ಬ್ರೇಕಿಂಗ್ ನ್ಯೂಸ್
23-09-23 02:22 pm Mangalore Correspondent ಕರಾವಳಿ
ಮಂಗಳೂರು, ಸೆ.23: ಎತ್ತಿನಹೊಳೆ ಯೋಜನೆ ಮುಗಿದ ಅಧ್ಯಾಯ, ಹಳೆ ವಿಚಾರವನ್ನು ಪ್ರಶ್ನೆ ಕೇಳಬೇಡಿ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಪತ್ರಕರ್ತರ ಪ್ರಶ್ನೆಗೆ ಸಿಡುಕಿನ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮೊಯ್ಲಿ ಅವರಲ್ಲಿ ಎತ್ತಿನಹೊಳೆ ಯೋಜನೆಯನ್ನು ನೀವು ತರಾತುರಿಯಲ್ಲಿ ಆರಂಭಿಸಿದ್ದಿರಿ, ಈಗ ಅದರಿಂದಾಗಿ ಕರಾವಳಿಗೇ ಬರ ಬಂದಿದೆ, ಈಗಲಾದರೂ ನೀವು ನಿಲ್ಲಿಸಲು ಹೇಳುತ್ತೀರಾ ಎಂಬ ಪ್ರಶ್ನೆಗೆ, ಅದೆಲ್ಲ ಹಳೆ ವಿಚಾರ, ಪ್ರತಿ ಬಾರಿ ಆ ಕುರಿತು ಪ್ರಶ್ನೆ ಮಾಡಬೇಡಿ ಎಂದಿದ್ದಾರೆ.


ಯೋಜನೆ ಜಾರಿಗೆ ನೀವು ಮತ್ತು ಸದಾನಂದ ಗೌಡ ಕಾರಣಕರ್ತರು, ಯಾಕೆ ಪ್ರಶ್ನೆ ಮಾಡಬಾರದು, ಅದಕ್ಕೆ 23 ಸಾವಿರ ಕೋಟಿ ದುಡ್ಡು ಖರ್ಚು ಮಾಡಿದ್ದೀರಲ್ಲಾ ಎಂದು ಕೇಳಿದ್ದಕ್ಕೆ, ಬಿಜೆಪಿಯವರು ಯೋಜನೆ ನಿಲ್ಲಿಸಿದ್ದಾರೆಯೇ.. ನಾವು ಯಾಕೆ ನಿಲ್ಲಿಸಬೇಕು. ಇದಕ್ಕೆಲ್ಲ ಉತ್ತರ ನೀಡಲ್ಲ ಎಂದರು. ನೀವು ಕರಾವಳಿ ಜನರಿಗೆ ಉತ್ತರ ಕೊಡಲೇಬೇಕು ಎಂದಾಗ, ನಾನು ಎಲ್ಲಿ ಉತ್ತರ ಕೊಡಬೇಕೋ ಅಲ್ಲಿಯೇ ಕೊಡುತ್ತೇನೆ ಎಂದು ಮೌನಕ್ಕೆ ಜಾರಿದರು. ನೀವು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡುತ್ತೀರಂತೆ, ಅಲ್ಲಿನ ಜನರಿಗೂ ಉತ್ತರ ಕೊಡಬೇಕಾಗುತ್ತದೆ ಎಂದಾಗ, ಅದು ಆ ಪ್ರಶ್ನೆ ಬಂದಾಗ ಉತ್ತರ ಕೊಡುತ್ತೇನೆ ಎಂದು ನಕ್ಕರು.
ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರೂ ಕಳಿಸೋಕೆ ಆಗಿಲ್ಲ, 20 ಸಾವಿರ ಖರ್ಚು ಮಾಡಿದ್ದೀರಿ ಎಂದಾಗ, ನೀವೇ ಒಂದೆಡೆ ನೀರು ಹರಿಸಿಲ್ಲ ಅಂತೀರಿ. ಇಲ್ಲಿ ನೀರಿಲ್ಲ, ಬರಡಾಗಿದೆ ಅಂತೀರಿ. ನೀರೇ ಹರಿಸಿಲ್ಲಾಂದ್ರೆ, ನೀರು ಖಾಲಿಯಾಗೋದು ಹೇಗಾಗುತ್ತೆ. ಈಗ ಯೋಜನೆ ಕಾಮಗಾರಿ ಆಗುತ್ತಾ ಇದೆ. ನಿಮ್ಮಲ್ಲೇ ಪ್ರಶ್ನೆ, ಉತ್ತರ ಎರಡೂ ಇದೆ ಎಂದರು ಮೊಯ್ಲಿ. ನೀವು ಯೋಜನೆ ವೈಫಲ್ಯದ ಬಗ್ಗೆ ಉತ್ತರ ಕೊಡಬೇಕು ಎಂದು ಮತ್ತೆ ಕೇಳಿದ್ದಕ್ಕೆ, ನಾನು ಉತ್ತರ ಕೊಡುತ್ತೇನೆ, ನಿಮಗೆ ಕೊಡಬೇಕಿಲ್ಲ ಎಂದು ಸಿಡುಕು ತೋರಿದರು. ಪದೇ ಪದೇ ಆ ಕುರಿತು ಪ್ರಶ್ನೆ ಕೇಳಿದ್ದರಿಂದ ಸಿಡಿಮಿಡಿಗೊಂಡ ಮೊಯ್ಲಿ, ನಾನು ಬೇಕಾದಲ್ಲಿ ಉತ್ತರ ಕೊಡುತ್ತೇನೆ ಎನ್ನುತ್ತಲೇ ಮುಖ ತಿರುಗಿಸಿ ಕುಳಿತುಬಿಟ್ಟರು.
2013ರಲ್ಲಿ ಆಗ ಚಿಕ್ಕಬಳ್ಳಾಪುರ ಸಂಸದರಾಗಿದ್ದ ವೀರಪ್ಪ ಮೊಯ್ಲಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲೇ ಶಿಲಾನ್ಯಾಸ ಮಾಡಿದ್ದರು. ಕರಾವಳಿ ಜನರ ಭಾರೀ ವಿರೋಧ ಮಧ್ಯೆಯೇ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಈವರೆಗೆ ಯೋಜನೆಗೆ 23 ಸಾವಿರ ಕೋಟಿ ಖರ್ಚಾಗಿದೆ ಎಂದು ಸರಕಾರ ಲೆಕ್ಕ ಹೇಳುತ್ತಿದ್ದು, ಒಂದು ಹನಿ ನೀರನ್ನೂ ಒಯ್ಯಲು ಸಾಧ್ಯವಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ಜನರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡಿ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಜನರೇ ಮಾಡುತ್ತಿದ್ದಾರೆ.
Yetthinahole project is a finished story, Journalists in Managlore slam Veerappa Moily.
01-01-26 06:21 pm
Bangalore Correspondent
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮ...
31-12-25 10:57 pm
ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ...
31-12-25 02:35 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
01-01-26 09:43 am
Mangalore Correspondent
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
ಶೀಘ್ರದಲ್ಲೇ ಸ್ಕ್ಯಾನ್ ಜೆಟ್ ವಿಮಾನ ಸೇವೆ ; ವಿಜಯ್ ಮ...
31-12-25 11:47 am
31-12-25 07:05 pm
Mangalore Correspondent
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm
ಪುತ್ತೂರಿನ ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳ...
31-12-25 05:48 pm
ಸ್ಟಾಕ್ ಮಾರ್ಕೆಟ್ ಹೆಸ್ರಲ್ಲಿ ವಂಚಕರಿಂದ ಪಂಗನಾಮ ; 5...
30-12-25 10:40 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm