿಯ ಯೋಜನೆ ತಯಾರಿಸಿ, ಅರೆಬರೆ ಕಾಮಗಾರಿ ನಡೆಸಿದ್ದು ಅರ್ಧಕ್ಕೆ ನಿಂತಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೀರಾ ಎಂಬ ಪ್ರಶ್ನೆಗೆ, ಈ ರೀತಿಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿ ಜೊತೆಗಿದ್ದ ಮಂಗಳೂರು ವಿವಿಯ ಅಧಿಕಾರಿಗಳಲ್ಲಿ ಪ್ರಶ್ನೆ ಮಾಡಿದರು. ರಿಜಿಸ್ಟ್ರಾರ್ ಆ ಕಾಮಗಾರಿಗೆ 52 ಕೋಟಿ ಯೋಜನೆ ಹಾಕಿದ್ದು, ಈವರೆಗೆ 36 ಕೋಟಿ ಖರ್ಚಾಗಿದೆ. ಇನ್ನೂ 12 ಕೋಟಿ ಅಗತ್ಯವಿದೆ ಎಂದು ಹೇಳಿದರು.
ಕಳೆದ ಬಾರಿ ಇಂಟರ್ನಲ್ ಫಂಡನ್ನೂ ಆ ಕಟ್ಟಡಕ್ಕೆ ಭರಿಸಲಾಗಿತ್ತು. ಕಾಮಗಾರಿಯನ್ನೇ ಪೂರ್ತಿಗೊಳಿಸದೆ ಹಾಸ್ಟೆಲ್ ಉದ್ಘಾಟನೆ ಮಾಡಲಾಗಿತ್ತು ಎಂದು ಸಚಿವರ ಗಮನಸೆಳೆದಾಗ, ಹೌದೇ.. ಆ ರೀತಿಯ ಮಾಹಿತಿ ನನಗಿಲ್ಲ. ನಿಮ್ಮಲ್ಲಿ ಹೆಚ್ಚುವರಿ ಮಾಹಿತಿಗಳಿದ್ದರೆ ನನಗೆ ತಲುಪಿಸಿ, ತನಿಖೆ ಮಾಡಿಸುತ್ತೇನೆ ಎಂದು ಹೇಳಿದರು. ವಿಶ್ವವಿದ್ಯಾನಿಲಯದಲ್ಲಿ ತುಳು ಎಂಎ ಆರಂಭಿಸಿದ್ದರೂ, ಪ್ರತ್ಯೇಕ ವಿಭಾಗ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ, ನೇರವಾಗಿ ಕುಲಪತಿ ಜಯರಾಜ ಅಮೀನ್ ಉತ್ತರಿಸಿ, ಆ ಕುರಿತು ಸರಕಾರಕ್ಕೆ ಬರೆದಿದ್ದೇವೆ. ಎಲ್ಲ ಪ್ರಕ್ರಿಯೆ ಮುಗಿಸಲಾಗಿದ್ದು, ಸರಕಾರದಿಂದ ಅನುಮತಿ ದೊರೆತ ಕೂಡಲೇ ಮಾಡುತ್ತೇವೆ ಎಂದರು.
ಮಂಗಳೂರು, ಕುವೆಂಪು ವಿವಿ, ರಾಣಿ ಚೆನ್ನಮ್ಮ ವಿವಿ ಸೇರಿ ನಾಲ್ಕು ವಿಶ್ವವಿದ್ಯಾನಿಲಯಗಳಿಗೆ ಪೂರ್ಣಾವಧಿ ಕುಲಪತಿಗಳ ನೇಮಕ ಆಗಬೇಕಿದೆ. ಅದಕ್ಕಾಗಿ ಕಮಿಟಿ ಮಾಡಿದ್ದು, ಸದ್ಯದಲ್ಲೇ ನೇಮಕಾತಿ ಆಗಲಿದೆ. ರಿಜಿಸ್ಟ್ರಾರ್ ಹುದ್ದೆಗೆ ಪೂರ್ಣಾವಧಿ ಕೆಎಎಸ್ ಮುಗಿಸಿದ ಅಧಿಕಾರಿಯ ಅಗತ್ಯವಿದೆ. ಅದನ್ನೂ ಮಾಡುತ್ತೇವೆ ಎಂದು ಸಚಿವ ಸುಧಾಕರ್ ಹೇಳಿದರು.
SEP will not create any confusion says Education Minister Sudhakar in Mangalore.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
25-04-25 01:16 pm
HK News Desk
Melted plastic, Kollam, Hazard: ವಲಸೆ ಕಾರ್ಮಿಕರ...
24-04-25 09:00 pm
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm