Mangalore, Bajpe Mother, child missing: ಬಜ್ಪೆ ; ನಡುರಾತ್ರಿಯಲ್ಲಿ ತಾಯಿ, ಮಗು ನಾಪತ್ತೆ, ಗಂಡನಿಂದ ಪೊಲೀಸರಿಗೆ ದೂರು 

15-12-23 01:25 pm       Mangalore Correspondent   ಕರಾವಳಿ

ಬಜಪೆ ಕೆ.ಪಿ.ನಗರದಲ್ಲಿ ತಾಯಿ ತನ್ನ ಸಣ್ಣ ಮಗುವಿನ ಜೊತೆಗೆ ನಾಪತ್ತೆಯಾಗಿದ್ದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಡಿ.15: ಬಜಪೆ ಕೆ.ಪಿ.ನಗರದಲ್ಲಿ ತಾಯಿ ತನ್ನ ಸಣ್ಣ ಮಗುವಿನ ಜೊತೆಗೆ ನಾಪತ್ತೆಯಾಗಿದ್ದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೆಪಿ ನಗರದ ಶಾಹಿಸ್ತ ಮಂಜೀಲ್‌ನ ಅಹ್ಮದ್‌ ಮಕ್ಸೂದ್‌ ಎಂಬವರ ಪತ್ನಿ ಶರೀನಾ ವೈ. (24) ಮತ್ತು ಮೂರು ವರ್ಷದ ಮಗ ಮಹ್ಮದ್‌ ತೋಹಾರ್‌ ಡಿ.11ರಂದು ರಾತ್ರಿ ಕಾಣೆಯಾಗಿದ್ದಾರೆ. ಅಹ್ಮದ್‌ ಮಕ್ಸೂದ್‌ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು 6 ವರ್ಷಗಳ ಹಿಂದೆ ಸುಳ್ಯದ ಯೂಸುಫ್‌ ಅವರ ಪುತ್ರಿ ಶರಿನಾ (24) ಅವರನ್ನು ವಿವಾಹವಾಗಿದ್ದರು. ಇವರಿಗೆ 3 ವರ್ಷದ ಗಂಡು ಮಗುವಿದ್ದು, ಸದ್ಯ ಶರೀನಾ 5 ತಿಂಗಳ ಗರ್ಭಿಣಿ. ದಂಪತಿ ಅನ್ಯೋನ್ಯವಾಗಿದ್ದು, ಡಿ. 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕೆಮರಾ ಪರಿಶೀಲಿಸಿದಾಗ ಮನೆ ಬಿಟ್ಟು ಹೋಗಿರುವುದು ದೃಢಪಟ್ಟಿದೆ. 

ಶರೀನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟು ಹೋಗಿದ್ದಾರೆ. ಆದರೆ ಅವರ ತಾಯಿಗೆ ಫೋನ್‌ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್‌ ಮಕ್ಸೂದ್‌ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

A case has been registered at Bajpe police station after a mother went missing along with her small child at K.P. Nagar in Bajpe.