ಬ್ರೇಕಿಂಗ್ ನ್ಯೂಸ್
15-04-23 10:19 pm Mangalore Correspondent ಕರಾವಳಿ
ಉಳ್ಳಾಲ, ಎ.15 : ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಜನತೆ ಚಿರತೆಯೊಂದನ್ನ ಕಂಡಿದ್ದು ಈ ಕುರಿತು ಅರಣ್ಯ ಇಲಾಖೆಗೆ ನೀಡಿದ ಮಾಹಿತಿ ಮೇರೆಗೆ ಚಿರತೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯಾಧಿಕಾರಿ ಮಾತ್ರ ಅದು ಬೇರೆ ತಳಿಯ ಬೆಕ್ಕಾಗಿರಬಹುದೆಂದು ಕಾರ್ಯಾಚರಣೆ ಮೊದಲೇ ಸಬೂಬು ನೀಡಿದ್ದಾರೆ.
ಪಜೀರು ಗ್ರಾಮದ ಅಂಗಡಿಕೆರೆ, ಗುಂಪಕಲ್ಲು, ಉಜ್ಜೊಟ್ಟು, ಮಲಾರ್ ಪರಿಸರದಲ್ಲಿ ಎ.13 ರಂದು ಸಂಜೆ ಹೊತ್ತಿಗೆ ಚಿರತೆ ಮರಿಗಳನ್ನು ಕಂಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ದೂರಿಕೊಂಡಿದ್ದರು. ಚಿರತೆ ಗುಮ್ಮದಿಂದ ಸ್ಥಳೀಯರು, ಮಕ್ಕಳು, ದೊಡ್ಡವರು ಪ್ರದೇಶದಲ್ಲಿ ಆತಂಕದಿಂದಲೇ ಸುತ್ತಾಡುತ್ತಿದ್ದಾರೆ. ಚಿರತೆ ಆಗಿದ್ದಲ್ಲಿ ಯಾವ ಸಮಯದಲ್ಲಿ ಬೇಕಾದರೂ ದಾಳಿ ಮಾಡಬಹುದು. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ರಕ್ಷಣೆ ಒದಗಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒಂದು ಬೋನನ್ನು ಇಟ್ಟಿದ್ದಾರೆ .
ಬೇರೆ ತಳಿಯ ಬೆಕ್ಕೂ ಆಗಿರಬಹುದು!
ಕಾರ್ಯಾಚರಣೆ ಮೊದಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ವಿವಿಧ ತಳಿಯ ಬೆಕ್ಕುಗಳು ಚಿರತೆಯಂತೆ ಕಂಡುಬರುತ್ತವೆ. ಪಜೀರು ಭಾಗದಲ್ಲಿ ಈವರೆಗೆ ಚಿರತೆಗಳು ಬಂದಿರುವ ದಾಖಲೆಗಳು ಇಲ್ಲ. ಸ್ಥಳದಲ್ಲಿ ಹೆಜ್ಜೆ ಗುರುತುಗಳು ಚಿರತೆಯಂತೆ
ಗೋಚರಿಸುತ್ತದೆ, ಆದರೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೋನನ್ನು ಇಟ್ಟಿದ್ದೇವೆ. ಸ್ಥಳದಲ್ಲಿ ನಾಯಿಯನ್ನೂ ಕಟ್ಟಲಾಗಿದೆ ಎಂದಿದ್ದಾರೆ.
ಮಹಾಬಲ ಅವರು ಈ ಮೊದಲು ಸೋಮೇಶ್ವರ ಗ್ರಾಮದ ಪಿಲಾರಿನಲ್ಲಿ ಚಿರತೆ ಇರುವಿಕೆಯ ಬಗ್ಗೆ ಸ್ಥಳೀಯರು ದೂರಿ ಕೊಂಡಿದ್ದಾಗ ಇದೇ ರೀತಿಯ ಬೆಕ್ಕಿನ ಕಥೆಯನ್ನೇ ಹೇಳಿದ್ದರು. ಪಜೀರು ಪರಿಸರದಲ್ಲಿ ಸಾಕು ನಾಯಿಗಳು ಕಾಣೆಯಾಗಿದ್ದು ಚಿರತೆಯೇ ಒಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಇದೀಗ ಗ್ರಾಮಸ್ಥರ ಬೇಡಿಕೆ ಪರಿಗಣಿಸಿ ಅಧಿಕಾರಿಗಳು ಬೋನು ಇಟ್ಟಿದ್ದಾರೆ.
Ullal Pajir people panic of seeing leapord, forest officals say it's Marbled cat, keep bone for trap in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm