ಬ್ರೇಕಿಂಗ್ ನ್ಯೂಸ್
27-10-23 10:40 am Mangalore Correspondent ಕರಾವಳಿ
ಮಂಗಳೂರು, ಅ.26: ಕೇಶ ವಿನ್ಯಾಸದಲ್ಲಿ ಬಾಲಿವುಡ್ ವಲಯದಲ್ಲಿ ಖ್ಯಾತಿ ಪಡೆದ ಮುಂಬೈಯ ಶಿವಾಸ್ ಸೆಲೂನ್ ಇದೀಗ ದೇರಳಕಟ್ಟೆಗೂ ಲಗ್ಗೆ ಇಟ್ಟಿದೆ. ಬಾಲಿವುಡ್ ನ ಕೇಶ ವಿನ್ಯಾಸಕ ಡಾ. ಶಿವರಾಮ ಭಂಡಾರಿ ಅವರ ಶಿವಾಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ಮತ್ತು ಶಿವಾಸ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಇನ್ನೋವೇಶನ್ ಗುರುವಾರ ದೇರಳಕಟ್ಟೆಯಲ್ಲಿ ಉದ್ಘಾಟನೆಗೊಂಡಿತು.
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇರಳಕಟ್ಟೆಯ ಪ್ಲಾಮಾ ಕಟ್ಟಡದಲ್ಲಿ ಶುಭಾರಂಭಗೊಂಡ ಸಂಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಹಳಷ್ಟು ಜನರ ಜೀವನದಲ್ಲಿ ಹೊಸಬೆಳಕು ಮೂಡಿಸಿದ ಶಿವರಾಮ ಭಂಡಾರಿ, ಧರ್ಮಸ್ಥಳದಲ್ಲಿಯೂ ಅವರ ಸೇವೆ ನಡೆಸುತ್ತಾ ಬಂದಿರುವರು. ರುಡ್ಸೆಟ್ ನಲ್ಲಿಯೂ ಸೇವೆ ನೀಡಿ ಯುವ ಸಮುದಾಯಕ್ಕೆ ಜೀವನದ ದಾರಿ ಮಾಡಿಕೊಟ್ಟವರು ಎಂದು ಪ್ರಶಂಸಿಸಿದರು.
ತುಳು ಚಿತ್ರರಂಗ ಹಾಗೂ ನಾಟಕ ಕಲಾವಿದ ಕುಸಲ್ದ ಬೊಳ್ಳಿ ಅರವಿಂದ್ ಬೋಳಾರ್ ಮಾತನಾಡಿ, ಮುಂಬೈನಲ್ಲೇ ಶಿವಾಸ್ ಸಲೂನ್ ನೋಡಿದ ಅನುಭವ. ಸೆಲೂನ್ ಅಲ್ಲ ಅದೊಂದು ಮ್ಯೂಸಿಯಂ. ಶಿವರಾಮ್ ಭಂಡಾರಿ ಅವರ ಕಾಯಕ, ಕೈಚಳಕದಿಂದ ಬಾಲಿವುಡ್ ನಟರು, ರಾಜಕಾರಣಿಗಳು, ಕ್ರಿಕೆಟ್ ಆಟಗಾರರು ಅವರ ಸೆಲೂನ್ ಬರಲು ಸಾಧ್ಯವಾಗಿದೆ. ಯುವ ಸಮುದಾಯ ಶಿವರಾಮ್ ಭಂಡಾರಿ ಸಲೂನಿಗೆ ಈಗಲೂ ಬರುತ್ತಾರೆಂದರೆ ಅವರ ಪ್ರಾಮಾಣಿಕತೆ, ಶಿಸ್ತುಬದ್ಧವಾದ ಕಾಯಕ ಈಗಲೂ ನಡೆಯುತ್ತಾ ಬಂದಿದೆ ಎಂದರು.
ಮಂಗಳೂರು ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ. ಯಡಪಡಿತ್ತಾಯ ಮಾತನಾಡಿ, ಸವಿತಾ ಸಮಾಜದ ಏಳಿಗೆಗಾಗಿ ಶಿವಾಸ್ ಅವರ ಶ್ರಮ ಶ್ಲಾಘನೀಯ. ತಲೆಕೂದಲು ಕಟ್ ಮಾಡುವ ಕಾಲವಿತ್ತು, ಇದೀಗ ಅದೊಂದು ಕಲೆಯಾಗಿದೆ. ಆ ಕುರಿತು ವೈಜ್ಞಾನಿಕತೆ, ಕಲೆಯ ರೂಪುರೇಷೆಯನ್ನು ಶಿವಾಸ್ ಕಾಲೇಜು ನೀಡಲಿದೆ. ಸಮಾಜಕ್ಕೆ ಕೊಡುಗೆ ನೀಡುವುದು, ತಾಯಿಯ ಸಂಕಲ್ಪವಾಗಿತ್ತು. ಅದನ್ನು ಮಗ ಈಡೇರಿಸುವ ಮುಖೇನ ತಾಯಿಗೆ ತಕ್ಕ ಮಗನಾಗಿ ಶಿವರಾಮ್ ಭಂಡಾರಿ ಇದ್ದಾರೆ ಎಂದರು.
ಬಾಲಿವುಡ್ ನಟ ಹಾಗೂ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ಡಾ.ಮಧುರ್ ಭಂಡಾರ್ಕರ್ ಮಾತನಾಡಿ, ರಾಷ್ಟ್ರಕ್ಕೆ ಶಿವಾಸ್ ಸಂಸ್ಥೆ ಗೌರವ ತಂದುಕೊಟ್ಟಿದೆ. ಸೈನ್ಯ, ಪೊಲೀಸರ ಸೇವೆಗೆ ತಮ್ಮ ಸಂಸ್ಥೆಯ ಮೂಲಕ ಗೌರವಿಸುತ್ತಾ ಬಾಲಿವುಡ್ ನಟರು, ರಾಜಕಾರಣಿಗಳು ಹಾಗೂ ಕ್ರಿಕೆಟ್ ಆಟಗಾರರ ವಿಶ್ವಾಸವನ್ನು ಪಡೆದುಕೊಂಡಿದೆ. ಇದೀಗ ಕಾಲೇಜು ಸ್ಥಾಪನೆ ಮೂಲಕ ದೊಡ್ಡದಾದ ಮೈಲಿಗಲ್ಲು ಸ್ಥಾಪಿಸಿದೆ ಎಂದರು.
ಭಿವಾಂಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂತೋಷ್ ಎಂ.ಶೆಟ್ಟಿ ಬಿವಾಂಡಿ, ದಶಕಗಳಿಂದ ಶಿವಾಸ್ ಅವರನ್ನು ಹತ್ತಿರದಿಂದ ಗಮನಿಸಿರುವೆ, ವೈಶಿಷ್ಟ್ಯತೆಯ ವ್ಯಕ್ತಿ. ನಟರಲ್ಲಿ ಅಮಿತಾಭ್ ಬಚ್ಚನ್ ಗಿಂತ ಶ್ರೇಷ್ಟ ಬೇರೆ ಯಾರೂ ಇಲ್ಲ. ರಾಜಕಾರಣದಲ್ಲಿ ಬಾಳ ಠಾಕ್ರೆಯಂತಹ ನಾಯಕರಿಲ್ಲ. ಅಂತಹವರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿ ಶಿವಾಸ್, ಅವರ ಜೊತೆಗೆ ಚಹಾಗೆ ಹಾಲಿರುವಂತೆ ನಮ್ಮ ಸಂಬಂಧ ಎಂದರು.
ಬಾಲಿವುಡ್ ನಟಿ ಬಾಲಿವುಡ್ ನಟಿ ಪ್ರಾಚಿ ತೆಹ್ಲಾನ್ ಮಾತನಾಡಿ, ದೇಶದುದ್ದಕ್ಕೂ ಬಹಳಷ್ಟು ಸೆಲೂನ್ ಗಳಿವೆ. ಹೊಸ ಚಾಕಚಕ್ಯತೆಯ ಜೊತೆಗೆ ಸಂಸ್ಥೆಯನ್ನಾಗಿ ರೂಪಿಸುವ ಉದ್ದೇಶ ಮಹತ್ವಪೂರ್ಣದ್ದು, ಪೊಲೀಸ್ ಹಾಗೂ ಸೈನ್ಯದವರಿಗೆ ಗೌರವ ಕೊಟ್ಟು ಸ್ಥಾಪಿಸಿರುವ ಕಾರ್ಯ ಮಾಡಿರುವ ಶಿವಾಸ್ ಪ್ರಾಮಾಣಿಕ ಹಾಗೂ ಉತ್ತಮ ಮಾನವೀಯತೆಯ ಜೀವಿ ಎಂದರು.
ಕಡಂದಲೆ ಸುರೇಶ್ ಭಂಡಾರಿ, ದೀಪವು ಜಗತ್ತಿಗೆ ಬೆಳಕು ನೀಡಿದಂತೆ, ಗಂಧದ ಕೊರಡು ಪರಿಮಳ ಕೊಟ್ಟಂತೆ, ಶಿವಾಸ್ ಇಡೀ ಸಮುದಾಯಕ್ಕೆ ಬೆಳಕು ಚೆಲ್ಲಿದವರು. ಕರ್ತವ್ಯವನ್ನು ಜಾತಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಸಿಗುವ ಯಶಸ್ಸು ಭಂಡಾರಿಯವರಿಂದ ನೋಡಿ ಕಲಿಯಬೇಕಿದೆ. 23 ಸಂಸ್ಥೆಗಳನ್ನು ತೆರೆದಿರುವುದು ಬಹುದೊಡ್ಡ ಸಾಧನೆ ಎಂದರು.
ಶಿವಾಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ಅನ್ನು ಮಧುರ್ ಭಂಡಾರ್ಕರ್ ಉದ್ಘಾಟಿಸಿದರು. ಶಿವಾಸ್ ವಿಮೆನ್ ಎಕ್ಸ್ ಕ್ಲೂಸಿವ್ ಸಲೂನ್ ಅನ್ನು ನಟಿ ಪ್ರಾಚಿ ತೆಹ್ಲಾನ್ ಉದ್ಘಾಟಿಸಿದರು. ಲ್ಯಾಬ್ ಅನ್ನು ವಿಶ್ರಾಂತ ಉಪಕುಲಪತಿ ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಉದ್ಘಾಟಿಸಿದರು. ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಡಾ.ಮಧುರ್ ಭಂಡಾರ್ಕರ್, ಬಾಲಿವುಡ್ ನಟಿ ಪ್ರಾಚಿ ತೆಹ್ಲಾನ್, ಮಂಗಳೂರು ವಿ.ವಿ ವಿಶ್ರಾಂತ ಉಪಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ, ವಿಶ್ವ ಮಹಾಮಂಡಲ ಭಂಡಾರಿ ಫೌಂಡೇಷನ್ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ, ರಾಜೀವ್ ಗಾಂಧಿ ವಿ.ವಿಗಳ ಸೆನೆಟ್ ಮಾಜಿ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಆಲಿ, ಶಿವಾಸ್ ಹೇರ್ ಡಿಸೈನಸ್ ೯ ಪ್ರೈ.ಲಿ ಮುಖ್ಯಸ್ಥ ಡಾ. ಶಿವರಾಮ್ ಕೆ.ಭಂಡಾರಿ, ಸಿಇಒ ಡಾ.ವಿನೋದ್ ಛೋಪ್ರಾ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅನುಶ್ರೀ ಎಸ್.ಭಂಡಾರಿ, ಶ್ವೇತಾ ಆರ್ ಭಂಡಾರಿ, ರೋಹಿಲ್ ಭಂಡಾರಿ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್, ಆರಾಧ್ಯ ಭಂಡಾರಿ, ಕಾಲೇಜು ಪ್ರಾಂಶುಪಾಲೆ ರೋವಿನಾ, ರುಡ್ಸೆಟ್ ಪ್ರಬಂಧಕ ಎಸ್.ಸೋನ್ಸ್, ರುಡ್ಸೆಟ್ ಮುಖ್ಯಸ್ಥ ಗಿರಿಧರ್ ಕಲ್ಲಾಪು, ಪ್ಲಾಮಾ ನೆಸ್ಟ್ ಅಪಾಟ್೯ಮೆಂಟ್ ಓನರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಮೊಹಮ್ಮದ್ ಸಲೀಮ್, ನಿಟ್ಟೆ ವಿ.ವಿ ಆಡಳಿತ ವಿಭಾಗ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಮಲ್ಲಿಕಟ್ಟ ನ್ಯುರೋ ಸೆಂಟರ್ ಆಡಳಿತ ನಿರ್ದೇಶಕ ಡಾ.ಶಂಕರ್ ಎನ್, ಭಿವಂಡಿ ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಎಂ.ಶೆಟ್ಟಿ ಭೀವಂಡಿ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು.
Mumbai popular hair stylist saloon Shivas which is awared the best in Mumbai is now opened at Derlakatte in Mangalore along with international linstitute of professional innovation centre. Shiva’s association with Bollywood include Heroine, starring Kareena Kapoor Yarriyan, starring Rakul Preet Singh,Evelyn Sharma, Nicole Faria,Sayali Bhagat, Deepti Navel. Soceity, starring Reema Sen. Kya Love Story Hai, starring Ayesha Takeyaa.
27-04-25 07:13 pm
HK News Desk
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
Pahalgam Attack, Shivamogga, Manjunath: ಉಗ್ರರ...
24-04-25 10:13 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
27-04-25 06:25 pm
Mangalore Correspondent
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
KMF Elections 2025, Belupu Deviprasad Shetty:...
26-04-25 08:03 pm
NIA, PFI, DGP OM Prakash, Anupama Shenoy, Man...
26-04-25 07:11 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm